ಪಾಟ್ನಾ: ನಿಮ್ಮಲ್ಲಿ ಮಾತ್ರವಲ್ಲ… ನನ್ನ ಎದೆಯಲ್ಲೂ ಸಹ ಜ್ವಾಲೆ ಉರಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಬಿಹಾರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಕೆಚ್ಚೆದೆಯ ಯೋಧರ ಸಾವಿಗೆ ಸಂತಾಪ ಸೂಚಿಸುತ್ತೇನೆ. ಉಗ್ರರ ಕೃತ್ಯಕ್ಕೆ ನಿಮ್ಮ ಎದೆಯಲ್ಲಿ ಹೇಗೆ ಜ್ವಾಲೆ ಉರಿಯುತ್ತಿದೆಯೋ ಹಾಗೆಯೆ ನನ್ನ ಎದೆಯಲ್ಲೂ ಜ್ವಾಲೆ ಹೊತ್ತಿ ಉರಿಯುತ್ತಿದೆ ಎಂದಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 42 ಯೋಧರ ಪೈಕಿ ಬಿಹಾರದ ಸಂಜಯ್ ಕುಮಾರ್ ಸಿನ್ಹಾ, ರತನ್ ಕುಮಾರ್ ಠಾಕೂರ್ ಸಹ ಇದ್ದು, ಪ್ರಧಾನಿ ಮೋದಿ ಯೋಧರ ತವರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತು ಪ್ರಾರಂಭಿಸುವುದಕ್ಕೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಭಾರತ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Discussion about this post