ಅಮೆರಿಕಾ
ಉತ್ತರ ಕೊರಿಯಾ ಅಣ್ವಸ್ತ್ರಗಳನ್ನು ಹೊಂದಿರುವ ಬಗ್ಗೆ ಅಮೆರಿಕಾದ ರಕ್ಷಣಾ ಇಲಾಖೆ ಸಂಶಯ ವ್ಯಕ್ತಪಡಿಸಿದೆ. ರಕ್ಷಣಾ ಇಲಾಖೆಯ ವಕ್ತಾರ ಕ್ಯಾ. ಜೆಫ್ ಡೇವಿಸ್ ಮಾತನಾಡಿ, ಉತ್ತರ ಕೊರಿಯಾ ಬಳಿ ಅಣ್ವಸ್ತ್ರಗಳು ಇರುವ ಬಗ್ಗೆ ನಂಬಲರ್ಹವಾದ ಯಾವುದೇ ಸಾಕ್ಷಿಗಳು ಹಾಗಿದ್ದರೂ ಸಹ ಅದನ್ನು ಸಂಪೂರ್ಣವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಏನೇ ಆದರೂ ಇಷ್ಟು ವರ್ಷಗಳ ಕಾಲ ತನ್ನ ನಾಗರಿಕರನ್ನು ಮಾತ್ರ ಕಾಡುತ್ತಿದ್ದ ಕಿಮ್ ಮನೆತನ ಈಗ ಜಾಗತಿಕ ಮನುಕುಲಕ್ಕೆ ಕಂಟಕ ವಾಗುವ ಲಕ್ಷಣ ಕಾಣುತ್ತಿದೆ. ತನ್ನ ದುರ್ವರ್ತನೆಯನ್ನು ಬಿಡದಿದ್ದರೆ ಅಮೆರಿಕಾ ಮತ್ತು ಮಿತ್ರ ಪಡೆಗಳಿಂದ ಸರಿಯಾದ ಪಾಠವನ್ನು ಕಲಿಯಬೇಕಾಗುತ್ತದೆ ಮತ್ತು ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ.
ಎರಡು ಮೂರು ದಿನಗಳ ಹಿಂದೆ ಮಾಹಿತಿಯಂತೆ ಉ.ಕೊರಿಯಾ ಖಂಡಾಂತರ ಕ್ಷಿಪಣಿಯ ನಡೆಸಿದೆ. ಈ ಕ್ಷಿಪಣಿಯು ಅಮೆರಿಕಾ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಬಗೆಯ ಇಂಜಿನನ್ನು ಹೊಂದಿದೆ ಎಂದು ಉತ್ತರ ಕೊರಿಯಾ ಸುದ್ದಿ ಸಂಸ್ಥೆ ಹೇಳಿಕೊಂಡಿದೆ. ಉತ್ತರ ಕೊರಿಯಾದ ಪಶ್ಚಿಮ ತೀರದಲ್ಲಿನ ದೂರಗಾಮಿ ಕ್ಷಿಪಣಿ ಉಡಾವಣಾ ಕೇಂದ್ರದಲ್ಲಿ (long-range missle launch site) ಪರೀಕ್ಷೆ ನಡೆದಿದೆ.
ಸರ್ವಾಧಿಕಾರಿ ಕಿಮ್ ಹೇಳಿಕೆ ಬಿಡುಗಡೆಗೊಳಿಸಿ, ವಿಶ್ವದ ಯಾವುದೇ ಮೂಲೆಯಲ್ಲಿರುವ ನಮ್ಮ ಶತ್ರುವು ಇನ್ನು ಕ್ಷಿಪಣಿ ವ್ಯಾಪ್ತಿಯಲ್ಲಿರಲಿದೆ ಎಂದು ಸ್ವಪ್ರಶಂಸೆ ಮಾಡಿಕೊಂಡಿದ್ದಾನೆ.
ತನ್ನ ನಾಗರಿಕರನ್ನು ಮತ್ತು ತನ್ನ ಮಮತೆಯ ಶಿಶು ದಕ್ಷಿಣ ಕೊರಿಯಾವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದಕ್ಷಿಣ ಕೊರಿಯಾದಲ್ಲಿ ಅಮೆರಿಕಾ ತನ್ನ ಕ್ಷಿಪಣಿ ರಕ್ಷಣಾ ತಾಣವನ್ನು ಸಿದ್ಧಗೊಳಿಸಲು ದಕ್ಷಿಣ ಕೊರಿಯಾದ ಜೊತೆ ಮಾತುಕತೆ ನಡೆಸಿದೆ. ಅಮೆರಿಕಾವು ತನ್ನ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟ ಉದಾಹರಣೆಗಳಿಲ್ಲ. ಇಲ್ಲಿಯ ತನಕ ಅಮೆರಿಕಾವು ಹಲವಾರು ದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ ಅನುಭವ ಹೊಂದಿದೆ. ಸದ್ಯದ ಮಟ್ಟಿಗೆ ಅಮೆರಿಕಾಗೆ ಸವಾಲಾಗಿ ನಿಂತಿರುವುದು ISIS ಮಾತ್ರ. ಹಾಗಂತ ಈ ವಿಷಯದಲ್ಲಿ ಸಹ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ತೆಗೆದುಕೊಂಡರೆ ISIS ನಿರ್ನಾಮ ಕೂಡ ಅಸಾಧ್ಯವಲ್ಲ. ಅದೇ ರೀತಿ ಉತ್ತರ ಕೊರಿಯಾವನ್ನು ತಣ್ಣಗಾಗಿಸುವುದು ಸ್ವಲ್ಪ ಕಷ್ಟವಾರೂ ಅಸಾಧ್ಯವಲ್ಲ.
Discussion about this post