ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೋವಿಡ್ 19 ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಘೋಷಣೆ ಮಾಡಿರುವ ಲಾಕ್’ಡೌನ್ ನಾಳೆಯಿಂದ ಮತ್ತಷ್ಟು ಬಿಗಿಯಾಗಲಿದ್ದು, ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲಾಕ್’ಡೌನ್ ಅನ್ನು ರಾಜ್ಯದಾದ್ಯಂತ ನಾಳೆಯಿಂದ ಬಿಗಿಗೊಳಿಸಲು ಆದೇಶಿಸಲಾಗಿದೆ. ಜನರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲವಾದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಿಂದ ಹೊರ ಊರಿಗೆ ಹೋಗುವವರು ಇಂದು ರಾತ್ರಿಯೊಳಗೆ ಹೋಗಿ, ಬರುವವರು ಇಂದು ರಾತ್ರಿಯೊಳಗೆ ಬಂದು ಸೇರಿಕೊಳ್ಳಿ. ನಾಳೆಯಿಂದ ಬೆಂಗಳೂರಿನೊಳಕ್ಕೆ ಯಾರಿಗೂ ಪ್ರವೇಶವಿಲ್ಲ. ಬೆಂಗಳೂರಿನಿಂದ ಯಾರೂ ಸಹ ಹೊರಕ್ಕೆ ಹೋಗುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸೋಂಕು ಹರಡುವ ಭೀತಿಯಿಂದಾಗಿ ಇಂದಿರಾ ಕ್ಯಾಂಟೀನ್’ನಲ್ಲಿ ಆಹಾರ ಸರಬರಾಜನ್ನು ಸ್ಥಗಿತಗೊಳಿಸಿದ್ದೇವೆ. ಬದಲಾಗಿ ಕಾರ್ಮಿಕರಿಗೆ ಒಂದು ಸಾವಿರ ರೂ. ಸಹಾಯಧನ ನೀಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post