ದಕ್ಷಿಣ ಕೊರಿಯಾ ತಲುಪಿದ ಯೆಯೋನ್ಮಿ ಇಂಗ್ಲೀಷ್, ಮ್ಯಾಂಹರಿನ್ ಕಲಿಯಬೇಕು ಎಂಬ ಆಸೆಗೆ ಒತ್ತಾಸೆಯಾಗಿ ನಿಂತ ತಾಯಿ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿ ಮಗಳನ್ನು ಓದಿಸಿದರು. ಕಲಿಕೆಯ ಜೊತೆ ಜೊತೆಗೆ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಯೆಯೋನ್ಮಿ ಇಂದು ದಕ್ಷಿಣ ಕೊರಿಯಾದಲ್ಲಿ ಸೆಲಿಬ್ರಿಟಿಯಾಗಿ ಬೆಳೆದು ನಿಂತಿದ್ದಾಳೆ ಮತ್ತು ಉತ್ತರ ಕೊರಿಯಾದಲ್ಲಿನ ನಾಗರಿಕನ ಮಾನವಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ಟಿವಿ ಶೋಗಳ ಮೂಲಕ ಹೆಚ್ಚೆಚ್ಚು ಪ್ರಸಿದ್ಧಳಾದ ಯೆಯೋನ್ಮಿ ಬಾಳಲ್ಲಿ ಮತ್ತೊಂದು ಸಂತೋಷದ ಸುದ್ದಿಯಿತ್ತು. ಟಿವಿ ಶೋ ಒಂದರಲ್ಲಿ ಯೆಯೋನ್ಮಿಳನ್ನು ಕಂಡ ಆಕೆಯ ಕಳೆದುಹೋಗಿದ್ದ ಅಕ್ಕ ಮತ್ತೆ ತನ್ನ ತಂಗಿ ಅಮ್ಮನನ್ನು ಕೂಡಿಕೊಂಡಿದ್ದಾಳೆ.
ಸದ್ಯ 23 ವರ್ಷದ ಯೆಯೋನ್ಮಿ ವಿಶ್ವವನ್ನು ಸುತ್ತಿ ಜನರಿಗೆ ಉತ್ತರ ಕೊರಿಯಾದ ದಾರುಣ ಕಥೆಯನ್ನು ಹೇಳುತ್ತ ಉತ್ತರ ಕೊರಿಯನ್ನರ ಮಾನವ ಹಕ್ಕುಗಳಿಗಾಗಿ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದಾಳೆ. ಆದರೆ “Military -First’ ಉತ್ತರ ಕೊರಿಯಾಕ್ಕೆ ಹೇಗೆ ಬುದ್ಧಿ ಕಲಿಸುವುದು ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ಉತ್ತರ ಕೊರಿಯಾ ಅಣ್ವಸ್ತ್ರ ಸಶಕ್ತ ದೇಶ. ಮಂಗಕ್ಕೆ ಭಂಗಿ ತಿನ್ನಿಸಿದ ಹಾಗಾಗಿದೆ ಈಗಿನ ಪರಿಸ್ಥಿತಿ. ದಕ್ಷಿಣ ಕೊರಿಯಾ ಗಡಿಯುದ್ಧಕ್ಕೂ ತನ್ನ ಸೇನೆಯನ್ನು ನಿಯೋಜಿಸುತ್ತಿವ ಮತ್ತು ಮೇಲಿಂದ ಮೇಲೆ ಮನುಕುಲ ವಿನಾಶಕ ಅಸ್ತ್ರಗಳ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ವಿರುದ್ಧ ತೆಗೆದುಕೊಳ್ಳುವ ಜಾಗತಿಕ ನಿರ್ಧಾರಗಳು ಯಾವ ಸ್ವರೂಪವನ್ನು ಸಹ ಪಡೆಯಬಹುದು.
ಹೋರಾಟ
ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾ ಸೇರಿದಂದಿನಿಂದಲೂ ಕೇವಲ ವೈಯಕ್ತಿಕ ಜೀವನಕ್ಕೆ ಮಾತ್ರ ಗಮನ ಕೊಡದೆ, ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಯೆಯೋನ್ಮಿ ತನ್ನಂತೆಯೇ ಉತ್ತರ ಕೊರಿಯಾದ ಎಲ್ಲಾ ನಾಗರಿಕರಿಗೆ ಸ್ವಾತಂತ್ರ್ಯ ಸಿಗಬೇಕೆಂದು ಹೋರಾಟ ನಡೆಸಿದ್ದಾಳೆ. ವಾಷಿಂಗ್ಟನ್ ಪೋಸ್‌ಟ್ಗೆ ಬರೆಯುವ ಈಕೆ ದಿ ಗಾರ್ಡಿಯನ್ ಪತ್ರಿಕೆಗೆ ತನ್ನ ಸಂದರ್ಶನ ನೀಡಿದ್ದಾಳೆ. ಈಕೆ Link (Liberty on North korea) ನ ಸದಸ್ಯೆಯಾಗಿಯೂ ಸಹ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದಾಳೆ. Link ಎನ್ನುವ ಸಂಸ್ಥೆ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಚೀನಾದಲ್ಲಿ ಅಡಗಿರುವ ಉತ್ತರ ಕೊರಿಯಾ ನಾಗರಿಕರಿಗೆ ದಕ್ಷಿಣ ಕೊರಿಯಾ ಅಥವಾ ಅಮೆರಿಕಾದಲ್ಲಿ ನೆಲೆ ಒದಗಿಸುವ ಸಂಸ್ಥೆಯಾಗಿದೆ.
(ಮುಂದುವರೆಯುವುದು)
Discussion about this post