ಹ್ಯೊನ್-ಯಾಂಗ್-ಚೊಲ್: ಹ್ಯೊಲ್-ಯಾಂಗ್-ಚೋಲ್ ಕೊರಿಯನ್ ಪೀಪಲ್‌ಸ್ ಆರ್ಮಿಯಲ್ಲಿ ಬೆಟಾಲಿಯನ್ ಕಮಾಂಡರ್ ಆಗಿ ಸೇವೆಗೆ ಸೇರಿದ್ದು 1966ರಲ್ಲಿ ಅಂದಿನಿಂದ ಬಡ್ತಿಗಳನ್ನು ಪಡೆಯುತ್ತ 2010 ಸೆಪ್ಟೆಂಬರ್‌ನಲ್ಲಿ ಅಂದಿನ ಸರ್ವಾಧಿಕಾರಿ ಕಿಮ್ ಜಾಂಗ್-ಇಲ್‌ನ ಅಧಿಕಾರಾವಧಿಯಲ್ಲಿ ಕಿಮ್ ಜಾಂಗ್-ಉನ್‌ನ ಹುದ್ದೆಗೆ ಸಮನಾದ ಜನರಲ್ ಹುದ್ದೆಗೆ ಬಡ್ತಿ ಪಡೆಯುತ್ತಾನೆ.
ಕಿಮ್ ಮನೆತನಕ್ಕೆ ನಿಷ್ಠನಾಗಿದ್ದ ಹ್ಯೊನ್ 2012 ಜುಲೈನಲ್ಲಿ ‘ವೈಸ್ ಮಾರ್ಷಲ್’ ಹುದ್ದೆ ಅಂದರೆ ಉತ್ತರ ಕೊರಿಯಾದ ಅರ್ಮಿಯ ಅಧಿಕಾರಿಗಳ ಪಟ್ಟಿಯಲ್ಲಿ ಎರಡನೆಯ ರ್ಯಾಂಕ್‌ಗೆ ಬಡ್ತಿ ಪಡೆಯುತ್ತಾನೆ. ಮತ್ತು ಆನಂತರ ನಾಲ್ಕು ತಿಂಗಳ ಅವಧಿಯಲ್ಲಿ ಮತ್ತೆ ಜನರಲ್ ಹುದ್ದೆಗೆ ಹಿಂಬಡ್ತಿ ನೀಡಲಾಗುತ್ತದೆ.
ಹ್ಯೊನ್‌ನ ಬಗ್ಗೆ ಇಷ್ಟೆಲ್ಲಾ ಹೇಳುತ್ತಿರುವ ಕಾರಣ ಏನೆಂದರೆ, ಆತ ಕಿಮ್ ಮನೆತನಕ್ಕೆ, ಉ. ಕೊರಿಯಾ ಸೈನ್ಯಕ್ಕೆ ಅತ್ಯಂತ ನಿಷ್ಠನಾಗಿದ್ದ. ಆದರೆ ಹಲವು ಆರೋಪಗಳು ಆತನನ್ನು ಸಾವಿನ ಬಾಯಿಗೆ ತಳ್ಳಿದ್ದವು. ನಿಷ್ಕರುಣೆಯಿಂದ ಕಿಮ್ ತನ್ನ ಎರಡರಷ್ಟು ವಯಸ್ಸಿನ ಹಿರಿಯ ಸೈನ್ಯಾಧಿಕಾರಿಯನ್ನು ಕೊಲ್ಲಿಸಿದ್ದ. ಆ ಕಾರಣ ಏನು ಎಂದು ನೋಡುವುದಾದರೆ ಏಪ್ರಿಲ್ 2015ರಲ್ಲಿ ನಡೆದ ಒಂದು ಮಿಲಿಟರಿ ಸಭೆಯಲ್ಲಿ ಕಿಮ್ ಜಾಂಗ್-ಉನ್ ಮಾತನಾಡುವಾಗ ತೂಕಡಿಸಿದ್ದು.
ಹೌದು, ನೀವು ಓದಿದ್ದು ಸರಿಯಿದೆ, ಕಿಮ್ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಹ್ಯೊನ್ ತೂಕಡಿಸಿದ್ದುಂಟು ಮತ್ತು ಅದು ವಿಡಿಯೋ ರೆಕಾರ್ಡ್ ಆಗಿತ್ತು. ಇನ್ನು ಆಶ್ಚರ್ಯಕರ ಸಂಗತಿಯೆಂದರೆ ಕಿಮ್ ಜಾಂಗ್-ಇಲ್‌ನ ಮರಣಾನಂತರ ಇದೇ ಹ್ಯೊನ್ ಕಿಮ್-ಜಾಂಗ್-ಉನ್‌ಗೆ ಹತ್ತಿರದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ ತನ್ನ ಆಪ್ತನನ್ನೇ ಕಾರಣವಲ್ಲದ ಕಾರಣಕ್ಕೆ ಕೊಲ್ಲಿಸುತ್ತಾನೆಂದರೆ ಆತ ಅದಿನ್ನೆಷ್ಟು ಮೃಗತ್ವದಿಂದ ಕೂಡಿರಬಹುದು. ಕಿಮ್-ಜಾಂಗ್-ಉನ್ ವ್ಯಕ್ತಿತ್ವ.
ಇನ್ನು ಹ್ಯೊನ್‌ನನ್ನು ಕೊಲ್ಲಿಸಿರುವ ರೀತಿ ಇನ್ನೂ ಭೀಭತ್ಸ. ಉತ್ತರ ಕೊರಿಯಾದ ರಾಜಧಾನಿ ಪ್ಯೂಂಗ್ಯಾಂಗ್‌ನಿಂದ 30 ಕಿಲೋಮೀಟರ್ ದೂರದಲ್ಲಿರುವ ಕಾಂಗ್-ಗಾನ್ ಮಿಲಿಟರಿ ತರಬೇತಿ ಪ್ರದೇಶದಲ್ಲಿ ಸಾರ್ವಜನಿಕವಾಗಿ ನಾಲ್ಕು ಬ್ಯಾರಲ್ಲಿನ ‘ಆ್ಯಂಟಿ- ಏರ್‌ಕ್ರಾಫ್‌ಟ್ ಗನ್’ ನಿಂದ ಶೂಟ್ ಮಾಡಿ ಕೊಲ್ಲಲಾಯಿತು.
Discussion about this post