ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹೇಗೆ ದೇಶವಾಸಿಗಳಲ್ಲಿ ದೇಶಪ್ರೇಮ ಜಾಗೃತಿಯಾಗಿದೆಯೋ ಹಾಗೆಯೇ, ನಮ್ಮ ಭಾರತೀಯ ಸೇನೆಯ ಯೋಧರೂ ಸಹ ದೇಶ ರಕ್ಷಣೆಗೆ ಸಿಂಹಗಳಂತೆ ಘರ್ಜಿಸುತ್ತಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೇನೆಗೆ ಸ್ವಾತಂತ್ರ ನೀಡಿರುವ ಹಿನ್ನೆಲೆಯಲ್ಲಿ ತಾಯಿ ಭಾರತಿಯ ವೀರ ಪುತ್ರರು ಗಡಿಯಲ್ಲಿ ಅಡಗಿರುವ ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬಲಿ ಹಾಕುತ್ತಿದ್ದಾರೆ.
ಗುರುವಾರ ನಡೆದ ಇಂತಹುದ್ದೊಂದು ಕಾರ್ಯಾಚರಣೆಯಲ್ಲಿ ಉಗ್ರನೊಬ್ಬನನ್ನು ಯೋಧರು ಬಲಿ ಹಾಕಿದ್ದರು. ನಮ್ಮ ಯೋಧರಿಗೆ ಉಗ್ರರ ಮೇಲೆ ಎಷ್ಟು ರೋಷ ಇತ್ತೆಂದರೆ ಆ ನಾಯಿ ಹೆಣಕ್ಕೆ ಸರಪಳಿ ಬಿಗಿದು, ರಸ್ತೆಯಲ್ಲಿ ಬೀದಿ ನಾಯಿಯಂತೆ ಎಳೆದುಕೊಂಡು ಬಂದಿದ್ದರು. ಈ ವಿಚಾರ ಹಾಗೂ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಬೆನ್ನಲ್ಲೇ ತಮ್ಮನ್ನು ತಾವು ಮಾನವ ಹಕ್ಕು ಹೋರಾಟಗಾರರು ಎಂದು ಹೇಳಿಕೊಳ್ಳುವ ಕೆಲವು ದೇಶವಿರೋಧಿಗಳು ಯೋಧರ ಈ ಕೃತ್ಯವನ್ನು ಖಂಡಿಸಿದ್ದು, ಇದು ಅನಾಗರಿಕ ವರ್ತನೆ ಎಂದು ವಿರೋಧಿಸಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರ ಎಂದು ಹೇಳಿಕೊಳ್ಳುವ ಖುರ್ರಮ್ ಪರ್ವೇಜ್ ಎಂಬಾತ ಮಾತನಾಡಿದ್ದು, ಭಾರತೀಯ ಸೇನೆಯ ಮಾನವ ಹಕ್ಕುಗಳ ನಡವಳಿಕೆಯನ್ನು ಇದು ತೋರಿಸುತ್ತದೆ. ಇದೊಂದು ಅನಾಗರಿಕ ವರ್ತನೆ ಎಂದಿದ್ದಾನೆ.
ಇವರ ಮಾನವ ಹಕ್ಕು ಉಲ್ಲಂಘನೆ, ಅನಾಗರಿಕ ವರ್ತನೆ ಎಲ್ಲವೂ ನಮ್ಮ ಭಾರತೀಯ ಯೋಧರು ಈ ಉಗ್ರರಿಂದ ಹತರಾದಾಗ ಏಕೆ ಆಗುವುದಿಲ್ಲ… ನೂರಾರು ಯೋಧರು ತಮ್ಮವರನ್ನೆಲ್ಲಾ ತೊರೆದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಆಗ ಇಲ್ಲದ ನಿಮ್ಮ ಮಾನವ ಹಕ್ಕು ಹೋರಾಟ, ದೇಶವನ್ನು ಹಾಳು ಮಾಡುವ, ಯಾವುದೇ ಕರುಣೆಯಿಲ್ಲದೇ ಜನರನ್ನು ಕೊಲ್ಲುವ ರಾಕ್ಷಸರಿಗೆ ಮಾತ್ರ ಇರುತ್ತದೆ ಅಲ್ಲವೇ?
ಇದೇ ನಮ್ಮ ವೀರ ಯೋಧರನ್ನು ಉಗ್ರರು ಹತ್ಯೆ ಮಾಡಿದಾಗ ನಿಮ್ಮ ನಾಲಿಗೆ ಸೇದು ಹೋಗಿದ್ದವೆ? ಆಗೆಲ್ಲಿ ಹೋಗಿತ್ತು ನಿಮ್ಮ ಮಾನವ ಹಕ್ಕು ಹೋರಾಟ? ನಿಮ್ಮ ಹೋರಾಟವನ್ನು ಉಗ್ರರ ಹಕ್ಕು ಹೋರಾಟ ಎಂದು ಬದಲಾವಣೆ ಮಾಡಿಕೊಳ್ಳಿ ಆಗ ಸರಿ ಹೊಂದುತ್ತದೆ.
