ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆ Parliement Election ಸನಿಹವಾಗುತ್ತಿರುವಂತೆಯೇ ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ರಾಷ್ಟ್ರಮಟ್ಟದಲ್ಲಿ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾರಿ ನ್ಯಾಯ’ ಗ್ಯಾರಂಟಿ ಘೋಷಣೆ ಮಾಡಿದೆ.
Also read: ಕಾಂತೇಶ್, ಪ್ರತಾಪ್ ಸಿಂಹಗೆ ಟಿಕೇಟ್ ಮಿಸ್ | ಸಂಸದ ರಾಘವೇಂದ್ರ ರಿಯಾಕ್ಷನ್
ಯಾವೆಲ್ಲಾ ಗ್ಯಾರೆಂಟಿ ಘೋಷಣೆ?
- ಮಹಾಲಕ್ಷ್ಮಿ ಗ್ಯಾರಂಟಿ: ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಹಣಕಾಸಿನ ನೆರವು. ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು.
- ಅರ್ಧ ಜನಸಂಖ್ಯೆ, ಪೂರ್ಣ ಹಕ್ಕು: ಈ ಯೋಜನೆಯಡಿ ದೇಶದಾದ್ಯಂತ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡುವುದು.
- ಶಕ್ತಿ ಕಾ ಸಮ್ಮಾನ್: ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರ ಮಾಸಿಕ ಆದಾಯಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು.
- ಅಧಿಕಾರ್ ಮೈತ್ರಿ: ಮಹಿಳೆಯರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಸಹಾಯ ಮಾಡಲು ಪ್ರತಿ ಪಂಚಾಯತ್ ನಲ್ಲಿ ಪ್ಯಾರಾಲೀಗಲ್ ಅನ್ನು ನೇಮಕ.
- ಸಾವಿತ್ರಿಬಾಯಿ ಫುಲೆ ಹಾಸ್ಟೆಲ್: ಭಾರತ ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಟ ಪಕ್ಷ ಒಂದಾದರು ಮಹಿಳಾ ಹಾಸ್ಟೆಲ್ ನಿರ್ಮಾಣ. ಹಾಸ್ಟೆಲ್’ಗಳ ಸಂಖ್ಯೆ ದ್ವಿಗುಣ ಮಾಡುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post