ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಂಸತ್ತಿನಲ್ಲಿ ಅಶಿಸ್ತು ತೋರಿದ ಇನ್ನಿಬ್ಬರು ಸಂಸದರನ್ನು ಅಮಾನತು ಮಾಡಲಾಗಿದ್ದು, ಸಸ್ಪೆಂಡ್ ಆದ ಎಂಪಿಗಳ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ನಿಯಮ ಮೀರಿ ಸಂಸತ್ತಿನಲ್ಲಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್(ಎA)ನ ಥಾಮಸ್ ಚಾಜಿಕಾಡನ್ ಮತ್ತು ಸಿಪಿಎಂ ಪಕ್ಷದ ಎಎಂ ಆರಿಫ್ ಅವರುಗಳನ್ನು ಅಮಾನತು ಮಾಡಲಾಗಿದೆ.
ಇಂದು ಅಮಾನತುಗೊಂಡಿರುವ ಇಬ್ಬರು ಸಂಸದರು ಪ್ಲೆಕಾರ್ಡ್ ಪ್ರದರ್ಶಿಸಿ ಸದನದ ಬಾವಿಗೆ ಪ್ರವೇಶಿಸಿದ್ದರು. ಈ ಕಾರಣಕ್ಕಾಗಿ ಇಬ್ಬರನ್ನೂ ಸಹ ಅಮಾನತು ಮಾಡಲಾಗಿದೆ.
Also read: ದೇಶದಲ್ಲಿ ಸಿಎಎ ಜಾರಿ ನಿಶ್ಚಿತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ
ಡಿ.4 ರಂದು ಆರಂಭವಾದ ಅಧಿವೇಶನದಲ್ಲಿ ಡಿ. 14 ರಂದು 14 ಸಂಸದರು, ಸೋಮವಾರ 78, ಮಂಗಳವಾರ 49 ಮತ್ತು ಇಂದು ಇನ್ನೂ ಇಬ್ಬರನ್ನು ಅಮಾನತುಗೊಳಿಸಲಾಗಿದ್ದು, ಈವರೆಗೂ ಒಟ್ಟು 143 ಸಂಸದರನ್ನು ಸಸ್ಪೆಂಡ್ ಮಾಡಲಾಗಿದೆ.
ಡಿ.22ರಂದು ಸಂಸತ್ ಚಳಿಗಾಲದ ಅಧಿವೇಶನ ಕೊನೆಗೊಳ್ಳಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















