ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಶಿವಮೊಗ್ಗ |
ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಇಂದು ಕನ್ನಡದಲ್ಲಿ ಮಾತು ಆರಂಭಿಸಿದ ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಅವರು, ಶರಾವತಿ ಮುಳಗಡೆ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದಾರೆ.
ಲೋಕಸಭೆಯಲ್ಲಿಂದು ಕನ್ನಡದಲ್ಲೇ ಮಾತನಾಡಿದ ಅವರು, ಹಲವು ವರ್ಷಗಳಿಂದ ಕಾಡುತ್ತಿರುವ ಶರಾವತಿ ಮುಳಗಡೆ ಸಂತ್ರಸ್ತರ ವಿಷಯವನ್ನು ಪ್ರಸ್ತಾಪಿಸಿದರು.
ಸ್ವತಂತ್ರ ಬಂದು 77 ವರ್ಷಗಲಾಗಿದ್ದು, ಸಂವಿಧಾನ ಬಂದು 75 ವರ್ಷಗಳಾಗಿದೆ. ಆದರೆ ಈ ವಿಚಾರವಾಗಿ ಶರಾವತಿ ಜಲ ವಿದ್ಯುತ್ ಯೋಜನೆ #Sharavathi Hydro Power Project ಸಂತಸ್ಥರ ಸಮಸ್ಯೆ ಇನ್ನೂ ಇದೆ. ಈ ಸಮಸ್ಯೆ 75 ವರ್ಷಗಳಿಂದಲೂ ಇದೆ. ಶರಾವತಿ ಜಲ ವಿದ್ಯುತ್ ಯೋಜನೆ 1958-64 ರ ನಡುವೆ ನಿರ್ಮಾಣವಾಗುತ್ತದೆ. ಸಾವಿರಾರು ಎಕರೆ, 4 ರಿಂದ 5 ಸಾವಿರ ಕುಟುಂಬಗಳು, ರೈತರ ಕೃಷಿ ಭೂಮಿ ಇದರಿಂದ ಮುಳುಗಡೆಯಾಗುತ್ತದೆ ಎಂದು ಸದನಕ್ಕೆ ತಿಳಿಸಿದರು.
Also read: ಚಿಕ್ಕಮಗಳೂರು | ಆಟವಾಡುತ್ತಾ ಬಾವಿಗೆ ಬಿದ್ದ ಇಬ್ಬರು ಕಂದಮ್ಮಗಳು ದಾರುಣ ಸಾವು
ಈ ವಿದ್ಯುತ್ ಯೋಜನೆಯಿಂದ ಇಡೀ ದೇಶಕ್ಕೆ ವಿದ್ಯುತ್ ಕೊಡುವಂತಹ ಕೆಲಸವಾಗಿದೆ. ಇದಕ್ಕೆ ಸಂತ್ರಸ್ತರೂ ಸಹ ಕಾರಣರಾಗಿದ್ದಾರೆ. ಆದರೆ ಈಗಲೂ ಕೂಡ ಆ ಸಂತಸ್ತರಿಗೆ ನ್ಯಾಯ ಸಿಕ್ಕಿಲ್ಲ ಎಂದರು.
ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿ ಬರುವಂತಹ ಮುಂಚೆ ಅವರಿಗೆ ಭೂಮಿಯನ್ನು ಕೊಡುವಂತಹ ಪ್ರಯತ್ನ ಹಿಂದಿನ ರಾಜ್ಯ ಸರ್ಕಾರಗಳು ಮಾಡಿಲ್ಲ ಎಂದು ಇನ್ನಿತರ ವಿಷಯವನ್ನು ಪ್ರಸ್ತಾಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post