ಇನ್ನು, ಅವನ್ಯಾರೋ ಕಾಶ್ಮೀರದ ಪತ್ರಕರ್ತ ಅಹ್ಮದ್ ಅಲಿ ಫಯಾಜ್ ಅಂತೆ. ಯಾವುದೇ ಕಾನೂನು, ಅಂತಾರಾಷ್ಟ್ರೀಯ ಶಿಷ್ಟಾಚಾರಗಳು ಸೇನಾ ಯೋಧ ಉಗ್ರಗಾಮಿಯ ಶವವನ್ನು ಈ ರೀತಿ ಎಳೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಇದು ಕಾನೂನು ಬಾಹಿರ ಎಂದಿದ್ದಾನೆ.
ಅಯ್ಯಾ ಮಹಾನುಭಾವ ಫಯಾಜ್, ಸೇನೆಯಿಂದ ಸತ್ತವನೇನು ಶತ್ರು ರಾಷ್ಟ್ರದ ಸೈನಿಕನಲ್ಲ ಕನಿಷ್ಠ ಗೌರವ ಹಾಗೂ ಶಿಷ್ಟಾಚಾರ ಪಾಲನೆ ಮಾಡಲು.. ಅವನೊಮ್ಮ ಮನುಕುಲ ವಿರೋಧಿ ಕೃತ್ಯಗಳನ್ನು ಮಾಡುತ್ತಾ, ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಾ, ಗಡಿಯಲ್ಲಿ ಯೋಧರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಕಲಿಯುಗದ ರಾಕ್ಷಸ. ಅಂತಹ ಉಗ್ರನ ಹೆಣವನ್ನು ಬೀದಿಯಲ್ಲಿ ಎಳೆದುಕೊಂಡು ಹೋಗದೇ, ಸೇನೆಯೇನು ಸರ್ಕಾರಿ ಗೌರವ ನೀಡಿ, ಮೆರವಣಿಗೆ ಮಾಡಬೇಕಿತ್ತೇ?
ಗಡಿಯಲ್ಲಿ ಇಂತಹ ರಾಕ್ಷಸರಿಂದ ಎಷ್ಟೋ ನಮ್ಮ ಸೈನಿಕರ ವೀರಸ್ವರ್ಗ ಸೇರಿದ್ದಾರೆ. ಅವರ ಕುಟುಂಬ ಇಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಅವರ ಬಗ್ಗೆ ಎಂದಾದರೂ ಚಿಂತಿಸಿದ್ದೀಯಾ? ನಿನ್ ಜನ್ಮಕ್ಕಿಷ್ಟು.
ಅವನ ಹೆಣವನ್ನು ಆ ರೀತಿ ಎಳೆದುಕೊಂಡು ಹೋಗಿದ್ದಾರೆ ಎಂದರೆ ನಮ್ಮ ಯೋಧರು ಇವರ ಹಾವಳಿಯಿಂದ ಇನ್ನೆಷ್ಟು ರೋಸಿ ಹೋಗಿದ್ದಾರೆ ಎಂಬುದು ತಿಳಿಯುತ್ತದೆ. ಇವನ ಸ್ಥಿತಿಯನ್ನು ನೋಡಿಯಾದರೂ ನಮ್ಮ ಸೈನ್ಯವನ್ನು ಮುಟ್ಟುವ ಮುನ್ನ ಶತ್ರುಗಳು ಒಮ್ಮೆ ಯೋಚಿಸುವಂತಾಗಲಿ… ಯಾವ ನಾಯಿ ಏನಾದರೂ ಬೊಗಳಲಿ… ಯೋಧರು ಮಾಡಿದ್ದು ಸರಿಯಾಗಿದೆ. ಸೇನೆಯ ಮಾಡಿದ್ದು ತಪ್ಪು ಎಂದು ವಿರೋಧಿಸುವವರ ವಿರುದ್ಧ ನಾವಿದ್ದೇವೆ. ಉಗ್ರರನ್ನು ಇದಕ್ಕೂ ಘೋರವಾಗಿ ಬಲಿಹಾಕಬೇಕು. ಎಷ್ಟು ಎಂದರೆ ನಮ್ಮ ದೇಶ ಸೇನೆಯನ್ನು ನೆನೆಸಿಕೊಂಡರೆ ಕನಸಿನಲ್ಲೂ ಉಚ್ಚೆ ಮಾಡಿಕೊಳ್ಳಬೇಕು… ಇದಕ್ಕಾಗಿ ಇಡಿಯ ದೇಶ ಸೇನೆಯೊಂದಿಗೆ ಇದೆ. ಯೋಧರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ…
ಕೊನೆಯ ಒಂದು ಮಾತು:
ಯೋಧರು ಅವನ ಶವಕ್ಕೆ ಸರಪಳಿ ಕಟ್ಟಿ ರಸ್ತೆಯಲ್ಲಿ ನಾಯಿಯಂತೆ ಎಳೆದುಕೊಂಡು ಹೋಗಿದ್ದು ತಪ್ಪು. ಬದಲಾಗಿ ಕಜ್ಜಿ ಹಿಡಿದ ಹುಚ್ಚು ನಾಯಿಯಂತೆ ಎಳೆದುಕೊಂಡು ಹೋಗಬೇಕಿತ್ತು…
-ಎಸ್.ಆರ್. ಅನಿರುದ್ದ ವಸಿಷ್ಠ
9008761663
Discussion about this post