ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
ಕುಖ್ಯಾತ ಕ್ರಿಮಿನಲ್ #Criminal ಹಾಗೂ ರಾಜಕಾರಣಿಯಾಗಿದ್ದ ಮುಖ್ತಾರ್ ಅನ್ಸಾರಿ(60) #GangsterMukhtarAnsari ಇಂದು ಸಾವನ್ನಪ್ಪಿದ್ದು, ತೀವ್ರ ಹೃದಯಾಘಾತ ಕಾರಣ ಎಂದು ವರದಿಯಾಗಿದೆ.
ಇಂದು ಆರೋಗ್ಯ ಹದಗೆಟ್ಟಿದ್ದ ಅನ್ಸಾರಿಯನ್ನು ಬಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾತ್ರಿ ವೇಳೆಗೆ ನಿಧನರಾಗಿದ್ದಾರೆ.
ಮುಖ್ತಾರ್ ಅನ್ಸಾರಿ ನಿಧನದ ಹಿನ್ನೆಲೆಯಲ್ಲಿ ಆತನ ವ್ಯಾಪಕ ಪ್ರಭಾವ ಹೊಂದಿರುವ ಗಾಜಿಪುರದಲ್ಲಿ ಉತ್ತರ ಪ್ರದೇಶ #UttarPradesh ಸರ್ಕಾರ ಸೆಕ್ಷನ್ 144 ಜಾರಿಗೊಳಿಸಿದೆ.
ಇನ್ನು, ಈತನ ವ್ಯಾಪಕ ಪ್ರಭಾವವನ್ನು ಹೊಂದಿದ್ದ ಗಾಜಿಯೂರ್, ಬಲಿಯಾ ಮತ್ತು ಪ್ರಯಾಗ್ರಾಜ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಭದ್ರತಾ ಪಡೆ ಕಣ್ಣಿಟ್ಟಿದೆ.
ಇದಕ್ಕೂ ಮುನ್ನ ಮುಖ್ತಾರ್ ಅನ್ಸಾರಿ ಅವರನ್ನು ಮಂಗಳವಾರ ಡಿಸ್ಚಾರ್ಜ್ ಆದ ನಂತರ ಉತ್ತರ ಪ್ರದೇಶದ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಿಂದ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post