ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಅಗತ್ಯ ಎಂಜಿನಿಯರಿAಗ್ ಕಾಮಗಾರಿಗಳಾದ ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್’ವೇನಲ್ಲಿ ಗಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್-28 ರಲ್ಲಿನ ಕಾಮಗಾರಿಗಳಿಂದಾಗಿ, ಈ ಕೆಳಗೆ ವಿವರಿಸಿದಂತೆ ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ, ಮಾರ್ಗ ಬದಲಾಯಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರು-ವೇಳಾಪಟ್ಟಿ ಮಾಡಲಾಗಿದೆ ಎಂದು ತಿಳಿಸಿದೆ.
2025ರ ಡಿಸೆಂಬರ್ 17 ಹಾಗೂ ಡಿಸೆಂಬರ್ 24ರಂದು 16239 ಸಂಖ್ಯೆಯ #Chikkamagaluru ಚಿಕ್ಕಮಗಳೂರು – ಯಶವಂತಪುರ ದೈನಂದಿನ ಎಕ್ಸ್’ಪ್ರೆಸ್ ಹಾಗೂ 16240 ಸಂಖ್ಯೆಯ ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸ್’ಪ್ರೆಸ್ ರೈಲು ಸಂಖ್ಯೆ 12614 ಕೆಎಸ್’ಆರ್ ಬೆಂಗಳೂರು – ಮೈಸೂರು ದೈನಂದಿನ ಎಕ್ಸ್’ಪ್ರೆಸ್ ರೈಲುಗಳನ್ನು ರದ್ದುಗೊಳ್ಳುತ್ತದೆ.

1. ದಿನಾಂಕ 15.12.2025 ಮತ್ತು 22.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ವೀಕ್ಲಿ ಹಮ್’ಸಫರ್ಎಕ್ಸ್ ಪ್ರೆಸ್ ರೈಲು ಉದಯಪುರ ಸಿಟಿಯಿಂದ 180 ನಿಮಿಷ, ಮತ್ತು ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಹಮ್’ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಶ್ರೀ ಗಂಗಾನಗರದಿಂದ 120 ನಿಮಿಷ ತಡವಾಗಿ ಹೊರಡಲಿವೆ. ಅಲ್ಲದೆ, ರೈಲು ಸಂಖ್ಯೆ 22497 ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
2. ದಿನಾಂಕ 17.12.2025 ಮತ್ತು 24.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ , 56282 ತುಮಕೂರು–ಚಾಮರಾಜನಗರ ದೈನಂದಿನ ಪ್ಯಾಸೆಂಜರ್ ಮತ್ತು 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ 120 ನಿಮಿಷಗಳು ತಡವಾಗಿ ಹೊರಡಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post