2014 ಜನವರಿಯಲ್ಲಿ ದ.ಕೊರಿಯಾದ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ, ಕಿಮ್-ಜಾಂಗ್-ಉನ್, ಜಾಂಗ್-ಸಂಗ್-ತೇಕ್‌ನ ಸಂಪೂರ್ಣ ಕುಟುಂಬವನ್ನೇ ಆಹುತಿ ತೆಗೆದುಕೊಂಡಿದ್ದಾನೆ. ಜಾಂಗ್‌ನ ಹೆಂಡತಿ ಅಂದರೆ ಕಿಮ್‌ನ ಸೋದರತ್ತೆಯನ್ನು ವಿಷವುಣಿಸಿ ಕೊಲ್ಲಿಸಲಾಗಿದೆ ಮತ್ತು ಬಂಧು ಬಳಗ ಮಕ್ಕಳು ಮರಿಯನ್ನು ಒಂದೆಡೆ ಸೇರಿಸಿ ಮರಣದಂಡನೆಗೆ ಒಳಪಡಿಸಲಾಗಿದೆ. ಮತ್ತೊಂದು ಮೂಲದ ಪ್ರಕಾರ, ಜಾಂಗ್‌ನ ಸೋದರ ಸಂಬಂಧಿ ’ಓ-ಸಾಂಗ್-ಹಾನ್’ನನ್ನು ‘ಫ್ಲೇಮ್ ಥ್ರೋವರ್’ (Flame thrower) ಗಳಿಂದ ಜೀವಂತ ಸುಟ್ಟು ಸಾಯಿಸಲಾಗಿದೆ.
ಜಾಂಗ್-ಸಂಗ್‌ನ ಮರಣಕ್ಕೆ ಪ್ರತಿಕ್ರಿಯಿಸಿ ದ.ಕೊರಿಯಾ, ಜಪಾನ್, ಅಮೆರಿಕಾ, ಬ್ರಿಟನ್ ಜಾಂಗ್‌ನನ್ನು ಕೊಲ್ಲಿಸಿರುವ ಸುದ್ದಿ ನಿಜವೇ ಆಗಿದ್ದಲ್ಲಿ ಇದು ಉ.ಕೊರಿಯ ಬರ್ಬರತೆಗೆ ಮತ್ತೊಂದು ಸಾಕ್ಷಿ ಮತ್ತು ಉ.ಕೊರಿಯಾದ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ.
2013ರ ಡಿಸೆಂಬರ್ 18 ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟಿನ ಉಪ ವಕ್ತಾರೆ ಮೇರಿ ಹಾರ್ಫರ್ ಮಾತನಾಡಿ, ಅಮೆರಿಕಾವು ಉ.ಕೊರಿ ಯಾದೊಳಗಿನ ಬೆಳವಣಿಗೆಗಳನ್ನು ಸಾಕ್ಷ್ಯಾಧಾರ ಸಮೇತ ಸಾಬೀತು ಮಾಡಲು ಈ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲವಿದ್ದರೂ, ಉ.ಕೊರಿಯಾ ಸರ್ಕಾರದ ಅಧಿಕೃತ ಹೇಳಿಕೆಯನ್ನು ನಂಬದಿರಲು ಕಾರಣಗಳಿಲ್ಲ. ಹಾಗೂ ಜಾಂಗ್-ಸಂಗ್-ತೇಕ್‌ನನ್ನು ಕೊಲ್ಲಿಸಿರುವ ವಿಷಯ ನಿಜವೇ ಆದರೆ, ಇದು ಉ. ಕೊರಿಯಾದ ಪೈಶಾಚಿಕಹೀನ ಪರಿಸ್ಥಿತಿಗೆ ಮತ್ತೊಂದು ಉದಾಹರಣೆಯಾಗಲಿದೆ. ಹಾಗೂ ಉ. ಕೊರಿಯಾ ಈ ರೀತಿಯ ಪ್ರಚೋದನಾತ್ಮಕ ಕಾರ್ಯಗಳಿಂದ ದೂರ ಉಳಿಯುವುದು ಎಲ್ಲರಿಗೂ ಕ್ಷೇಮ ಎಂದಿದ್ದಾರೆ.
(ಮುಂದುವರೆಯುವುದು)
Discussion about this post