ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಮನಗರವನ್ನು ಬೆಂಗಳೂರಿನ ಭಾಗ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಕನಸಿಗೆ ಕೇಂದ್ರ ಗೃಹ ಇಲಾಖೆ ತಣ್ಣೀರು ಎರಚಿದ್ದು, ತವರು ಜಿಲ್ಲೆಯ ವಿಷಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ #D K Shivakumar ತೀವ್ರ ಹಿನ್ನಡೆಯುಂಟಾಗಿದೆ.
ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ 2024 ರ ಜುಲೈ ನಲ್ಲಿ ರಾಜ್ಯ ಸಂಪುಟ ಸಭೆ ಅನುಮೋದನೆ ನೀಡಿತ್ತು. ರಾಮನಗರ ಮರುಣಾಮಕರಣ ಪ್ರಸ್ತಾವನೆಯನ್ನು ಮೊದಲು ಡಿಕೆ ಶಿವಕುಮಾರ್ ಮುಂದಿಟ್ಟಿದ್ದರು. ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ಅದನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗಿತ್ತು.
Also read: ಪತಿಯನ್ನು ಹತ್ಯೆಗೈದ ಪತ್ನಿ | ದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್‌ನಿಂದ ಸೀಲ್!

ಕೇಂದ್ರ ಯಾವ ಆಧಾರದ ಮೇಲೆ ಈ ಪ್ರಸ್ತಾವನೆಯನ್ನು ನಿರಾಕರಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಜಿಲ್ಲೆಯ ಹೆಸರನ್ನು ಬದಲಾಯಿಸಲು ಸ್ಥಳೀಯ ನಿವಾಸಿಗಳ ವಿರೋಧವನ್ನು ಕೇಂದ್ರವು ಉಲ್ಲೇಖಿಸಿದೆ ಎಂಬ ಅಂಶ ಈಗ ಬಹಿರಂಗವಾಗಿದೆ. ವಿರೋಧವನ್ನು ಕಡೆಗಣಿಸಿ ನಿರ್ಧಾರವನ್ನು ಮುಂದುವರಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗಬಹುದು ಎಂದು ಗೃಹ ಇಲಾಖೆ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post