ಮಿನ್-ಹ್ಯೂಕ್: ಮಿನ್ ಹ್ಯೂಕ್ ತಂದೆಯಿಲ್ಲದ ಮನೆಯಲ್ಲಿ ಬೆಳೆದ ಹುಡುಗ. ಮಿನ್ ಹ್ಯೂಕ್ ಚಿಕ್ಕ ಹುಡುಗನಾಗಿದ್ದಾಗಲೇ ತಂದೆ ತೀರಿಹೋಗಿದ್ದಾರೆ ಎಂದು ಅವರಿವರು ಹೇಳಿದ ಮಾತನ್ನೇ ನಂಬಿ ಬೆಳೆದಿದ್ದ. ಈತನಿಗೆ 7-8 ವರ್ಷವಿರುವಾಗ ಈತನ ತಾಯಿ ಕ್ಯಾನ್ಸರ್‌ನಿಂದ ಹಾಸಿಗೆ ಹಿಡಿದಿದ್ದರು. ಆದರೆ ನಂತರ ತನ್ನ ತಂದೆ ಇನ್ನೂ ಬದುಕಿದ್ದಾರೆ ಎಂಬ ಸತ್ಯ ತಿಳಿದು ಅವರನ್ನು ಕೂಡಿಕೊಂಡ. 18ನೆಯ ವಯಸ್ಸಿನವರೆಗೂ ತಂದೆಯ ಜೊತೆಯಲ್ಲಿಯೇ ಬೆಳೆದ.
ಜ್ಝಿಜಿಠಿಚ್ಟ್ಢ್ ್ಛಜ್ಟಿಠ್ಠಿ ಎನ್ನುವ ಸಿದ್ಧಾಂತದ ಉತ್ತರ ಕೊರಿಯಾದ ಈತ ಮಿಲಿಟರಿಗೆ ಸೇರಿದ. ಆದರೆ ಆತ ಅಲ್ಲಿ ಕಂಡ ಸತ್ಯಗಳು ಆತನಿಗೆ ಹೊಸ ಲೋಕವನ್ನೇ ಕಣ್ಣ ಮುಂದೆ ತೆರೆದಿಟ್ಟತ್ತು. ಮಿಲಿಟರಿಯಲ್ಲಿ ಸೈನಿಕರಿಗೆ ಸರಿಯಾದ ಊಟ ಸಿಗುವುದಿಲ್ಲ. ತಮ್ಮ ಆಹಾರವನ್ನು ತಾವೇ ತಯಾರಿಸಬೇಕು. ಅಡುಗೆ ಕೆಲಸ ಮಾಡಲು ಪ್ರತ್ಯೇಕ ಸಿಬ್ಬಂದಿಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರತಿಯೊಬ್ಬ ಸೈನಿಕನಲ್ಲೂ ಕೇವಲ ಮೂಳೆ-ಮಾಂಸಗಳಿಂದ ಕೂಡಿದ, ಹೇಳಿದಂತೆ ಕೇಳುವ ಕಿಮ್ ಮೆನತನವನ್ನು ಕನಸಿನಲ್ಲಿಯೂ ಆರಾಧಿಸುವ ಗೊಂಬೆಗಳಂತೆ ಕಾಣಲಾಗುತ್ತದೆಯೇ ಹೊರತು ಮನುಷ್ಯರನ್ನಾಗಿ ಅಲ್ಲ.
ನಮ್ಮಲ್ಲಿ ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂಬ ಘೋಷ ವಾಕ್ಯಗಳು ಸೈನಿಕರಲ್ಲಿನ ದೇಶಪ್ರೇಮ, ದೇಶಕ್ಕಾಗಿ ಹೋರಾಡುವ ಛಲವನ್ನು ಹೆಚ್ಚಿಸಿದರೆ, ಉತ್ತರ ಕೊರಿಯಾದ ಸೈನಿಕರಿಗೆ ದೇಶಪ್ರೇಮದ ಕಲ್ಪನೆಯೇ ಇಲ್ಲ. ಸೈನಿಕರಲ್ಲರೂ ಕಿಮ್ ಮನೆತನದ ಸೇವೆಗೆ ಮತ್ತು ಅವರ ಅದೇಶ ಪಾಲಿಸಲಿಕ್ಕೆ ಹುಟ್ಟಿರುವ ಸೇವಕರಂತೆ ನೋಡಲಾಗುತ್ತದೆ. ಹೀಗಾಗಿ, ಅಲ್ಲಿನ ಸೈನಿಕರೂ ಆಹಾರಕ್ಕಾಗಿ ಪ್ರಾಣಿಗಳನ್ನು, ಇತರೆ ಆಹಾರ ಧಾನ್ಯಗಳನ್ನು ಕದಿಯುವುದುಂಟು.
ಇಂತಹ ಪರಿಸ್ಥಿತಿಯಲ್ಲಿ ಮೂರು ವರ್ಷ ಕಳೆದ ಮಿನ್-ಹ್ಯೂಕ್ ಮತ್ತು ಆತನ ಸಹಚರರು ಹೀಗೆ ತಮ್ಮ ಆಹಾರಕ್ಕಾಗಿ ಪ್ರಾಣಿಯೊಂದನ್ನು ಕದಿಯುವಾಗ ಸಿಕ್ಕಿಬಿದ್ದರು. ತಮಗೆ ಒದಗಲಿರುವ ಶಿಕ್ಷೆಯನ್ನು ನೆನೆಯುತ್ತ, ಒಮ್ಮೆ ಒಂದು ಸದಾವಕಾಶ ಸಿಕ್ಕಾಗ ಕಷ್ಟಪಟ್ಟು ಕಾಲ್ದಾರಿಯಲ್ಲಿ ನಡೆದು ಚೀನಾ ಸೇರಿದ. ತನ್ನ ದೇಶ ತನಗೆ ಸರಿಯಾದ ಊಟ ಕೂಡ ಕೊಡಲಿಲ್ಲ. ತಾನು ಪ್ರೀತಿಸುತ್ತಿದ್ದ ತಾಯಿಯನ್ನು ಸಹ ಉಳಿಸಿಕೊಳ್ಳಲಾಗಲಿಲ್ಲ ಎಂದು ಬಹಳ ನೊಂದಿದ್ದ.
(ಮುಂದುವರೆಯುವುದು)
Discussion about this post