ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿವಿಯ 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್’ಗಳ ಪ್ರವೇಶಾತಿಯನ್ನು ಡಿಸೆಂಬರ್ 19 ಮತ್ತು 20ರಂದು ನಡೆಸುವುದಾಗಿ ವಿವಿ ತಿಳಿಸಿದೆ.
ವಿವಿಯ 2022-23 ನೇ ಶೈಕ್ಷಣಿಕ ಸಾಲಿನ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಮತ್ತು ವಿಭಾಗಗಳ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗಾಗಿ ಡಿ. 16ರಂದು ಮೆರಿಟ್ ಆಧರಿತ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಡಿ.19 ರಂದು ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ ಸೀಟುಗಳ ಪ್ರವೇಶಾತಿ ನಡೆಯಲಿದ್ದು, ಮರುದಿನ ಡಿ. 20 ರಂದು ಮೆರಿಟ್ ಕಮ್ ಪೇಮೆಂಟ್ ಸೀಟುಗಳ ಪ್ರವೇಶಾತಿಯು ನಡೆಯಲಿದೆ.
ಈ ಸಾಲಿನ ಪ್ರವೇಶಾತಿಯನ್ನು ಡಿಸೆಂಬರ್ 17ರಂದು ನಡೆಸುವುದಾಗಿ ಈ ಮೊದಲು ತಿಳಿಸಲಾಗಿತ್ತು. 17ರಂದು ರಾಜ್ಯಾದ್ಯಂತ ಎನ್.ಎಸ್.ಯು.ಐ. ವತಿಯಿಂದ ವಿದ್ಯಾರ್ಥಿಗಳ ಮುಷ್ಕರ ಇರುವುದರಿಂದ ಕೌನ್ಸಿಲಿಂಗ್ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post