ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಶ್ರೀಲಂಕಾ Shrilanka ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿರುವುದರಿಂದ ಅಕ್ರಮ ಪ್ರವೇಶ ಮಾಡಲು ಶ್ರೀಲಂಕಾ ಪ್ರಜೆಗಳು ಯತ್ನಿಸುತ್ತಿರುವುದನ್ನು ಭಾರತೀಯ ಬೇಹುಗಾರಿಕಾ ವಿಭಾಗ ಪತ್ತೆ ಹಚ್ಚಿದೆ.
ಶ್ರೀಲಂಕಾದೊಂದಿಗೆ ಸಮುದ್ರ ಗಡಿ ಹಂಚಿಕೊಂಡಿರುವ ಭಾರತಕ್ಕೆ ಈಗ ಅಲ್ಲಿಂದ ವಲಸೆ ಬರುವವರ ಆತಂಕ ಎದುರಾಗಿದ್ದು, ಭಾರತದ ಕರಾವಳಿ ರಾಜ್ಯಗಳಿಗೆ ಕೇಂದ್ರ ಗುಪ್ತಚರ ಇಲಾಖೆ Department of Central Intelligent ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಮಾನವ ಕಳ್ಳಸಾಗಣೆಯ ಏಜೆಂಟರ ನೆರವಿನೊಂದಿಗೆ ತಮಿಳುನಾಡಿನ ಮೂಲಕ ಆಗಮಿಸುವ ಲಂಕನ್ನರು ಇಲ್ಲಿಂದ ಬೇರೆ ದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ. ಅಲ್ಲದೆ ಎಲ್‌ಟಿಟಿಇ ಉಗ್ರರು ಇನ್ನೂ ಲಂಕಾದಲ್ಲಿ ಆ್ಯಕ್ಟಿವ್ ಆಗಿರುವ ಕಾರಣ ಅವರೂ ಇದೇ ಸಂದರ್ಭದಲ್ಲಿ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಹಾಗೂ ಈಗಾಗಲೇ ಕೆಲವರು ತಮಿಳುನಾಡಿಗೆ ಅಕ್ರಮ ಪ್ರವೇಶ ಮಾಡಿದ್ದು ಕೇರಳ, ಕರ್ನಾಟಕದ ಕರಾವಳಿಗೂ ಬರಬಹುದು ಎಂಬ ಆತಂಕ ಎನ್ನಲಾಗಿದೆ.
ಈಗಾಗಲೇ ಗುಪ್ತಚರ ಇಲಾಖೆಯ ಸೂಚನೆಯ ಮೇರೆಗೆ ಕರಾವಳಿ ಕಾವಲು ಪೊಲೀಸ್(ಸಿಎಸ್‌ಪಿ) ಅಧಿಕಾರಿಗಳು ಸಭೆ ನಡೆಸಿ ಲಂಕನ್ನರು ಬಂದಿಳಿಯಬಹುದಾದ ತಾಣಗಳ ಮೇಲೆ ನಿಗಾ ಇರಿಸಿದ್ದಾರೆ. ಕರಾವಳಿ ಪ್ರದೇಶಗಳಾದ ಮಂಗಳೂರು, ಹೆಜಮಾಡಿ, ಮಲ್ಪೆ, ಭಟ್ಕಳ, ಗಂಗೊಳ್ಳಿ, ಕುಮಟಾ, ಹೊನ್ನಾವರ, ಬೇಲೆಕೇರಿ ಮತ್ತು ಕಾರವಾರಗಳಲ್ಲಿ 9 ಸಿಎಸ್‌ಪಿ ಠಾಣೆಗಳು ಇದ್ದು, ಅವೆಲ್ಲವನ್ನೂ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಸಿಎಸ್‌ಪಿ ಮೂಲಗಳು ತಿಳಿಸಿವೆ.
Also read: ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ: ಉಡುಪಿ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ
ಈ ಸಿಎಸ್‌ಪಿ ವ್ಯಾಪ್ತಿಯಲ್ಲಿ ಬರುವ ಮೀನುಗಾರರ ಜೊತೆ ಒಂದು ಹಂತದ ಸಭೆ ನಡೆಸಿ, ಕಡಲಿನಲ್ಲಿ ಅಪರಿಚಿತ ಬೋಟುಗಳು, ಮೀನುಗಾರರು ಕಂಡುಬಂದರೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ಸಾಗರ ರಕ್ಷಾ ದಳ (ಎಸ್‌ಆರ್‌ಡಿ) ಮತ್ತು ಮೀನುಗಾರ ಸಮಿತಿಗೂ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.ಮುನ್ನೆಚ್ಚರಿಕೆಯಾಗಿ ಮಂಗಳೂರಿಗೆ ಅಧಿಕೃತವಾಗಿ ಕೇರಳ ಕಡೆಯಿಂದ ಮೀನುಗಾರಿಕೆ ಬೋಟ್‌ಗಳು ಬರುವುದನ್ನು ತಡೆಹಿಡಿಯಲಾಗಿದೆ. ಜತೆಗೆ ಕರಾವಳಿ ಕಾವಲು ಪೋಲಿಸರಿಂದ ಕರಾವಳಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post