ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆಗೆ Parliament Election ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದ್ದು, ಮೈಸೂರಿನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಿದೆ.
ಹಾಲಿ ಸಂಸದ ಪ್ರತಾಪ್ ಸಿಂಹ Prathap Simha ಅವರಿಗೆ ಈ ಬಾರಿಯ ಟಿಕೇಟ್ ಕೈ ತಪ್ಪಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ Yaduveer Krishnadutta Wadeyor ಮೈಸೂರು ಕ್ಷೇತ್ರ ಟಿಕೇಟ್ ಒಲಿದಿದೆ.
ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ಸಿಗುವುದು ಕಷ್ಟ ಎಂದೇ ಹಲವು ದಿನಗಳಿಂದ ಹೇಳಲಾಗಿತ್ತು. ಅಲ್ಲದೇ, ರಾಜವಂಶಸ್ತರಾದ ಯದುವೀರ ಅವರ ಸ್ಪರ್ಧೆಗೆ ಬಹಳಷ್ಟು ಅಸಮಾಧಾನವೂ ಸಹ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ಕೈತಪ್ಪಿ, ಯದುವೀರ್ ಅವರ ಹೆಸರು ಘೋಷಣೆಯಾಗಿದೆ.
Also read: ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ರಿಲೀಸ್ | ರಾಜ್ಯದ ಯಾರಿಗೆಲ್ಲಾ ಟಿಕೇಟ್? ಇಲ್ಲಿದೆ ಮಾಹಿತಿ
ಟಿಕೇಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರ ಮುಂದಿನ ನಡೆಯೇನು ಎಂಬುದನ್ನು ಕಾದುನೋಡಬೇಕಿದೆ. ಆದರೆ, ನಿನ್ನೆ ಹಾಗೂ ಇಂದು ಮಾತನಾಡಿದ್ದ ಸಿಂಹ, ನಾನು ಸಾಯುವವರೆಗೂ ಮೋದಿ ಅಭಿಮಾನಿ. ಯಾರಿಗೇ ಟಿಕೇಟ್ ಕೊಟ್ಟರೂ ಮೋದಿ ಅವರಿಗಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದಿದ್ದರು.
ಕೇಂದ್ರ ಬಿಜೆಪಿ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 20 ಹೆಸರುಗಳನ್ನು ಘೋಷಣೆ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post