ಹೊಸಪೇಟೆ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್’ನಲ್ಲಿ ಸಂಭ್ರಮ, ಸಡಗರ ಮತ್ತು ಸಂತಸದಿಂದ ದೀಪಾವಳಿಯನ್ನು ಆಚರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಕಾರ್ಖಾನೆಯ ಆವರಣದಲ್ಲಿ ದೀಪಾವಳಿಯನ್ನು ಆಚರಣೆ ಮಾಡುವ ವ್ಯವಸ್ಥೆಯನ್ನು ಕಂಪನಿಯು ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿದ್ದು, ವಿಶೇಷ ಎಂದರೆ, ಪರಿಸರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಯಾವುದೇ ಪಟಾಕಿಯ ಗಲಾಟೆ ಇಲ್ಲದೆ ಕೇವಲ ಮಣ್ಣಿನಿಂದ ಮಾಡಿದಂತಹ ದೀಪಗಳಲ್ಲಿ ಕುಟುಂಬದ ಸದಸ್ಯರು ದೀಪವನ್ನು ಹಚ್ಚುವುದರ ಮೂಲಕ ದೀಪಾವಳಿಯನ್ನು ಬರಮಾಡಿಕೊಳ್ಳಲಾಯಿತು. ಸಾಯಂಕಾಲ 5 ಗಂಟೆಗೆ ಪ್ರಾರಂಭವಾದ ಈ ದೀಪಾವಳಿ ಹಬ್ಬದ ವಾತಾವರಣ ರಾತ್ರಿ 10.30ಕ್ಕೆ ಮುಕ್ತಾಯವಾಯಿತು.
ಕಂಪೆನಿಯಲ್ಲಿನ ಹಬ್ಬದ ಸಂಭ್ರಮದಲ್ಲಿ ಉದ್ಯೋಗಿಗಳ ಕುಟುಂಬಸ್ಥರೂ ಸಹ ಭಾಗಿಯಾಗಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಮಿಷನ್ ಮಂಗಳ ಸಾಂಸಾರಿಕ ಚಲನಚಿತ್ರವನ್ನು ಆಡಿಟೋರಿಯಂನಲ್ಲಿ ಪ್ರದರ್ಶನ ಮಾಡಲಾಯಿತು.
ವಿವಿಧ ಬಣ್ಣಬಣ್ಣದ ರಂಗೋಲಿಗಳನ್ನು ಚಿತ್ರಿಸಿ ಮಧ್ಯಭಾಗದಲ್ಲಿ ಮಣ್ಣಿನ ಹಣತೆ ದೀಪಗಳನ್ನು ಇಟ್ಟು ವಿಶೇಷವಾಗಿ ಸಿಂಗರಿಸಲಾಗಿತ್ತು. ಕಾರ್ಖಾನೆಯ ಹಿರಿಯ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆ ಮತ್ತು ಶ್ರೀಮತಿ ಕಮಲಾ ಗುಮಾಸ್ತೆಯವರು ದೀಪ ಹಚ್ಚುವುದರ ಮೂಲಕ ದೀಪಾವಳಿಯ ಸಂತಸ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಆರ್.ವಿ. ಗುಮಾಸ್ತೆ ಅವರು, ನಮ್ಮೆಲ್ಲಾ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ದೀಪಾವಳಿಯ ಶುಭಾಶಯಗಳು. ಹೊಸ ಆಡಳಿತ ಕಚೇರಿ ಪ್ರಾರಂಭವಾದ ದಿನದಿಂದಲೂ ಆಡಿಟೋರಿಯಂನಲ್ಲಿ ಒಟ್ಟಾರೆ ಎಲ್ಲರೂ ಕುಳಿತು ಚಲನಚಿತ್ರ ನೋಡುವ ಬಯಕೆಯನ್ನು ಈ ದಿನ ನೆರವೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಆಡಿಟೋರಿಯಂನಲ್ಲಿ ಉತ್ತಮವಾದ ಚಲನಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳು ಕುಟುಂಬವರ್ಗದವರು ಸಂತಸವಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಈ ವಿಶೇಷ ಕಾರ್ಯಕ್ರಮಕ್ಕೆ ಮೊದಲಿಗರಾಗಿ ಆಗಮಿಸಿದ ಮತ್ತು ಸಾಂಪ್ರದಾಯಿಕ ಉಡುಗೆ ಹಾಕಿಕೊಂಡು ಬಂದಂತಹ ಉದ್ಯೋಗಿಗಳಿಗೆ ಬಹುಮಾನಗಳನ್ನು ನೀಡಿದ್ದು ವಿಶೇಷವಾಗಿತ್ತು.
ಎನ್.ಬಿ. ಏಕತಾರೆ ಪ್ರೆಸಿಡೆಂಟ್, ಹಣಕಾಸು ವಿಭಾಗದ ಮುಖ್ಯಸ್ಥರಾದ ಶ್ರೀ ಆರ್.ಎಸ್ ಶ್ರೀವತ್ಸನ್, ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಶ್ರೀ ಪಿ. ನಾರಾಯಣ ಮತ್ತು ಬೀಡು ಕಬ್ಬಿಣ, ಎರಕ ವಿಭಾಗ ಮತ್ತು ಕ್ವಾಲಿಟಿ ವಿಭಾಗದ ಉಪಾಧ್ಯಕ್ಷರುಗಳು, ಹಿರಿಯ ಅಧಿಕಾರಿಗಳು, ಅವರವರ ಕುಟುಂಬ ವರ್ಗದ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಎಲ್ಲರ ಜೊತೆಗೆ ಸಂಭ್ರಮ ಸಡಗರ ಹಾಗೂ ಸಂತೋಷದಿಂದ ದೀಪಾವಳಿಯ ದೀಪಗಳನ್ನು ಹಚ್ಚುವುದರ ಮೂಲಕ ಹಬ್ಬವನ್ನು ಬರಮಾಡಿಕೊಳ್ಳಲಾಯಿತು.
