ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ತಹಬಂಧಿಗೆ ತರುವ ಕ್ರಮದ ಭಾಗವಾಗಿ ನಗರ ಸಾರಿಗೆ ಬಸ್’ಗಳಿಗೆ ನಿಲುಗಡೆ ಸ್ಥಳದ ಕುರಿತಾಗಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ ಹೊರಡಿಸಿದ್ದು, ನಗರದಲ್ಲಿ ಸಂಚರಿಸುತ್ತಿರುವ 61 ಬಸ್’ಗಳಿಗೆ ಒಟ್ಟು 117 ಕಡೆಗಳಲ್ಲಿ ತಂಗುದಾಣ/ನಿಲ್ದಾಣವನ್ನು ಸೂಚಿಸಿದ್ದಾರೆ. ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿರುವ ಕಡೆಗಳಲ್ಲಿ ಮಾತ್ರ ಬಸ್ ನಿಲುಗಡೆ ಮಾಡಬೇಕು. ಇದನ್ನು ಉಲ್ಲಂಘಿಸಿ ಎಲ್ಲೆಂದರೆಲ್ಲಿ ಬಸ್ ನಿಲುಗಡೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನಿಲುಗಡೆ?
- ಬಿಎಚ್ ರಸ್ತೆ:
ಶಿವಪ್ಪನಾಯಕ ವೃತ್ತ, ಸರ್ಕಾರಿ ಮೇನ್ ಮಿಡಲ್ ಸ್ಕೂಲ್ ಎದುರು, ಕರ್ನಾಟಕ ಸಂಘ ಬಸ್ ನಿಲ್ದಾಣ, ಡಿಡಿಪಿಐ ಕಚೇರಿ ದ್ವಾರದ ಬಳಿ, ಕೃಷ್ಣ ಕೆಫೆ ಹೊಟೇಲ್ ಎದುರು, ಮೀನಾಕ್ಷಿ ಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು, ತುಂಗಾ ನದಿ ಹೊಳೆ ಬಸ್ ಸ್ಟಾಪ್, ಹೊಳೆಹೊನ್ನೂರು ಕ್ರಾಸ್ (ಎನ್’ಸಿಸಿ ಕಚೇರಿ ಬಳಿ), ಮಹಾದೇವಿ ಟಾಕೀಸ್, ವಿದ್ಯಾನಗರ ಗಣೇಶ ಭವನ, ಗಣಪತಿ ದೇವಸ್ಥಾನ ಎಡ ಭಾಗ (ವಿದ್ಯಾನಗರ), ಗಣಪತಿ ದೇವಸ್ಥಾನ ಬಲ ಭಾಗ (ವಿದ್ಯಾನಗರ), ದೂರದರ್ಶನ ಕೇಂದ್ರ ಬಳಿ, ಎಂಆರ್’ಎಸ್ ಸರ್ಕಲ್ ಎಡ ಭಾಗ, ಎಂಆರ್’ಎಸ್ ಸರ್ಕಲ್ ಬಲಭಾಗ, ಹರಿಗೆ, ಹಾಥಿ ನಗರ ಕ್ರಾಸ್, ಶುಗರ್ ಫ್ಯಾಕ್ಟರಿ, ಮಲವಗೊಪ್ಪ ಚನ್ನಬಸವೇಶ್ವರ ದೇವಸ್ಥಾನ ಬಳಿ, ಕಾಡಾ ಕಚೇರಿ ಎದುರು - ಸವಳಂಗ ರಸ್ತೆ:
ಈದ್ಗಾ ಮೈದಾನದ ಎದುರು (ಡಿಸಿ ಕಚೇರಿ ಮುಂಭಾಗ), ಜಯನಗರ ಠಾಣೆ ಬಳಿ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್ ಹೋಂ ಬಳಿ, ಎಲ್’ಬಿಎಸ್ ನಗರ 2ನೆಯ ಕ್ರಾಸ್, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, ಜೆಎನ್’ಎನ್’ಸಿಇ ಕಾಲೇಜು, ಅಕ್ಷರ ಕಾಲೇಜು, ಕೃಷಿ ಕಾಲೇಜು, ಚನ್ನಮುಂಭಾಪುರ ಕ್ರಾಸ್, ಬಸವನಗಂಗೂರು ಕ್ರಾಸ್, ರತ್ನಾಕರ ನಗರ, ಸರ್ಕಾರಿ ನೌಕರರ ಬಡಾವಣೆ, ರತ್ನಗಿರಿ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾ ಭಾರತಿ ಕಾಲೇಜು ಬಳಿ, ಎನ್’ಇಎಸ್ ಲೇಔಟ್ ಕುವೆಂಪು ನಗರ - ಸಾಗರ ರಸ್ತೆ:
ಮೆಗ್ಗಾನ್ ಆಸ್ಪತ್ರೆ ಹೊರ ಭಾಗ, ಎಸ್’ಪಿ ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್ ಠಾಣೆ (ಎಡ ಭಾಗ), ಎಪಿಎಂಸಿ ಹತ್ತಿರ (ಎಡಭಾಗ), ಎಪಿಎಂಸಿ ಹತ್ತಿರ (ಬಲಭಾಗ), ಬಿ.ಕೃಷ್ಣಪ್ಪ ಸರ್ಕಲ್ (ಆಲ್ಕೊಳ ಸರ್ಕಲ್), ಡಿವಿಜಿ ಸರ್ಕಲ್ (ಎಡಭಾಗ), ಹೊಟೇಲ್ ಅಶೋಕ ಗ್ರಾಂಡ್ (ಕ್ರೈಸ್ತ ಸಮುದಾಯದರ ಸ್ಮಶಾನದ ಬಳಿ), ಹೊಟೇಲ್ ಅಶೋಕ ಗ್ರಾö್ಯಂಡ್ (ಚರ್ಚ್ ಎದುರು), ನಂಜಪ್ಪ ಲೈಫ್ ಕೇರ್, ಗಾಡಿಕೊಪ್ಪ, ಮಹೇಂದ್ರ ಶೋ ರೂಂ ಎದುರು (ಗಾಡಿಕೊಪ್ಪ), ಕಾಸ್ಮೋ ಕ್ಲಬ್, ಪ್ರೊ. ಬಿ.ಕೃಷ್ಣಪ್ಪ ಸರ್ಕಲ್.
- ಎನ್’ಟಿ ರಸ್ತೆ
ಎಚ್’ಪಿ ಪೆಟ್ರೋಲ್ ಬಂಕ್ ಎದುರು, ಮಂಡ್ಲಿ (ಎಡಭಾಗ), ಮಂಡ್ಲಿ (ಬಲಭಾಗ) - ಬೈಪಾಸ್ ರಸ್ತೆ
ತುಂಗಾ ನದಿ ಹೊಸ ಸೇತುವೆ, ಸೂಳೆಬೈಲು (ಎಡಭಾಗ), ಊರುಗಡೂರು (ಬಲ ಭಾಗ), ಬೈಪಾಸ್ ರಸ್ತೆ ನರ್ಸಿಂಗ್ ಕಾಲೇಜು ಹತ್ತಿರ ನಂಜಪ್ಪ ಬಡಾವಣೆ, ಊರು ಗಡೂರು ಸರ್ಕಲ್ (ಎಡ ಭಾಗ), ಸೂಳೆಬೈಲು (ಬಲ ಭಾಗ), ನಿಸರ್ಗ ಲೇಔಟ್, ಪ್ರಿಯಾಂಕಾ ಲೇಔಟ್ - ಹೊಳೆಹೊನ್ನೂರು ರಸ್ತೆ
ಸಿದ್ದೇಶ್ವರ ನಗರ 2ನೆಯ ಕ್ರಾಸ್, ಕೆನರಾ ಬ್ಯಾಂಕ್ ಎದುರು, ಗುರುಪುರ, ಪುರಲೆ, ಸುಬ್ಬಯ್ಯ ಮೆಡಿಕಲ್ ಕಾಲೇಜು - ಬಾಲರಾಜ ಅರಸ್ ರಸ್ತೆ:
ಮುಖ್ಯ ಅಂಚೆ ಕಚೇರಿ ಎದುರು, ತನಿಸ್ಕ್ ಜ್ಯೂವೆಲರ್ಸ್ ಎದುರು, ತಾಲೂಕು ಕಚೇರಿ ಎದುರು, ಕೆಇಬಿ ಸರ್ಕಲ್, ಮುಖ್ಯ ರೈಲ್ವೆ ನಿಲ್ದಾಣ - ಹೊನ್ನಾಳಿ ರಸ್ತೆ:
