ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಅವರ ಮುಖದ ಮೇಲೆ ಬಂದಿದ್ದು, ಮೊಬೈಲ್ ಬೆಳಕೇ ಹೊರತು ಲೇಸರ್ ಬೆಳಕಲ್ಲ ಎಂದಿದೆ.
ಈ ಕುರಿತಂತೆ ಇಲಾಖೆಯ ವಕ್ತಾರ ಭರತ್ ಭೂಷಣ್ ಸ್ಪಷ್ಟನೆ ನೀಡಿದ್ದು, ರಾಹುಲ್ ಗಾಂಧಿಯವರ ಭದ್ರತೆಯಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅಮೇಥಿಯಲ್ಲಿ ರಾಹುಲ್ ಗಾಂಧಿಯವರ ಭದ್ರತೆ ಉಲ್ಲಂಘನೆಯಾಗಿರುವ ಕುರಿತು ಗೃಹ ಕಚೇರಿಗೆ ಯಾವುದೇ ಪತ್ರವೂ ಈವರೆಗೆ ಬಂದಿಲ್ಲ. ಹಸಿರು ಲೇಸರ್ ಬೆಳಕಿನ ತನಿಖೆ ಇಲ್ಲವೇ ಪರಿಶೀಲನೆ ಮಾಡುವಂತೆ ಸೂಚಿಸಲಾಗಿತ್ತು. ಇದರಂತೆ, ಎಸ್‌ಜಿಪಿ ಇದರ ಬಗ್ಗೆ ತನಿಖೆ ಮಾಡಿದೆ ಮತ್ತು ವೀಡಿಯೊ ದೃಶ್ಯಾವಳಿಯಲ್ಲಿನ ಹಸಿರು ಬೆಳಕು ಪ್ರದರ್ಶಿತವಾಗಿರುವುದು ಅಮೇಥಿಯಲ್ಲಿ ಪಕ್ಷದ ಛಾಯಾ ಚಿತ್ರಗ್ರಾಹಕರೊಬ್ಬರು ಬಳಸಿದ ಮೊಬೈಲ್ ಫೋನ್’ನಿಂದ ಎಂದಿದೆ.

















