ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈಮಾನದಾಗೆ ಹೊಗೆ ಬಿಡ್ತಾರೆ ಯಾರು ಹೊರಗೆ ಹೋಗೋಂಗಿಲ್ಲ. ಮೋದಿ ಈಮಾನ ಭಾನುವಾರ ಕೋರೆನಾ ಹೊಗೆ ಬೊಡ್ತಾತಂತೆ ಇನ್ನೂ ಅ ಜ್ವರ ಬರಲ್ಲ. ಮಾಸ್ಕ್ ಇಲ್ದೆ ಎಲ್ಲೂ ಹೋಗೊ ಹಾಗಿಲ್ಲಂತೆ. ಕೋರೆನಾ ಬಂದ್ರೆ ಪೋಲಿಸ್ರು ಬಂದ್ ಎತ್ತು ಹಾಕೊಂಡು ಹೋಗ್ತಾರಂತೆ. ಈಗ ಒಬ್ಬ ದುಬಾಯಿ ಇಂದ ಬಂದಾವನು ಬಂದಿದ್ದ ಅವನಿಗೆ ಕೋರೆನಾ ಇದೆ ಅಂತೆ. ಊರಿಗೆಲ್ಲ ಕೋರೆನಾ ಬಾರದೆ ಇರುವುದಕ್ಕೆ ಔಷಧಿ ಸಿಂಪಡಿಸ್ತಾರಂತೆ. ಹೇಯ್ ಕೊರೆನಾ ಜ್ವರ ನಮ್ಮಂತ ಬಡವರಿಗೆ ಬರಕಿಲ್ಲ ಅದು ಈಮಾನದಾಗೆ ಓಡಾಡೊರಿಗೆ ಮಾತ್ರ ಅಂಟೋ ಕಾಯಿಲೆ. ನಾವು ಹಳ್ಳಿ ಹೈಕ್ಳು ಬೀರಾನ್ ಬಿಸಿಲಲ್ಲಿ ಕ್ಯಾಮೆ ಮಾಡೋರಿಗೆ ಈ ಕೊರೊನಾ ಹುಳ ತಗೀದ್ರು ಬಿಸಿಲಿಗೆ ಎಲ್ಲಿ ಬದುಕೀತು. ನಮ್ಮ ಹತ್ರ ಕೊರೊನಾ ಬಂದ್ರೆ ಅದೇ ಸತ್ತು ಹೋಗುತ್ತೆ.
ಇಂತಹ ಹತ್ತು ಹಲವು ಮಾತುಗಳು ಮನೆಯಿಂದ ಮನೆಗೆ ಊರಿಂದ ಊರಿಗೆ ಹರಿದಾಡುತ್ತಿವೆ. ಇಪ್ಪತ್ತನೆಯ ಶತಮಾನದ ಮನುಕುಲಕ್ಕೆ ಸವಾಲಾಗಿರುವ ಕೊರೋನಾ ವೈರಾಣುವಿನ ಬಗ್ಗೆ ತಲಾ ಒಂದೊಂದು ಮಾತುಗಳು ಕೇಳಿ ಬರುತ್ತಿವೆ. ಇದು ಎಲ್ಲಿಂದ ಬಂತು ಎಷ್ಟೆಲ್ಲ ಜನಗಳಿಗೆ ಹರಡಿದೆ? ವೈರಾಣುವಿನ ಗುಣ ಲಕ್ಷಣ ಹಾಗೂ ಸ್ವರೂಪಗಳೇನು? ಇವೆಲ್ಲ ತಿಳಿದುಕೊಂಡು ಜನಸಾಮನ್ಯರಿಗೆ ಆಗಬೇಕಾಗಿರುವುದೇನು ಇಲ್ಲ.
ಕೊರೊನಾ ಎನ್ನುವ ವೈರಾಣುವಿನಿಂದ ದೂರವಿರಲು ಒಬ್ಬ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳ ತಯಾರಿಯಿಂದ ಏನು ಪ್ರಯೋಜನ ಇಲ್ಲ.
