ನವದೆಹಲಿ: ಪುಲ್ವಾಮಾದಲ್ಲಿ ಗುರುವಾರ ಹಾಗೂ ಇಂದು ನಡೆದ ಪಾಕ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನವನ್ನು ಎಲ್ಲ ಆಯಾಮಗಳಲ್ಲಿ ಕಟ್ಟಿ ಹಾಕುವ ನಿರ್ಧಾರಕ್ಕೆ ಬಂದಿರುವ ಭಾರತ ಈ ಕುರಿತಂತೆ ಪಾಕಿಸ್ಥಾನದ ಯಾವುದೇ ನಟರಿಗೆ ಇನ್ನು ಮುಂದೆ ಭಾರತೀಯ ಚಿತ್ರಗಳಲ್ಲಿ ಅವಕಾಶವಿಲ್ಲ ಎಂದು ಘೋಷಿಸಿದೆ.
ಈ ಕುರಿತಂತೆ ನಿರ್ಧಾರ ಪ್ರಕಟಿಸಿರುವ ಭಾರತೀಯ ಚಿತ್ರೋದ್ಯಮ ಸಂಘ ನಿರ್ಧಾರ ಪ್ರಕಟಿಸಿದ್ದು, ಇನನು ಮುಂದೆ ಪಾಕಿಸ್ಥಾನಕ್ಕೆ ಸೇರಿದ ಯಾವುದೇ ನಟರಿಗೆ ಭಾರತೀಯ ಚಿತ್ರಗಳಲ್ಲಿ ಅವಕಾಶಗಳನ್ನು ನಿರ್ಬಂಧಿಸಲಾಗಿದೆ. ಅಲ್ಲದೇ, ನಮ್ಮಲ್ಲಿನ ಚಿತ್ರಗಳನ್ನು ಪಾಕಿಸ್ಥಾನದಲ್ಲಿ ಬಿಡುಗಡೆಯನ್ನೂ ಸಹ ಮಾಡುವುದಿಲ್ಲ ಎಂದು ತಿಳಿಸಿದೆ.
Discussion about this post