ಕಲ್ಪ ಮೀಡಿಯಾ ಹೌಸ್
ನವದೆಹಲಿ: ಅಮೆರಿಕದ ರಾಯಭಾರ ಕಚೇರಿಗೆ ಚಾರ್ಜ್ ಡಿ ಅಫೈರ್ಸ್ ಆಗಿ ರಾಯಭಾರಿ ಡೇನಿಯಲ್ ಸ್ಮಿತ್ ನೇಮಕಗೊಂಡಿದ್ದು, ಫಾರಿನ್ ಸರ್ವೀಸಸ್ ಇನ್ಸ್ಟಿಟ್ಯೂಟ್ ನಿರ್ದೇಶಕರಾದ ಅವರು ಮಧ್ಯಂತರ ಚಾರ್ಜ್ ಡಿ ಅಫೇರ್ಸ್ ಆಗಿ ಕಾರ್ಯ ನಿರ್ವಹಿಸಲು ನವದೆಹಲಿಗೆ ತೆರಳಲಿದ್ದಾರೆ.
ಇತ್ತೀಚಿನವರೆಗೆ ಪ್ರಭಾರಿ ಸೆಕ್ರೆಟರಿ ಆಫ್ ಸ್ಟೇಟ್ ಮತ್ತು ಹಂಗಾಮಿ ಡೆಪ್ಯುಟಿ ಸೆಕ್ರೆಟರಿ ಆಫ್ ಸ್ಟೇಟ್ ಆಗಿ ಕಾರ್ಯನಿರ್ವಹಿಸಿದ ರಾಯಭಾರಿ ಸ್ಮಿತ್ ಅವರು ಅಂಬಾಸಡರ್ ವೃತ್ತಿಜೀವನದ ಅತ್ಯುನ್ನತ ವಿದೇಶಾಂಗ ಸೇವಾ ಶ್ರೇಣಿಯನ್ನು ಹೊಂದಿದ್ದಾರೆ.
ರಾಯಭಾರಿ ಸ್ಮಿತ್ ಅವರ ನೇಮಕವು ಭಾರತ ಸರ್ಕಾರ ಮತ್ತು ಭಾರತೀಯರಡೆಗೆ ಅಮೆರಿಕದ ಸಹಭಾಗಿತ್ವ ಮತ್ತು ಬಲವಾದ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಜಾಗತಿಕ ಸಾಂಕ್ರಾಮಿಕ ಪಿಡುಗಿನ ನಿವಾರಣೆಯೂ ಸೇರಿದಂತೆ ಉಭಯ ದೇಶಗಳ ಸಮಾನ ಆದ್ಯತೆಗಳ ಮುಂದುವರಿಕೆಯನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ಸಹಕಾರವನ್ನು ಮುಂಚೂಣಿಯಲ್ಲಿ ನಿಂತು ನಿಭಾಯಿಸಲಿದ್ದಾರೆ.
ರಾಯಭಾರಿ ಸ್ಮಿತ್ ಭಾರತದೊಂದಿಗೆ ಜತೆಗೂಡಿ ಕೆಲಸ ಮಾಡಲು ಬದ್ಧರಾಗಿದ್ದು, ಅಮೆರಿಕ ಭಾರತದೊಂದಿಗೆ ಕೈ ಜೋಡಿಸಿ ನಿಂತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post