ಮುಖ್ಯವಾಗಿ
- ಪ್ರತಿಯೊಬ್ಬರೂ ಅನುಸರಿಸಲೇಬೇಕಾದ ಕ್ರಮಗಳನ್ನು ಅರಿತು, ದಿನನಿತ್ಯ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು
- ಕಣ್ಣು ಮೂಗು ಕಿವಿ ಭಾಗಗಳನ್ನು ಮಟ್ಟಲೇಬೇಕಾದ ಅನಿವಾರ್ಯತೆ ಬಂದಲ್ಲಿ ಕೈಗಳನ್ನು ಸ್ವಚ್ಛ ಮಾಡಿಕೊಂಡು ಮಟ್ಟಬೇಕು
- ಸಾಧ್ಯವಾದಷ್ಟು ಬಿಸಿ ನೀರನ್ನು ಕುಡಿಯಬೇಕು
- ಸಾರ್ವಜನಿಕ ಸ್ಥಳಗಳಿಗೆ ಬೇಟಿ ನೀಡುವುದನ್ನು ನಿಲ್ಲಿಸಬೇಕು
- ಸರ್ಕಾರ ಕೈಗೊಂಡ ಕ್ರಮಗಳಿಗೆ ಸಹಕಾರ ನೀಡಬೇಕು
ಈ ಮೇಲ್ಕಂಡ ವಿಷಯಗಳು ಓದು ಬರಹ ಬರುವವರಿಗೆ ಇಷ್ಟರಲ್ಲಿ ಹಾಗಲೇ ತಿಳಿದಿರುವ ಸಂಗತಿಯಾಗಿದ್ದರೂ, ಇಲ್ಲಿ ಮೂತ್ರ ಮಾಡಬಾರದು ಎಂದು ನಾಮಫಲಕ ಹಾಕಿರುವ ಜಾಗದ ಮುಂದೆ ಮೂತ್ರ ವಿರ್ಸಜಿಸಿಯೇ ಅಭ್ಯಾಸ ಆಗಿರುವ ಭರತೀಯ ಪ್ರಜೆಗಳಾದ ನಮಗೆ ಈ ವೈರಸ್ ಎಷ್ಟೆಲ್ಲ ಪರಿಣಾಮ ಬೀರುತ್ತದೆ.
ಒಂದು ವೇಳೆ ಕೊರೋನಾ ಸೋಂಕು ಹರಡಿದರೆ ಏನೆಲ್ಲ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಇವೇ ಇತ್ಯಾದಿ ಸೂಕ್ತ ಮಾಹಿತಿ ತಿಳಿದುಕೊಂಡರೂ ಯುಗಾದಿ ಆಚರಿಸುವುದೊಂದೇ ತಲೆಯಲ್ಲಿ ಇಟ್ಟುಕೊಂಡು ಇದೇ ಕೊನೆ ಯುಗಾದಿ ಈ ಜನ್ಮಕ್ಕೆ ಮತ್ತೆಂದೂ ಈ ಸುದಿನ ಬಾರದೆಂಬ ಅದಮ್ಯ ವಿಶ್ವಾಸದೊಂದಿಗೆ ಯುಗಾದಿ ಹಬ್ಬಕ್ಕೆ ಬೇಕಾದ ಎಣ್ಣೆ-ಬೆಣ್ಣೆ, ಸೊಪ್ಪು-ಸೇದೆ, ಹಣ್ಣು-ಹೂ ತರಲು ಸಿಕ್ಕಿತೋ ಇಲ್ಲೋ ಎನ್ನುವಾಗೆ ಮಾರ್ಕೆಟ್’ಗೆ ಲಗ್ಗೆ ಹಾಕಿ ಇರುವುದೆಲ್ಲ ಬಾಚಿ ತುಂಬಿಕೊಂಡು ಬರುವ ಹುಚ್ಚು ಸಾಹಸದಲ್ಲಿ ಸಾರ್ವಜನಿಕರೆಲ್ಲ ಹೊಂದಾಗಿರುವುದು ಮನುಕುಲಕ್ಕೆ ಮಾರಕದ ಸಂಗತಿ.
