ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜಿ 20 ಶೃಂಗಸಭೆಯಲ್ಲಿ G20summit ಭಾಗವಹಿಸಲು ಆಗಮಿಸಿದ ವಿಶ್ವ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ PM Narendra Modi ಹಸ್ತ ಲಾಘವ ನೀಡಿ ಸ್ವಾಗತಿಸಿದರು.
ಬೆಳಗ್ಗೆ 9.30ರಿಂದಲೇ ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪ ಬಳಿ ವಿಶ್ವ ನಾಯಕರ ಆಗಮನ ಪ್ರಾರಂಭವಾಗಿದ್ದು, ಜಿ 20 ನಾಯಕರ ಶೃಂಗಸಭೆಯ ಅಧಿವೇಶನದಲ್ಲಿ ಒಂದು ಭೂಮಿ ಪ್ರಮುಖ ಚರ್ಚೆಯ ವಿಷಯವಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ ಜಿ20 ಶೃಂಗಸಭೆಯ ವಿಷಯವು ‘ವಸುಧೈವ ಕುಟುಂಬಕಂ’ Vasudaiva Kutumbakam ‘ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ’ ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ. ಹಾಗೂ ಈ ಅಧಿವೇಶನವು ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸಾಧ್ಯವಾದಷ್ಟು ಬೇಗ ಜಾಗತಿಕ ನಿವ್ವಳ ಶೂನ್ಯ ಹೊರಸೂಸುವಿಕೆಯ ಕಾರ್ಯಸೂಚಿಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮುಖ್ಯಸ್ಥ, ಹಣಕಾಸು ಸ್ಥಿರತೆ ಮಂಡಳಿ ಅಧ್ಯಕ್ಷ, ಐಎಲ್‌ಒ ಮಹಾನಿರ್ದೇಶಕರು, ಐಎಂಎಫ್ ಅಧ್ಯಕ್ಷರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಆಸ್ಟ್ರೇಲಿಯಾದ ಮಾಜಿ ಎಫ್‌ಎಂ ಆಸ್ಟ್ರೇಲಿಯಾ, ಡಬ್ಲ್ಯುಟಿಒ ಮಹಾನಿರ್ದೇಶಕ ನಾಗೋಜಿ ಒಕೊಂಜಿ ಜಿ ಜಿ 20 ಶೃಂಗಸಭೆಗೆ ಆಗಮಿಸಿದ್ದಾರೆ.
ಸೆಪ್ಟೆಂಬರ್ 10 ಜಿ 20 ಶೃಂಗ ಸಭೆಯ ವೇಳಾಪಟ್ಟಿ
- 8.15ರಿಂದ 9ರವರೆಗೆ ರಾಜ್‌ಘಾಟ್ ಗೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ. ರಾಜ್‌ಘಾಟ್‌ನಲ್ಲಿರುವ ನಾಯಕರ ಲಾಂಜ್‌ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುತ್ತಾರೆ.
- 9-9:20ರ ನಡುವೆ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ
- 9:20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್‌ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕ ಮೋಟರ್‌ಕೇಡ್‌ಗಳಲ್ಲಿ ಭಾರತ ಮಂಟಪಕ್ಕೆ ನಿರ್ಗಮನ.
- 9:40-10:15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.
- 10:15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಮರ ನೆಡುವ ಕಾರ್ಯಕ್ರಮ.
- 10:30-12.30ರವರೆಗೆ ಸೆಷನ್ III: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ ಕುರಿತು ಸಮಾವೇಶ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post