ವಿವಿಧ ಬಣ್ಣ ಬಣ್ಣದ ಆಕಾಶಬುಟ್ಟಿಗಳನ್ನು ಹಾಕಿ ವಿವಿಧ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿ, ರಂಗುರಂಗಿನ ರಂಗೋಲಿಗಳನ್ನು ಹಾಕುವುದರ ಮೂಲಕ, ಮಧ್ಯೆ ದೀಪವನ್ನು ಹಚ್ಚಿದ ದೃಶ್ಯ ಕಣ್ಣ ಮುಂದೆ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಉದ್ಯೋಗಿಗಳು ಒಟ್ಟಾಗಿ ಸೇರಿ ಸಾಂಪ್ರದಾಯಿಕ ಸಿಹಿ ಊಟ ಮಾಡಲಾಯಿತು.
ಪ್ರತಿವರ್ಷವೂ ನಡೆಯುವ ದೀಪಾವಳಿ ಹಬ್ಬವನ್ನು ಪ್ರಾರಂಭದಲ್ಲಿಯೇ ಸಡಗರದಿಂದ ಆಚರಿಸಿ ಕಾರ್ಖಾನೆಗೆ ರಜೆ ನೀಡಿ ಕುಟುಂಬವರ್ಗದವರು ಮನೆಯಲ್ಲಿ ದೀಪಾವಳಿಯನ್ನು ಆಚರಿಸುವಂತಹ ಪದ್ಧತಿ ಕಾರ್ಖಾನೆ ಪ್ರಾರಂಭವಾದ ದಿನದಿಂದಲೂ ನಡೆಸಿಕೊಂಡು ಬಂದಿದೆ.
ಪ್ರತಿವರ್ಷ ವಿಭಿನ್ನ ರೀತಿಯಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪರಿಸರಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದರ ಮೂಲಕ ಶಬ್ದಮಾಲಿನ್ಯ, ವಾಯುಮಾಲಿನ್ಯ, ಪರಿಸರ ಮಾಲಿನ್ಯವನ್ನು ತಡೆಗಟ್ಟಿ, ಕೇವಲ ಸಿಹಿ ಹಂಚಿಕೆ, ಸಂತೋಷ ಹಂಚಿಕೆ ಹಾಗೂ ಬಾಂಧವ್ಯ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಈಗಾಗಲೇ ಹೊಸಪೇಟೆ, ಕೊಪ್ಪಳ ಹಾಗೂ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿರುವ ಕಿರ್ಲೋಸ್ಕರ್ ಸಮೂಹ ಸಂಸ್ಥೆ ಹಾಗೂ ಲೇಡೀಸ್ ಕ್ಲಬ್, ಪ್ರತಿವರ್ಷ ಹೊಸ ಹೊಸ ಯೋಜನೆಗಳೊಂದಿಗೆ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಈ ಭಾಗದಲ್ಲಿ ಗಮನಾರ್ಹವಾದ ಬದಲಾವಣೆಗೆ ಮುಂದಾಗಿದ್ದಾರೆ.
ಕುಟುಂಬದ ಮಹಿಳಾ ಸದಸ್ಯರುಗಳು ಮತ್ತು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ ಕಾರ್ಯಕ್ರಮವನ್ನು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದರು.
ಉದ್ಯೋಗಿಗಳ ಅನುಕೂಲಕ್ಕಾಗಿ ಹೊಸಪೇಟೆ-ಕೊಪ್ಪಳ ಭಾಗದಿಂದ ಬರುವಂತಹ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು ಮತ್ತು ಸುರಕ್ಷತೆಗಾಗಿ ಉತ್ತಮವಾದ ಸುರಕ್ಷತಾ ಕ್ರಮಗಳನ್ನು ಮಾಡಲಾಗಿತ್ತು.
ಕಂಪೆನಿಯ ದೀಪಾವಳಿ ಶುಭಾಶಯಗಳು:
ಪಟಾಕಿ ಹಚ್ಚಬೇಡಿ, ಹಚ್ಚುವುದಾದರೆ ಸುರಕ್ಷತೆಗೆ ಗಮನ ನೀಡಿ, ಮಕ್ಕಳನ್ನು ಒಂಟಿಯಾಗಿ ಮುಂದೆ ಬಿಡಬೇಡಿ. ಪಟಾಕಿಗಳನ್ನು ಹಚ್ಚುವಾಗ ಮೂಕಪ್ರಾಣಿಗಳನ್ನು ಮತ್ತು ಅಕ್ಕ ಪಕ್ಕದ ಮನೆಯಲ್ಲಿ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದವರ ಮೇಲೆ ಗಮನದಲ್ಲಿಟ್ಟುಕೊಂಡು ಪಟಾಕಿ ಹಚ್ಚಿ. ಒಂದು ದಿನದ ಸಂತಸ ಬೇರೆಯವರಿಗೆ ಹಾನಿ ಮಾಡಬಾರದು.
ಪರಿಸರ ಉಳಿಸಿ, ಸಿಹಿ, ಸಂತೋಷ, ಬಾಂಧವ್ಯ ಹೆಚ್ಚಿಸಿಕೊಂಡು ದೀಪಾವಳಿ ಅಚರಿಸಿ.
ಶುಭಾಶಯಗಳು
ವಿಶೇಷ ವರದಿ: ಮುರಳೀಧರ್ ನಾಡಿಗೇರ್, ಹೊಸಪೇಟೆ
Get In Touch With Us info@kalpa.news Whatsapp: 9481252093, 94487 22200
Discussion about this post