ಇನ್ನು ಒಂದೆರಡು ವಾರಗಳು ಕಳೆದ ಮೇಲೆ ಕೊರೊನಾದ ಪರಿಣಾಮಗಳು ನಮ್ಮನ್ನು ಕಾಡಲು ಶುರು ಮಾಡುತ್ತದೆ. ಈಗಾಗಲೇ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಡವಾಗಿ ಜಾರಿ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ಸರ್ಕಾರ ಬೇಕಾದ ಅವಶ್ಯ ಕ್ರಮ ಕೈಗೊಳ್ಳಬೇಕಾಗಿತ್ತು. ಕೊನೆ ಪಕ್ಷ ಆರೋಗ್ಯ ಇಲಾಖೆಯೊಂದಿಗೆ ಚರ್ಚೆಸಿ ಕೊರೋನಾ ಬಂದಲ್ಲಿ ಪೂರ್ವ ಸಿದ್ಧತೆಗಳೇನು ವೈದ್ಯರಿಗೆ ಹಾಗೂ ಅವರ ಸಿಬ್ಬಂದಿ ವರ್ಗಕ್ಕೆ ಬೇಕಾದ ವಸ್ತುಗಳ ಪೂರೈಕೆ ಹಾಗೂ ಮಾನಸಿಕವಾಗಿ ತಯಾರು ಮಾಡಬೇಕಾಗಿತ್ತು.
ಕೇವಲ ಒಂದು ದಿನ ಜನತಾ ಕರ್ಪ್ಯೂ ಎಂದು ಘೋಷಿಸಿ ಶಹಬಾಸ್ ಎಲ್ಲರೂ ಪ್ರಧಾನಮಂತ್ರಿಗಳ ಮಾತು ಕೇಳಿದಾರೆ. ಕೊರೋನಾ ಮೋದಿ ಘರ್ಜನೆಗೆ ಚೀನಾಕ್ಕೆ ಓಡಿದೆ ಎಂದು ವಿಷ್ಯೂಲ್ ಮಿಡಿಯಾದ ಬೊಬ್ಬೆ ಹಾಕುವ ಮಾಪಿಯಾಕ್ಕೆ ಬಲಿಯಾಗದೇ ಸ್ವಲ್ಪ ಪ್ರಜ್ಞಾವಂತಿಕೆಯಿಅದ ಚಿಂತಿಸಿಬೇಕಾದ ಸಮಯ ಇದಾಗಿದೆ.
ಸುಳ್ಳು ಸುದ್ದಿಗಳಿಂದ ಜನ ಪ್ಯಾನಿಕ್ ಆಗಿರುವುದು ಒಂದು ಕಡೆಯಾದರೇ, ನಮಗೇನು ಆಗಲ್ಲ ಎಂದು ನಿರ್ಲಕ್ಷ್ಯ, ಉದಾಸೀನಾದಿಂದ ಹುಂಬುತನ ಮೆರೆಯುವವರೂ ಇನ್ನೊಂದೆಡೆ. ಕ್ರಾನಿಕ್ ಪೆಷಟ್ಸ್ ದಿನ ನಿತ್ಯದ ಚಿಕಿತ್ಸೆ ಪಡೆದು ಜೀವನ ತಳ್ಳುತಿರುತ್ತಾರೆ ಅವರಿಗೆಲ್ಲ ಈ ಕಾಯಿಲೆ ಬಾರದಂತೆ ತಡೆಯುವುದು ಹೇಗೆ? ಕಾಯಿಲೆ ಬಂದ ಕುಟುಂಬಸ್ಥರ ಸ್ಥಿತಿಗಳೇನು? ಒಂದು ವೇಳೆ ಕೊರೋನಾದಿಂದ ಜೀವವೇ ಬಲಿಯಾದಲ್ಲಿ ಅ ಕುಟುಂಬದ ಮಾನಸಿಕ ಸಾಮಾಜಿಕ ಸ್ಥಿತಿ-ಗತಿಗಳೇನು? ಇದೆಲ್ಲವನ್ನೂ ನಾವು ವಾಸಿಸುವ ಸಮಾಜ ಬಗ್ಗೆ ಗಂಭೀರವಾಗಿ ಯೋಚಿಸಿಲೇಬೇಕಿದೆ. ಇಂದು ಯಾರಿಗೋ ಬಂದಿದ್ದು ನಮಗೆ ಬಾರದು ಎನ್ನುವ ಕಾಯಿಲೆ ಅಲ್ಲ ಈ ಕೊರೋನಾ.
