ಅದು ಸಕಾರಣವೋ ಅಲ್ಲವೋ ಒತ್ತಟ್ಟಿಗಿರಲಿ, ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಒಂದು ಕುಂಟು ನೆಪವಾದರೂ ಇರುತ್ತದೆ. ಆದರೆ ಮಾನವರೂಪಿ ರಾಕ್ಷಸರನ್ನು ಮೀರಿಸಿದ ರಾಕ್ಷಸ ಕಿಮ್ ಜಾಂಗ್-ಉನ್‌ಗೆ ಜನರನ್ನು ಕೊಲ್ಲಲು ಕಾರಣಗಳೇ ಬೇಡ. ತಾನು ಮಾತಾಡುವಾಗ ತೂಕಡಿಸಿದರು ಎಂದು ತನ್ನ ಹಳೇ ಪ್ರೇಯಸಿ ಅಸಭ್ಯವಾಗಿ ನರ್ತಿಸಿದಳೆಂದು (ನಮ್ಮ ಪಬ್‌ಗಳಲ್ಲಿ ಕುಡಿದು ನರ್ತಿಸುವ ಯುವತಿಯರಿಗಿಂತ ಅಸಭ್ಯವೇ ಆದರೂ), ಮಿಲಿಟರಿಯ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಮುಂದೊಮ್ಮೆ ತನ್ನ ವಿರುದ್ಧ ತಿರುಗಿ ಬೀಳಬಹುದೇನೋ ಎಂಬ ಊಹೆ, ದಕ್ಷಿಣ ಕೊರಿಯಾದ ಸಿನಿಮಾ, ಧಾರಾವಾಹಿ ನೋಡಿದರು ಎಂದು, ನನ್ನವರು ತನ್ನವರು ಎಂಬ ಕರುಣೆಯಿಲ್ಲದೆ ಹತ್ಯೆಗೈಯುವ ನೀಚ ನಾಯಿಗಳು ಮರಿಹಾಕಿದಾಗ ಕೆಲವೊಂದು ಸಮಯದಲ್ಲಿ ತನ್ನ ಹಸಿವು ನೀಗಿಸಿಕೊಳ್ಳುವುದಕ್ಕೆ ತನ್ನದೇ ಒಂದು ಮರಿಯನ್ನು ತಿನ್ನುತ್ತದಂತೆ. ಅದನ್ನು ಮೀರಿಸುವಂತ ಕಿಮ್ ತನ್ನ ಸ್ವಂತ ಸೋದರತ್ತೆ ಮತ್ತು ಮಾವನನ್ನು ಕೊಲ್ಲಿಸಿದ್ದಾನೆ. 2012ರಲ್ಲಿ ಅಧಿಕಾ ರಕ್ಕೆ ಬಂದ ನಂತರ 2015 ಜುಲೈವರೆಗೂ ಸರಿಸು ಮಾರು 70ಕ್ಕೂ ಹೆಚ್ಚು ಅಧಿಕಾರಿಗಳನ್ನು ಮರಣದಂಡನೆಗೆ ಒಳಪಡಿಸಿದ್ದಾನೆ ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆಗಳು ತಿಳಿಸಿವೆ.
ಮರಣ ದಂಡನೆಯ ಪರ್ವ
2012ರಲ್ಲಿ ಅಧಿಕಾರಕ್ಕೆ ಬರುತ್ತಲೇ ಕಿಮ್-ಜಾಂಗ್-ಉನ್‌ಗೆ ಭವಿಷ್ಯದ ಬಗ್ಗೆ ಸಣ್ಣದೊಂದು ಆತಂಕವಿತ್ತು. ಏಕೆಂದರೆ 1994 ಇವನಪ್ಪ ಕಿಮ್-ಜಾಂಗ್-ಇಲ್ ಸರ್ವಾಧಿಕಾರಿಯ ಸ್ಥಾನಕ್ಕೇರುವ ಮೊದಲೆ ದಶಕಗಳ ಕಾಲ ಅವನಪ್ಪ ಕಿಮ್-ಇಲ್-ಸಂಗ್ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುಭವ ಗಳಿಸಿ ಸೇನೆಯ ಮತ್ತು ಸೇನೆಯ ಮುಖ್ಯ ಅಧಿಕಾರಿ ವರ್ಗದ ಮೇಲೆ ಹಿಡಿತ ಸಾಧಿಸಿದ್ದ. ಹಾಗಾಗಿ ಕಿಮ್-ಜಾಂಗ್-ಇಲ್ ಹೆಚ್ಚೆಚ್ಚು ಕ್ರೂರತೆ ಮೆರೆದು ಅಧಿಕಾರಕ್ಕೆ ಸಂಚು ತರಬಹುದೆಂದು ಅಧಿಕಾರಿಗಳನ್ನು ಕೊಲ್ಲಿಸುವ ಪರಿಸ್ಥಿತಿ ಹೆಚ್ಚಾಗಿ ಬರಲಿಲ್ಲ. ಆದರೆ ಮೂರನೆಯ ತಲೆಮಾರಿನ ಕಿಮ್-ಜಾಂಗ್-ಉನ್ ಅಧಿಕಾರಕ್ಕೆ ಬಂದಾಗ ಆತನಿಗೆ ಕೇವಲ 29 ವರ್ಷ ಮತ್ತು ಆಡಳಿತದ ಯಾರ ವಿಭಾಗದ ಮೇಲೂ ಹೆಚ್ಚಾಗಿ ಹಿಡಿತವಿರಲಿಲ್ಲ. ಆ ಕಾಲಕ್ಕೆ ದೇಶದ ಎರಡನೆಯ ಅತಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು ‘ಜಾಂಗ್-ಸಂಗ್-ತೇಕ್’.
ಮುಂದುವರೆಯುವುದು…
Discussion about this post