ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಉಗ್ರರ ತರಬೇತಿ ತಾಣವನ್ನಾಗಿ ಬಳಸುತ್ತಿದ್ದ ಕೋಳಿ ಫಾರಂ ಅನ್ನು ಎನ್’ಐಎ NIA ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್’ನಲ್ಲಿ ನಡೆದಿದೆ.
ಐಎಸ್ ಪ್ರೇರಿತ ಭಯೋತ್ಪಾದಕ ಸಂಘಟನೆ ಸುಫಾ ಸದಸ್ಯರು ಈ ಕೋಳಿ ಫಾರಂನ್ನು ತಮ್ಮ ತರಬೇತಿ ತಾಣವನ್ನಾಗಿ ಬಳಸುತ್ತಿರುವುದು ಬಹಿರಂಗಗೊಂಡಿದ್ದು, ಇಲ್ಲಿಗೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ತಂಡ ರಾಜಸ್ಥಾನದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಕೋಳಿ ಫಾರ್ಮ್ ಅನ್ನು ತರಬೇತಿ ತಾಣವಾಗಿ ಬಳಸುತ್ತಿತ್ತು ಎನ್’ಐಎ ಜಪ್ತಿ ಮಾಡಿದ ಆಸ್ತಿಯು ಮಧ್ಯಪ್ರದೇಶದ ರತ್ಲಾಮ್ ಹಳ್ಳಿಯಲ್ಲಿದ್ದು ಇಮ್ರಾನ್ ಖಾನ್ ಒಡೆತನದಲ್ಲಿತ್ತು. ಈ ಫಾರ್ಮ್ ಅನ್ನು ಉಗ್ರರಿಗೆ ಶಸ್ತ್ರಾಸ್ತ್ರ ಬಳಕೆ ತರಬೇತಿ, ಮತ್ತು ಐಇಡಿ ತಯಾರಿ ಕೇಂದ್ರವಾಗಿ ಬಳಕೆ ಮಾಡುತ್ತಿತ್ತು.
2022ರ ಸೆ.22ರಂದು ಇಮ್ರಾನ್ ಖಾನ್ ಮತ್ತು ಇತರ 10 ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಆರೋಪಿಗಳಿಂದ ಸ್ಫೋಟಕಗಳು ಮತ್ತು ಐಇಡಿ ತಯಾರಿಕೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post