ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಪಾಟ್ನಾ |
ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ಹತ್ಯೆಗೆ ಸಂಚು ರೂಪಿಸಿರುವ ಗುಮಾನಿಯ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಇಬ್ಬರನ್ನು ಬಂಧಿಸಿರುವುದು, ಆತಂಕಕ್ಕೆ ಕಾರಣವಾಗಿದೆ.
ಬಂಧಿತರನ್ನು ಜಾರ್ಖಂಡ್ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅವರ ಪತ್ನಿ ಅರ್ಥ ಪರ್ವೇಜ್ ಎಂದು ಗುರುತಿಸಲಾಗಿದೆ.
ಜುಲೈ 11ರಂದು ಖಚಿತ ಮಾಹಿತಿ ಮೇರೆಗೆ ಬಿಹಾರದ ನಯಾ ಟೋಲಾ ಪ್ರದೇಶದಲ್ಲಿ ದಾಳಿ ನಡೆಸಿ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಶಂಕಿತ ಭಯೋತ್ಪಾದಕರಿಂದ ಪಿಎಫ್‌ಐ ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Also read: ನೇರಳಕುಡಿಗೆ ಬಳಿ ಧರೆ ಕುಸಿತ: ಆಗುಂಬೆ-ಶೃಂಗೇರಿ ರಸ್ತೆ ಸಂಪರ್ಕ ಕಡಿತ
ಜುಲೈ 12ರ ಪಾಟ್ನಾ ಪ್ರವಾಸದ ವೇಳೆ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಆರೋಪಿಗಳು ಜುಲೈ 6 ಮತ್ತು 7ರಂದು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು. 2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಜಾರಿ ಮಾಡುವುದು ಈ ತಂಡದ ಗುರಿಯಾಗಿತ್ತು.
2047ಕ್ಕೆ ಭಾರತವನ್ನು ಇಸ್ಲಾಮಿಕ್ ರಾಷ್ಟç ಮಾಡುವ ಗುರಿಯ ಯೋಜನೆ ಹೊಂದಿರುವ 8 ಪುಟಗಳ ಪುಸ್ತಕವಾಗಿದ್ದು, ಇದನ್ನು ಗೌಪ್ಯ ಎಂದು ಅದರ ಮೇಲೆ ನಮೂದಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಹಿಂದೆ ಭಾರೀ ಷಡ್ಯಂತ್ರ ಹಾಗೂ ಜಾಲ ಹೊಂದಿರುವ ಕುರಿತಾಗಿ ತನಿಖೆ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post