ಯೆಯೋನ್ಮಿ ಪಾರ್ಕ್ (Yeonmi park) ಅತಿ ಚಿಕ್ಕ ವಯಸ್ಸಿನಲ್ಲಿ ಪಡಬಾರದ ಕಷ್ಟಪಟ್ಟು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾ ಸೇರಿ ತನ್ನ ತನ್ನ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿದ ರೀತಿ ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆಯ ನಿರ್ಧಾರ ಮಾಡುವ ಹೇಡಿಗಳಿಗೆ ಮಾದರಿಯಾಗಬಲ್ಲದು. ಸದ್ಯ ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ಈಕೆ ಒಬ್ಬ ಸೆಲೆಬ್ರಿಟಿಯಾಗಿ ಬೆಳೆದು ನಿಂತಿದ್ದಾಳೆ. ಜೀವನದಲ್ಲಿ ಕಂಡ ನರಕ, ಅನುಭವಿಸಿದ ದೈಹಿಕ ಮತ್ತು ಮಾನಸಿಕ ಯಾತನೆಗಳೆಲ್ಲವನ್ನು ಮೀರಿ ನಿಂತಿದ್ದಾಳೆ.
ಆಕೆಯ ಮಾತುಗಳಲ್ಲೇ ಹೇಳುವುದಾದರೆ ಉತ್ತರ ಕೊರಿಯಾದ ಜೀವನ ನರಕಕ್ಕಿಂತ ತುಸು ಹೆಚ್ಚು ನರಕ. ಶಾಲೆಗಳಲ್ಲಿ ಉತ್ತರ ಕೊರಿಯನ್ನರು ಮಕ್ಕ ಳಿಗೆ ಪಾಠ ಹೇಳಿ ಕೊಡುವ ರೀತಿಯೇ ಮಕ್ಕಳಲ್ಲಿ ದ್ವೇಷ ತುಂಬುವಂತೆ ಮಾಡುತ್ತದೆ. ಉದಾಹರಣೆಗೆ ಗಣಿತ ಹೇಲಿಕೊಡುವ ವಿಧಾನ. ‘ನಾಲ್ಕು ಅಮೆರಿಕನ್ ಬಾಂಬ್‌ಗಳಲ್ಲಿ ಇಬ್ಬರನ್ನು ಕೊಂದರೆ ಉಳಿದವರೆಷ್ಟು?’ ಈ ರೀತಿಯ ಹೇಳಿಕೊಡಲಾಗುತ್ತದೆ. ಅದು ಬಿಟ್ಟರೆ ಕಿಮ್ ಮನೆತನವನ್ನು ಹಾಡಿ ಹೊಗಳಿದ ಇತಿಹಾಸವನ್ನು ಹೇಳಿಕೊಡಲಾಗುತ್ತದೆ.
ಚಿಕ್ಕ ವಯಸ್ಸಿನ ತನ್ನ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ಯೆಯೋನ್ಮಿ, ತಾನು ಚಿಕ್ಕಂದಿನಲ್ಲಿ ಸ್ನಾನಕ್ಕೆ, ಬಟ್ಟೆ ತೊಳೆಯಲು ಅಡುಗೆ ತಯಾರಿಸಲು ನದಿ ತೀರಕ್ಕೆ ಹೋದಾಗ ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ನೆನಪಿಸಿಕೊಳ್ಳುತ್ತಾಳೆ. ನದಿ ತೀರದಲ್ಲಿ ಬಟ್ಟೆ ತೊಳೆದು, ಸ್ನಾನ ಮಾಡಿ ಅದೇ ಬಟ್ಟೆಯನ್ನು ತೊಟ್ಟುಕೊಂಡು ಅದೇ ನಂದಿ ನೀರಿನಲ್ಲಿ ಅಡುಗೆ ಮಾಡಿದಾಗಿನ ಸಂದರ್ಭ ಅದು. ‘ಯಲೂ’ ನದಿ ತೀರದಲ್ಲಿ ನಿಂತರೆ ಒಂದು ಬದಿ ಉತ್ತರ ಕೊರಿಯಾ ಮತ್ತೊಂಡೆದೆ ಚೀನಾ.
ಚೀನಾ ತೀರದಲ್ಲಿ ನಿಂತ ಕೊರಿಯನ್ ಎಥ್ನಿಸಿಟಿಯ ಬಾಲಕನಿಂದ ಉತ್ತರ ಕೊರಿಯನ್ನರ ಬಗ್ಗೆ ಹಸಿವಿನ ಬಗ್ಗೆ ಮೂದಲಿಸಿದ್ದು ನೆನೆಯುತ್ತಾಳೆ. ಚೀನಾ ದಡದಲ್ಲಿ ಕಾಣಿಸುವ ದೀಪಗಳು ನಮ್ಮೆಲ್ಲೇಕಿಲ್ಲ? ಚೀನಾದಲ್ಲಿ ಜನರಿಗೆ ಸಿಗುವ ಸಮೃದ್ಧ ಆಹಾರ ನಮಗೇಕೆ ಇಲ್ಲ ಎಂದು ಪುಟ್ಟ ಮನದಲ್ಲಿ ಮೂಡುವ ಪ್ರಶ್ನೆಗಳನ್ನು ನೆನೆಯುತ್ತಾಳೆ. ಈ ಎಲ್ಲಾ ಘಟನೆಗಳೂ ನಡೆದದ್ದು ಆಕೆ ಇನ್ನು 8-10 ವರ್ಷವಿರುವಾಗ.
(ಮುಂದುವರೆಯುವುದು)
Discussion about this post