ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಈಗಾಗಲೇ ಈಶಾನ್ಯ ರಾಜ್ಯಗಳ ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ಯಶಸ್ವಿಯಾಗಿ ನಡೆಸಲಾಗಿದ್ದು, ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕಾರ್ಯವಾಗಿದೆ ಎಂದರು.
ಕರ್ನಾಟಕ ಚುನಾವಣೆಗೆ Karnataka Election ಆಯೋಗ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಮೇ 24ರವರೆಗೂ ಕರ್ನಾಟಕ ವಿಧಾನಸಭೆ ಅಸ್ಥಿತ್ವದಲ್ಲಿ ಇರಲಿದೆ. ಅಷ್ಟರೊಳಗಾಗಿ ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಿದ್ದೇವೆ ಎಂದರು.
ಇನ್ನು, ಎಪ್ರಿಲ್ 1ಕ್ಕೆ 18ವರ್ಷ ತುಂಬುವವರಿಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಎಷ್ಟು ಮತದಾರರು ಅರ್ಹರಾಗಿದ್ದಾರೆ?
ಒಟ್ಟು ಮತದಾರರು:
ಪುರುಷ ಮತದಾರರು: 26,24,2561
ಮಹಿಳಾ ಮತದಾರರು 25,92,6319
80 ವರ್ಷ ಮೇಲ್ಪಟ್ಟ ಮತದಾರರು: 12,15,763
ಮೊದಲ ಬಾರಿಗೆ ಮತ ಚಲಾಯಿಸುವವರು: 9,17,241
ವಿಕಲಚೇತನ ಮತದಾರರು: 5,55,073
ತೃತೀಯ ಲಿಂಗಿ ಮತದಾರರು: 4,699
ಒಟ್ಟು ಮತಗಟ್ಟೆಗಳು: 58,282
ನಗರ ಪ್ರದೇಶದ ಮತಗಟ್ಟೆಗಳು: 24,053
ಗ್ರಾಮೀಣ ಮತಗಟ್ಟೆ: 34,219
ಸೂಕ್ಷö್ಮ ಮತಗಟ್ಟೆಗಳು: 12,000
ಶತಾಯುಷಿ ಮತದಾರರು: 16,000
ಪರಿಸರ ಸ್ನೇಹಿ ಮತಗಟ್ಟೆಗಳು: 400 ಕ್ಕೂ ಅಧಿಕ
ಗುಡ್ಡಗಾಡು ಜನರಿಗಾಗಿ ಮತಗಟ್ಟೆಗಳು: 40ಕ್ಕೂ ಅಧಿಕ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post