1. ರಂಗ್ರಾಡೋ ಮೇ 1 ಸ್ಟೇಡಿಯಂ:
ಪ್ರಪಂಚದಲ್ಲಿ ಅತಿದೊಡ್ಡ ಸ್ಟೇಡಿಯಂ. 1.5 ಲಕ್ಷ ಆಸನ ವ್ಯವಸ್ಥೆಯುಳ್ಳ ಈ ಸ್ಟೇಡಿಯಂ 51 ಎಕರೆಯಷ್ಟು ವಿಸ್ತೀರ್ಣವಾಗಿದೆ.
2. ವರ್ಷ:
ಪ್ರಪಂಚದ ಎಲ್ಲಾ ದೇಶಗಳಲ್ಲಿ ಈಗಿನ ಇಸವಿ ಎಷ್ಟು ಅಂದರೆ 2016 ಎಂದು ಹೇಳುತ್ತಾರೆ. ಆದರೆ ಉತ್ತರ ಕೊರಿಯಾದಲ್ಲಿ ಈಗಿನ ಇಸವಿ 104. 104 ಅಂದರೆ ಯಾವ ಲೆಕ್ಕಾಚಾರ ಎಂದು ನೀವು ಕೇಳಬಹುದು. ಕಿಮ್-ಸಂಗ್-ಇಲ್ ಅಂದರೆ ದೇಶದ ಮೊದಲ ಸರ್ವಾಧಿಕಾರಿ ಹುಟ್ಟಿದ್ದು 1912ರಲ್ಲಿ. ಅಂದಿನಿಂದ ಹೊಸ ಯುಗ ಅಂತ ಜನರನ್ನು ನಂಬಿಸಿದ್ದಾರೆ ಅಲ್ಲಿನ ಸರ್ವಾಧಿಕಾರಿಗಳು.
3. ಮೂರು ತಲೆಮಾರುಗಳ ಜೈಲು ಶಿಕ್ಷೆ:
ಭಾರತದಲ್ಲಿ ಯಾರಾದರೂ ಕೊಲೆಯೋ, ಕಳ್ಳತನವೋ, ಪ್ರಜಾತಂತ್ರದಲ್ಲಿ ದೇವಸ್ಥಾನದಂತೆ ಪರಿಗಣಿಸುವ ಸಂಸತ್ತಿನ ಮೇಲೋ ದಾಳಿ ಮಾಡಿದರೆ ಹಲವು ವರ್ಷಗಳ ಕಾಲ ಜೈಲಿಗೆ ತಳ್ಳಬಹುದು. ಇಲ್ಲವೇ, ಕೂಲಂಕಶ ವಿಚಾರಣೆಯ ನಂತರ ಮರಣದಂಡನೆ ನೀಡಬಹುದು. ಈಗಿನ ಪರಿಸ್ಥಿತಿಯಲ್ಲಿ ಆ ಮರಣದಂಡನೆಯನ್ನು ವಿರೋಧಿಸಿ ನ್ಯಾಯಾಂಗ ನಿಂದನೆ ಮಾಡುವವರನ್ನು ದೇಶ ಪ್ರೇಮಿಗಳಂತೆ ಬಿಂಬಿಸಬಹುದು. ಆದರೆ ನಿಮಗೆ ಗೊತ್ತಾ ಉತ್ತರ ಕೊರಿಯಾದಲ್ಲಿ ಹಲವು ಅಪರಾಧಗಳಿಗೆ ಮೂರು ತಲೆಮಾರುಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಂದರೆ ಒಬ್ಬಾತ ಅಪರಾಧ ಮಾಡಿ ಜೈಲು ಪಾಲಾದರೆ ಆತನ ಮಗ ಮತ್ತು ಮೊಮ್ಮಗ ಸಹ ಜೈಲು ಪಾಲಾಗಬೇಕಾಗುತ್ತದೆ.
4. ವೋಲ್ವೋಗೆ ಮೋಸ:
ವಿಶ್ವ ಮಾನ್ಯತೆಗಳಿಸಿರುವ ಸ್ವೀಡನ್ನಿನ ವಾಹನ ತಯಾರಕ ಸಂಸ್ಥೆ ವೋಲ್ವೋಗೆ ಕಿಮ್-ಜಾಂಗ್-ಉನ್‌ನ ಅಜ್ಜ ಕಿಮ್-ಇಲ್-ಸಂಗ್ 1974ರಲ್ಲಿ ಮೋಸ ಮಾಡಿ ಅದನ್ನು ತನ್ನ ಮಗ -ಮೊಮ್ಮಗ ಕಾಲಕ್ಕೂ ಬಿಟ್ಟುಕೊಟ್ಟಿದ್ದಾನೆ. 1974ರಲ್ಲಿ ವೋಲ್ವೋ ಕಂಪನಿಯ ಡ್ಟ್ಝಡ್ಟ 144 ಮಾದರಿಯ 1000 ಕಾರುಗಳನ್ನು ಬುಕ್ ಮಾಡಿ ಉತ್ತರ ಕೊರಿಯಾಕ್ಕೆ ತರಿಸಿಕೊಂಡಿದ್ದ. ಆದರೆ ಅದಕ್ಕೆ ನೀಡಬೇಕಿದ್ದ ಹಣವನ್ನು ನೀಡಲಿಲ್ಲ ಮತ್ತು ಇಲ್ಲಿಯವರೆಗೂ ನೀಡಿಲ್ಲ. ನನ್ನ ಪ್ರಕಾರ ವೋಲ್ವೋ ಯಾವ ಕಾಲಕ್ಕೂ ತನ್ನ ಹಣವನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಹೊಂಡ-ಗುಂಡಿಗಳ ಮಧ್ಯೆ ಇರುವ ಉತ್ತರ ಕೊರಿಯಾದ ರಸ್ತೆಗಳಲ್ಲಿ ಓಡಾಡುತ್ತಾ 40 ವರ್ಷಗಳ ನಂತರವೂ ಇನ್ನೂ ಅವು ಚಾಲನೆಯಲ್ಲಿವೆ ಎಂಬ ಅಂಶವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ತಮ್ಮ ಹಣದಲ್ಲಿ ಸ್ವಲ್ಪ ಪಾಲನ್ನು ಹಿಂಪಡೆಯಬಹುದು.
5. ಹುಟ್ಟು ಹಬ್ಬ ನಿಷೇಧ:
ಉತ್ತರ ಕೊರಿಯಾ ನಾಗರಿಕರು ಜುಲೈ 8 ಮತ್ತು ಡಿಸೆಂಬರ್ 17ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಂತಿಲ್ಲ. ಕಾರಣ?? ನಿಮ್ಮ ಊಹೆ ಸರಿ ಈ ಎರಡು ದಿನಗಳು ಕಿಮ್ -ಜಾಂಗ್-ಉನ್‌ನ ಅಪ್ಪ ಮತ್ತು ಅಜ್ಜ ಮೃತಪಟ್ಟಿದ್ದಾನೆ.
(ಮುಂದುವರೆಯುವುದು)
Discussion about this post