ಚೆನ್ನಾಂಬಿಕಾ ಫಿಲ್‌ಮ್ಸ್ಂ ಅಡಿಯಲ್ಲಿ ನಿಖಲ್‌ಕುಮಾರ್ ನಾಯಕತ್ವದ ನೂತನ ಚಿತ್ರಕ್ಕೆ ಮೈಸೂರು ನಾರ್ಥ್ ಬ್ಯಾಂಕ್ ನಲ್ಲಿ ಭರ್ಜರಿ ಚಿತ್ರೀಕರಣ ನಡೆದಿದೆ.
ಇಲ್ಲಿನ ಗದ್ದೆಯೊಳಗೆ ನಡೆಯುತ್ತಿರುವ ಆಕ್ಷನ್ ಎಪಿಸೋಡ್ ಗೆ ಥೌಸೆಂಡ್ ಫ್ರೇಮ್ಸ್ ಹೈಸ್ಪೀಡ್ ಸ್ಲೋ ಮೋಷನ್ ಫ್ಯಾಂಟಮ್ ಕ್ಯಾಮೆರಾವನ್ನು ಬಳಸಲಾಗಿದೆ.
ಸುಮಾರು ಐವತ್ತು ಜನ ಫೈಟರ್ಸ್ ಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದ್ದು, ಈ ಆ್ಯಕ್ಷನ್ ಸೀನ್‌ಗೆ ಛಾಯಾಗ್ರಾಹಕರಾದ ಜೆ. ಸ್ವಾಮಿ ಜೊತೆಯಲ್ಲಿ ಗಿರೀಶ್ ಗೌಡ ಹಾಗೂ ರಾಮ್ ರೆಡ್ಡಿ ಪಾಲ್ಗೊಂಡಿದ್ದಾರೆ.
ಸುಮಾರು ಹತ್ತು ದಿನಗಳ ಕಾಲ ನಾಯಕನ ಇಂಟ್ರೋಡಕ್ಷನ್ ಫೈಟ್ ಅನ್ನು ಹಳ್ಳಿ ಸೊಗಡಿನಲ್ಲಿ ಚಿತ್ರೀಕರಿಸಲಾಗುತ್ತಿದೆ.
ಶರತ್ ಕುಮಾರ್, ರವಿಶಂಕರ್, ಆದಿತ್ಯ ಮೆನನ್, ಮಧುಬಾಲ, ಜ್ಯೋತಿ ರೈ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್, ಶಿವರಾಜ್ ಕೆ.ಆರ್. ಪೇಟೆ, ಶಾಲಿನಿ ಮುಂತಾದ ಕಲಾವಿದರು ಪಾಲ್ಗೊಂಡಿದ್ದಾರೆ.
ಅನಿತಾ ಕುಮಾರಸ್ವಾಮಿ ಅರ್ಪಿಸುವ ಈ ಚಿತ್ರದಲ್ಲಿ ನಾಯಕಿಯಾಗಿ ರಚಿತ ರಾಮ್ ಕಾಣಿಸಿಕೊಂಡಿದ್ದರೆ, ಎ. ಹರ್ಷ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಸುನೀಲ್ ಗೌಡ, ಸಂಗೀತ ಚರಣ್ ರಾಜ್, ಸಾಹಸ ನಿರ್ದೇಶನ ರಾಮ್ ಲಕ್ಷ್ಮಣ್, ಸಂಕಲನ ಗಣೇಶ್ ಮಲ್ಲಯ್ಯ, ಕಲಾ ನಿರ್ದೇಶಕ ರವಿ ಸಂತೆಹಕ್ಲು ನಿರ್ವಹಿಸಿದ್ದಾರೆ.
Discussion about this post