ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಲ್ಲಿನ 25 ವರ್ಷದ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ವೀಡಿಯೋ ಮಾಡುತ್ತಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರ ಅತಿ ವೇಗದ ರಕ್ಷಣಾ ಕಾರ್ಯದಿಂದ ಆಕೆಯ ಜೀವ ಉಳಿಸಿರುವ ಘಟನೆ ರಾಷ್ಟ್ರದ ರಾಜಧಾನಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ವೀಡಿಯೋ ಮಾಡುತ್ತಲೇ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಪ್ರಯತ್ನ ನಡೆಸಿದ್ದರು.
ಆದರೆ, ಈ ವೀಡಿಯೋವನ್ನು ಗಮನಿಸಿದ ದೆಹಲಿ ಪೊಲೀಸರು, ಉತ್ತರ ವಿಭಾಗದ ಡಿಸಿಪಿ ಸಾಗರ್ ಸಿಂಗ್ ಖಲ್ಸಿ ಮಾರ್ಗದರ್ಶನಲ್ಲಿ ಕೇವಲ ಎಂಟೇ ನಿಮಿಷದಲ್ಲಿ ಯುವತಿ ಇದ್ದ ಸ್ಥಳವನ್ನು ತಲುಪಿ ಆಕೆಯನ್ನು ರಕ್ಷಿಸಿದ್ದಾರೆ. ಇದೇವೇಳೆ ಆರೋಗ್ಯಧಿಕಾರಿ ರಾಜೇಂದ್ರ ಪ್ರಸಾದ್ ಅವರನ್ನು ಒಳಗೊಂಡ ಪೊಲೀಸ್ ಅಧಿಕಾರಿಗಳ ತಂಡ ಲೊಕೇಷನ್ ಮೂಲಕ ಎಂಟು ನಿಮಿಷದಲ್ಲಿ ತಲುಪಿದ್ದಾರೆ.
ನಿನ್ನೆ ರಾತ್ರಿ 9:55ಕ್ಕೆ ವೀಡಿಯೋ ಗಮನಿಸಿದ ಪೊಲೀಸರು ಆಕೆ ಇದ್ದ ಸ್ಥಳಕ್ಕೆ ತಲುಪಿದ್ದು, 10ಗಂಟೆ 2 ನಿಮಿಷಕ್ಕೆ ಆಕೆಯನ್ನು ರಕ್ಷಿಸಿದ ಪೊಲೀಸರು ತತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post