ಕಾಯಿಲೆಯನ್ನು ತಂದವರನ್ನು ಬೈಯ್ಯಬೇಕಾ, ಕಾಯಿಲೆ ಉದ್ಬವಿಸಿದ ಚೀನಾವನ್ನು ದೋಷಿಸಬೇಕಾ? ಇಡೀ ಜಗತ್ತು ಕೊರೋನಾ ವೈರಸ್ ಮುಂದೆ ಭಯಪಡುವಂತ್ತಾಗಿದ್ದು ವಿದ್ಯಾವಂತ ಉದ್ಯೋಗವಂತ ಪೀಳಿಗೆಯಿಂದ ಅವರುಗಳಿಗೆ ಶಪಿಸಬೇಕಾ? ಇಂತಹ ಅನೇಕಾ ಪ್ರಶ್ನೆಗಳು ಅಕ್ಕ-ಪಕ್ಕದವರೊಂದಿಗೆ ಮಾತನಾಡಿ ವಿಮರ್ಶಿಸುವಾಗ ಹುಟ್ಟುತ್ತವೆ. ಇದ್ಯಾವುದಕ್ಕೂ ಸಮಯ ಇದಲ್ಲ.
ಕೊರೋನಾ ಬಂದವರೆಲ್ಲ ಸತ್ತೆ ಹೋಗುತ್ತಾರೆಂದೂ ಅಲ್ಲ. ಎಲ್ಲ ಜ್ವರಗಳಾಗೆ ಈ ವೈರಸ್ ಜ್ವರವು ಬಾಧಿಸುತ್ತದೆ. ಜ್ವರ ಬಂದಾಗ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯ ಪ್ರಭಾವದಿಂದ ಜ್ವರ ವಾಸಿಯಾಗುತ್ತದೆ. ಹೀಗೆ ಎಲ್ಲರಿಗೂ ಆಗುತ್ತದೆಂದಲ್ಲ. ಅವರವರ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ.
ಇಟಲಿಯಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸೌಲಭ್ಯವಿರುವ ದೇಶದಲ್ಲಿಯೇ ಕೊರೋನಾ ಬಂದ ಶೇ.45 ರಷ್ಟು ಜನ ಮೃತಪಟ್ಟಿರುವುದು ಅಘಾತಕಾರಿ ಸಂಗತಿ. ಭಾರತದಲ್ಲಿ ಶಿಷ್ಟಾಚಾರಗಳನ್ನು ಪಾಲಿಸುವುದು ಅತಿ ವಿರಳ ಇನ್ನು ಇಲ್ಲಿ ಏನಾದರೂ ವೈರಾಣು ಅತಿ ವೇಗದಲ್ಲಿ ಹರಡಿದರೇ ಆಸ್ಪತ್ರೆಗಳು, ವೈದ್ಯರು ಮತ್ತು ಸಿಬ್ಬಂದಿ ವರ್ಗ ಸಾಕಾಗುವಷ್ಟು ಇಲ್ಲದಾಗುತ್ತದೆ. ಹಾಗಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿರುವುದು ಮನೆ ಬಿಟ್ಟು ಎಲ್ಲೂ ಹೋಗಬೇಡಿ. ನಿಮ್ಮ ಸುರಕ್ಷತೆ ದೇಶದ ರಕ್ಷಣೆ ಇದ್ದಂತೆ. ಬೇರೆ ಯಾರನ್ನೋ ನೋಡಿಕೊಳ್ಳುವುದು ಬೇಡ ತಮ್ಮನ್ನು ತಾವು ಜಾಗುರೂಕತೆಯಿಂದ ಗಮನ ವಹಿಸಿದರೇ ಸಾಕು. ಸಂಕ್ರಾಮಿಕ ಕೊರೋನಾ ವೈರಾಣು ಹರಡದಂತೆ ಮಾಡುವುದೊಂದೇ ಸದ್ಯಕ್ಕಿರುವ ಅತಿ ದೊಡ್ಡ ಸವಾಲು. ಇಡೀ ಜಗತ್ತು ಒಂದಾಗಿ ಈ ವೈರಾಣುವಿನಿಂದ ಮುಕ್ತಿ ಹೊಂದಬೇಕಿದೆ. ನಾವೆಲ್ಲರೂ ಮನೆಯಲ್ಲಿದ್ದು ಕೊರೋನಾ ವೈರಾಣುವನ್ನು ಹೋಗಲಾಡಿಸೋಣ.
Get in Touch With Us info@kalpa.news Whatsapp: 9481252093
Discussion about this post