ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಿಳೆಯರನ್ನು ಪೋಲಿ ಹುಡುಗರಿಂದ ರಕ್ಷಿಸುವ ಸಲುವಾಗಿ ಶಿವಮೊಗ್ಗ ಪೊಲೀಸರಿಗೆ ನಿರ್ಭಯಾ ಬೈಕ್ ನೀಡಲಾಗಿದ್ದು, ಬೀಟ್ ಆರಂಭವಾಗಿದೆ.
ಪೋಲಿ ಹುಡುಗರಿಂದ ಮಹಿಳೆಯರು ಹಾಗೂ ಯುವತಿಯರ ರಕ್ಷಣೆ ಮಾಡುವ ದೃಷ್ಠಿಯಿಂದ ಜಿಲ್ಲೆಯ 32 ಪೊಲೀಸ್ ಠಾಣೆಗಳಿಗೆ ನಿರ್ಭಯ ಬೈಕ್ ನೀಡಲಾಗಿದ್ದು, ಈ ಹಿಂದೆ ರಚಿಸಲಾಗಿದ್ದ ಓಬವ್ವ ಪಡೆಯಂತೆಯೇ ಇದು ಕಾರ್ಯ ನಿರ್ವಹಿಸಲಿದೆ.
ಪುರುಷರಿಂದ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯುಂಟಾದ ಮಾಹಿತಿ ದೊರೆತರೆ ತತಕ್ಷಣವೇ ನೆರವಿಗೆ ಬರುವ ಯೋಜನೆಯಾಗಿ ನಿರ್ಭಯಾ ಬೈಕ್ ನೀಡಲಾಗಿದೆ. ಈ ಬೈಕ್ ಮೂಲಕ ಪೊಲೀಸ್ ಸಿಬ್ಬಂದಿಗಳು ನಿರಂತರವಾಗಿ ಬೀಟ್’ನಲ್ಲಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post