ಸಂಗೊಳ್ಳಿ ರಾಯಣ್ಣ ಸರ್ಕಲ್, ಶೃತಿ ಶೋ ರೂಂ ಎದುರು ಹೊನ್ನಾಳಿ ರಸ್ತೆ (ಶಾಂತಿ ನಗರ), ಶ್ರೀ ನಾಗಪ್ಪ ಸರ್ಕಲ್ ಶಾಂತಿನಗರ, ಪೇಸ್ ಕಾಲೇಜ್ ಎದುರು, ತ್ಯಾವರೆ ಚಟ್ನಳ್ಳಿ - ಗೋಪಾಲಗೌಡ ಬಡಾವಣೆ
ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀನ್, ಪದ್ಮಾ ಟಾಕೀಸ್, ಅಣ್ಣಾ ನಗರ ಚಾನಲ್, ಗೋಪಾಳ ವಿನಾಯಕ ಸರ್ಕಲ್, ಗುಡ್ ಲಕ್ ಸರ್ಕಲ್ (ಸ್ವಾಮಿ ವಿವೇಕಾನಂದ ಬಡಾವಣೆ), ವೃದ್ಧಾಶ್ರಮ - ವಿನೋಬನಗರ
ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ (ಪೊಲೀಸ್ ಠಾಣೆ ಹಿಂಭಾಗ), ಇಂದಿರಾ ಗಾಂಧಿ ಸರ್ಕಲ್ (ಬಲಭಾಗ), ಇಂದಿರಾ ಗಾಂಧಿ ಸರ್ಕಲ್ (ಎಡ ಭಾಗ), ವಿನೋಬನಗರದ ಶಿವಾಲಯ, ಹಳೆ ಜೈಲ್ ಹತ್ತಿರ (ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರ ಬಳಿ, ಮಾಧವ ನೆಲೆ ಬಳಿ (ಕಲ್ಲಹಳ್ಳಿ – ಕಾಶಿಪುರ ರಸ್ತೆ).
- 100 ಅಡಿ ರಸ್ತೆ:
ನಿರ್ಮಲಾ ಆಸ್ಪತ್ರೆ ಬಳಿ, ರಾಜೇಂದ್ರ ನಗರ ಚಾನಲ್ ಬಳಿ, ಗಾಂಧಿ ನಗರ, ರವೀಂದ್ರ ನಗರ ಗಣಪತಿ ದೇವಸ್ಥಾನ, ಬ್ಲಡ್ ಬ್ಯಾಂಕ್ ಬಳಿ - ಗೋಪಾಳ 100 ಅಡಿ ರಸ್ತೆ
ಮೋರ್ ಶಾಪ್ ಬಳಿ, ಗೋಪಾಲಗೌಡ ಬಡಾವಣೆ ಎಚ್ ಬ್ಲಾಕ್ ಪೆಟ್ರೋಲ್ ಬಂಕ್ ಎದುರು - ತುಂಗಾ ನಗರ 100 ಅಡಿ ರಸ್ತೆ
ಚಾಲುಕ್ಯ ನಗರ (ಎಡಭಾಗ), (ಬಲಭಾಗ), ಚಾಲುಕ್ಯ ನಗರ ಓಪನ್ ಗ್ರೌಂಡ್, ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ರಿಂಗ್ ರೋಡ್ - ಎನ್’ಆರ್‌ಪುರ ರಸ್ತೆ:
ಜ್ಯೋತಿ ನಗರ, ಒಡ್ಡಿನಕೊಪ್ಪ, - ವಿಜಯ ನಗರ:
ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್ - ಸೋಮಿನಕೊಪ್ಪ ರಸ್ತೆ:
ಕಾಶಿಪುರ ಮುಖ್ಯ ರಸ್ತೆ ಎಸ್’ಆರ್’ಎಸ್ ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯ ರಸ್ತೆ, ಆದರ್ಶ ನಗರ - ಜೈಲ್ ರಸ್ತೆ:
ಹೊಸಮನೆ ಬಡಾವಣೆ - ಬೊಮ್ಮನಕಟ್ಟೆ ರಸ್ತೆ:
ಬೊಮ್ಮನಕಟ್ಟೆ (ಬಲಭಾಗ), (ಎಡಭಾಗ) - ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post