ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಎಡಪಂಥೀಯ ಉಗ್ರವಾದದ (Left Wing Extremism) ನಿರ್ಮೂಲನೆಯತ್ತ ಗೃಹ ಸಚಿವ ಅಮಿತ್ ಶಾರವರ Amith Shah ಪ್ರಯತ್ನಗಳು ಉತ್ತೇಜಕ ಫಲಿತಾಂಶಗಳನ್ನು ನೀಡುತ್ತಿವೆ. ಪರಿಣಾಮವೆಂಬಂತೆ ಎಡಪಂಥೀಯ ಉಗ್ರವಾದದ ಹಿಂಸಾಚಾರಗಳನ್ನೊಳಗೊಂಡ ಘಟನೆಗಳು ಮತ್ತು ಸಂಬಂಧಿತ ಸಾವುಗಳು ನಿರಂತರವಾಗಿ ಕ್ಷೀಣಿಸುತ್ತಿವೆ. ಒಂದು ರೀತಿಯಲ್ಲಿ, ಈ ಪಿಡುಗಿನ ವಿರುದ್ಧದ ಅವರ ದೃಢವಾದ ಹೋರಾಟವು ವಿಜಯದ ಅಂತಿಮ ಹಂತ ತಲುಪಿದೆ.
ಅಧಿಕಾರ ವಹಿಸಿಕೊಂಡ ನಂತರ, ಶಾರವರು 2015 ರ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯಲ್ಲಿ ವಿವರಿಸಿರುವ ನೀತಿಗಳ ಅನುಷ್ಠಾನವನ್ನು, ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುತ್ತಿದ್ದಾರೆ. ಇದು ರಾಷ್ಟ್ರದಾದ್ಯಂತ ಎಡಪಂಥೀಯ ಉಗ್ರವಾದದ ಹಿಂಸಾಚಾರದಲ್ಲಿ ಸ್ಥಿರವಾದ ಇಳಿಕೆಗೆ ಕಾರಣವಾಗಿದೆ. ಭದ್ರತಾ-ಸಂಬಂಧಿತ ಕ್ರಮಗಳು, ಅಭಿವೃದ್ಧಿ ಯೋಜನೆಗಳು, ಸ್ಥಳೀಯ ಸಮುದಾಯಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಖಾತರಿಪಡಿಸುವುದು ಇತ್ಯಾದಿಗಳನ್ನು ಒಳಗೊಂಡ ಬಹು-ಹಂತದ ಕಾರ್ಯತಂತ್ರಗಳನ್ನು ಈ ನೀತಿಯು ರೂಪಿಸುತ್ತದೆ. ಹಾಗೇ ಎಡಪಂಥೀಯ ಗುಂಪುಗಳ ಹಣಕಾಸಿನ ಮೂಲಗಳನ್ನು ನಿರ್ಬಂಧಿಸಲು ಶಾ NIA ಮತ್ತು ED ಮೂಲಕ ಕಠಿಣ ಕ್ರಮಗಳನ್ನು ಪ್ರಾರಂಭಿಸಿದರು.

Also read: ಎ.10ರಂದು ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ
ಭೌಗೋಳಿಕ ಹಿಂಸಾಚಾರ ಹರಡುವಿಕೆಯ ಕುಸಿತವು ಭದ್ರತಾ ಸಂಬಂಧಿತ ವೆಚ್ಚಗಳ (SRE) ಯೋಜನೆಯಡಿಯಲ್ಲಿನ ಜಿಲ್ಲೆಗಳ ಸಂಖ್ಯೆಯ ಕುಸಿತದಲ್ಲಿ ಪ್ರತಿಫಲಿಸುತ್ತದೆ. SRE ವ್ಯಾಪ್ತಿಯಲ್ಲಿನ ಜಿಲ್ಲೆಗಳ ಸಂಖ್ಯೆಯು ಏಪ್ರಿಲ್ 2018 ರಲ್ಲಿ 126 ರಿಂದ 90 ಕ್ಕೆ ಕ್ಷೀಣಿಸಿದರೆ, ಜುಲೈ 2021 ರಲ್ಲಿ 70 ಕ್ಕೆ ಇಳಿಕೆಯಾಗಿದೆ.











Discussion about this post