ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಹಿಜಾಬ್ ವಿವಾದದ #HijabRow ವಿಚಾರಣೆಯನ್ನು ರಾಜ್ಯ ಹೈಕೋರ್ಟ್ #HighCourt ಸೋಮವಾರಕ್ಕೆ ಮುಂದೂಡಿ ಅಂತಿಮ ತೀರ್ಪಿನವರೆಗೂ ತರಗತಿಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರ ಧರಿಸದಂತೆ ನಿನ್ನೆ ಸಂಜೆಯಷ್ಟೇ ಮಧ್ಯಂತರ ಆದೇಶ ನೀಡಿರುವ ಬೆನ್ನಲ್ಲೇ ಈ ಹೋರಾಟಗಾರರಿಗೆ ಸುಪ್ರಿಂ ಕೋರ್ಟ್’ನಲ್ಲಿ #SupremeCourt ಭಾರೀ ಹಿನ್ನಡೆಯಾಗಿದೆ.
ನಿನ್ನೆ ಸಂಜೆ ರಾಜ್ಯ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ವಕೀಲ ದೇವದತ್ ಕಾಮತ್ ಮೂಲಕ ವಿದ್ಯಾರ್ಥಿನಿಯರು ಇಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯಮೂರ್ತಿ ಎನ್.ವಿ. ರಮಣ #CJI ಅವರು, ಅರ್ಜಿದಾರರಿಗೆ ಚಾಟಿ ಬೀಸಿದರು.
ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದನ್ನೂ ಸಹ ನಾವು ಗಮನಿಸುತ್ತಿದ್ದೇವೆ. ಈ ವಿವಾದವನ್ನು ಸುಪ್ರೀಂ ಕೋರ್ಟ್‌ಗೆ ತಂದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡುವ ಉದ್ದೇಶ ನಿಮಗೆ ಇದೆಯೇ? ಎಂದು ಪ್ರಶ್ನಿಸಿದ ಮುಖ್ಯನ್ಯಾಯಮೂರ್ತಿಗಳು, ಇದು ಸಣ್ಣ ವಿಚಾರ. ಇದನ್ನು ದೊಡ್ಡ ವಿಚಾರ ಮಾಡಬೇಡಿ ಇದರ ತುರ್ತು ವಿಚಾರಣೆ ಸಾಧ್ಯವಿಲ್ಲ. ಹೈಕೋರ್ಟ್ ಮೊದಲು ಪ್ರಕರಣ ಇತ್ಯರ್ಥಪಡಿಸಲಿ. ಸದ್ಯ ನಾವು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಸಂವಿಧಾನದ #Constitution ರಕ್ಷಣೆ ವಿಚಾರವಾದರೆ ಸೂಕ್ತ ಸಂದರ್ಭದಲ್ಲಿ ನಾವು ಮಧ್ಯಪ್ರವೇಶಿಸುತ್ತೇವೆ ಎಂದರು.
ಕರ್ನಾಟಕ #Karnataka ಹೈಕೋರ್ಟ್ ನೀಡಿರುವ ಆದೇಶದ ವಿವರ ನಮಗೆ ತಿಳಿದಿಲ್ಲ. ಅದನ್ನು ಮೊದಲು ನಾವು ವಿಶ್ಲೇಷಣೆ ಮಾಡಬೇಕಿದೆ. ಅಲ್ಲದೇ, ಸಂವಿಧಾನದ ಹಕ್ಕುಗಳನ್ನು ಸೂಕ್ತ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಕ್ಷಿಸುತ್ತದೆ. ಇದೇ ವಿವಾದದಿಂದ ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆಯಾದರೆ ಆ ಸಂದರ್ಭದಲ್ಲಿ ನಾವು ಸೂಕ್ತ ನಿರ್ಧಾರ ಕೈಗೊಂಡು ಪರಿಹರಿಸುತ್ತೇವೆ. ಆದರೆ, ಈಗ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಅವರು, ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ಅಲ್ಲಿ ಮೊದಲು ವಿಚಾರಣೆ ನಡೆದು, ತೀರ್ಪು ಹೊರಬೀಳಲಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post