ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೆಹಲಿಯ ಪಿಎಂ ನಿವಾಸದಲ್ಲಿ ಪ್ರಧಾನಿ ಮೋದಿಯನ್ನು PM Modi ಭೇಟಿ ಮಾಡಿರುವ ಜಗ್ಗೇಶ್, Jaggesh ಆ ಭೇಟಿಗೆ ವಿಶೇಷ ಅರ್ಥವೊಂದನ್ನೂ ನೀಡಿದ್ದಾರೆ.
‘ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಾರ್ಚ್ 17ಕ್ಕೆ ನಟ ಜಗ್ಗೇಶ್ ಅವರ ಜನ್ಮದಿನವಾಗಿದ್ದು, ತಮ್ಮ 60ನೇ ವಸಂತವನ್ನು ಪೂರೈಸಲಿದ್ದಾರೆ. ಪ್ರತಿ ಬಾರಿಯೂ ಅವರು ತಮ್ಮ ಹುಟ್ಟು ಹಬ್ಬವನ್ನು ಮಂತ್ರಾಲಯದ ಗುರು ರಾಯರ ಸನ್ನಿಧಿಯಲ್ಲಿ ಆಚರಿಸುತ್ತಾರೆ. ಹಾಗಾಗಿ ಹುಟ್ಟು ಹಬ್ಬದ ಮೂರುದಿನದ ಮುಂಚೆಯೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
Also read: ನಾರಿಯ ಸಾರಥ್ಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್!
ಜಗ್ಗೇಶ್ ತಮ್ಮ ಕಿರಿಯ ಪುತ್ರ ಯತಿರಾಜ್, ಪತ್ನಿ ಪರಿಮಳಾ ಜೊತೆ ಪ್ರಧಾನಿಯನ್ನು ಭೇಟಿ ಮಾಡಿ, ಮಂತ್ರಾಲಯದಿಂದ ತೆಗೆದುಕೊಂಡು ಹೋಗಿದ್ದ ರಾಯರ ವಿಗ್ರಹ ಮತ್ತು ವಿಶೇಷ ಶಾಲನ್ನು ಮೋದಿಗೆ ಅರ್ಪಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಜಗ್ಗೇಶ್ ಪುತ್ರ ಹಾಗೂ ಪತ್ನಿಯ ಜೊತೆ ಸಲುಗೆಯಿಂದಲೇ ಮಾತನಾಡಿದ್ದಾರೆ. ಆ ಫೋಟೋಗಳನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post