ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಯೋಧ್ಯೆಯನ್ನು Ayodhya ನಡೆಯುತ್ತಿರುವ ರಾಮಲಲ್ಲಾ Ramalalla ಪ್ರಾಣಪ್ರತಿಷ್ಠಾಪನೆಯ ನೇರ ಪ್ರಸಾರಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿ ಉಂಟು ಮಾಡುವಂತಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ Supreme Court ಚಾಟಿ ಬೀಸಿ, ತಾಕೀತು ಮಾಡಿದೆ.
ಅಯೋಧ್ಯೆಯ ನೇರಪ್ರಸಾರಕ್ಕೆ ತಮಿಳುನಾಡು ಸರ್ಕಾರ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡುತ್ತಿದೆ ಎಂದು ಬಿಜೆಪಿ ಸುಪ್ರೀಂ ಕೋರ್ಟ್’ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೇ, ಇಂದೇ ಪ್ರತಿಷ್ಠಾಪನೆ ಇರುವುದರಿಂದ ತುರ್ತಾಗಿ ವಿಚಾರಣೆ ಮಾಡುವಂತೆ ಕೋರಲಾಗಿತ್ತು.
ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಾಣಪ್ರತಿಷ್ಠಾಪನೆಗೆ ಯಾವುದೇ ರೀತಿ ಚಿಲ್ಲರೆ ಕಾರಣಗಳನ್ನು ಕೊಟ್ಟು ಅಡ್ಡಿ ಉಂಟು ಮಾಡುವಂತಿಲ್ಲ ಎಂದು ನ್ಯಾ.ಸಂಜೀವ್ ಖನ್ನಾ, ದೀಪಾಂಕರ್ ದತ್ತಾ ಅವರಿದ್ದ ಪೀಠ ತಾಕೀತು ಮಾಡಿದೆ.
Also read: ಪ್ರಧಾನಿ ಮೋದಿ ಸ್ವತಃ ತಾವೇ ಚಿತ್ರೀಕರಿಸಿದ ಅಯೋಧ್ಯೆಯ ವೈಮಾನಿಕ ದೃಶ್ಯ ಹೇಗಿದೆ ನೋಡಿ
ನೇರ ಪ್ರಸಾರಕ್ಕೆ ಸರ್ಕಾರ ಯಾವುದೇ ರೀತಿಯಲ್ಲೂ ಅಡ್ಡಿ ಉಂಟು ಮಾಡುತ್ತಿಲ್ಲ ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post