ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಏಪ್ರಿಲ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಗ್ರಾಹಕರು ಈ ರಜಾದಿನಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ, ಆರ್‌ಬಿಐ ಏಪ್ರಿಲ್ ತಿಂಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಾರದ ರಜೆಗಳು ಸೇರಿದಂತೆ ಬ್ಯಾಂಕ್ ಗಳು ಒಟ್ಟು 15 ದಿನಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ.
ಏಪ್ರಿಲ್ ತಿಂಗಳಲ್ಲಿ ವಾರದ ರಜೆಗಳು ಸೇರಿದಂತೆ ವಾರ್ಷಿಕ ಖಾತೆಗಳ ಕ್ಲೋಸಿಂಗ್, ಮಹಾವೀರ್ ಜಯಂತಿ, ಬಾಬು ಜಗಜ್ಜೀವನ್ ರಾಮ್ ಹುಟ್ಟುಹಬ್ಬ, ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ ಮುಂತಾದ ವಿಶೇಷ ದಿನಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ಸಾಲು-ಸಾಲು ರಜೆ ಘೋಷಿಸಲಾಗಿದೆ.

ಏಪ್ರಿಲ್ ತಿಂಗಳ ಬ್ಯಾಂಕ್ ರಜಾಪಟ್ಟಿ ಹೀಗಿದೆ:
ಏಪ್ರಿಲ್ 1: ಬ್ಯಾಂಕ್ ಗಳ ವಾರ್ಷಿಕ ಕ್ಲೋಸಿಂಗ್ ಹಿನ್ನೆಲೆಯಲ್ಲಿ ರಜೆ (ಐಜ್ವಾಲ್, ಶಿಲ್ಲಾಂಗ್, ಶಿಮ್ಲಾ ಹಾಗೂ ಚಂಡೀಗಢನಲ್ಲಿ ಬ್ಯಾಂಕ್ ಗಳು ತೆರೆದಿರುತ್ತವೆ).
ಏಪ್ರಿಲ್ 2: ಭಾನುವಾರ
ಏಪ್ರಿಲ್ 4: ಮಹಾವೀರ ಜಯಂತಿ (ಅಹಮದಾಬಾದ್, ಐಜ್ವಾಲ್, ಬೆಲ್ಪುರ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಜೈಪುರ, ಕಾನ್ಪುರ, ಕೋಲ್ಕತ್ತ, ಲಖ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ ಹಾಗೂ ರಾಂಚಿ)
ಏಪ್ರಿಲ್ 5: ಜಗಜ್ಜೀವನ ರಾಮ್ ಜಯಂತಿ (ಹೈದರಾಬಾದ್ ನಲ್ಲಿ ಬ್ಯಾಂಕ್ ಮುಚ್ಚಿರುತ್ತದೆ)
ಏಪ್ರಿಲ್ 7: ಗುಡ್ ಫ್ರೈಡೇ (ಅಗರ್ತಲಾ, ಅಹ್ಮದಾಬಾದ್, ಗುವಹಟಿ, ಜೈಪುರ, ಜಮ್ಮು, ಶಿಮ್ಲಾ ಹಾಗೂ ಶ್ರೀನಗರ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕ್ ಗಳು ಮುಚ್ಚಿರುತ್ತವೆ.)

ಏಪ್ರಿಲ್ 9: ಭಾನುವಾರ
ಏಪ್ರಿಲ್ 14: ಅಂಬೇಡ್ಕರ್ ಜಯಂತಿ (ಭೋಪಾಲ್, ನವದೆಹಲಿ, ರಾಯ್ಪುರ, ಶಿಲ್ಲಾಂಗ್ ಹಾಗೂ ಶಿಮ್ಲಾ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕ್ ಗಳು ಮುಚ್ಚಿರುತ್ತವೆ.)
ಏಪ್ರಿಲ್ 15: ವಿಶು, ಬೊಹಗ್, ಬಿಹು, ಹಿಮಾಚಲ ಪ್ರದೇಶ, ಬೆಂಗಾಲಿ ಹೊಸ ವರ್ಷ (ಅಗರ್ತಾಲ್, ಗುವಹಟಿ, ಕೊಚ್ಚಿ, ಕೋಲ್ಕತ್ತ, ಶಿಮ್ಲಾ ಹಾಗೂ ತಿರುವನಂತಪುರಂ)
ಏಪ್ರಿಲ್ 16: ಭಾನುವಾರ

ಏಪ್ರಿಲ್ 21: ಈದ್ -ಉಲ್-ಫಿತ್ರ (ತ್ರಿಪುರ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದಲ್ಲಿ ಬ್ಯಾಂಕ್ ಗಳು ಮುಚ್ಚಿರುತ್ತವೆ.)
ಏಪ್ರಿಲ್ 22: ನಾಲ್ಕನೇ ಶನಿವಾರ
ಏಪ್ರಿಲ್ 23:ಭಾನುವಾರ
ಏಪ್ರಿಲ್ 30: ಭಾನುವಾರ










Discussion about this post