ಕಲ್ಪ ಮೀಡಿಯಾ ಹೌಸ್ | ಹಾಸನ |
ಹಾಸನ #Hassan ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ #PrajwalRevanna ಅವರು ಇಂದು ನಾಮಪತ್ರ ಸಲ್ಲಿಸಿದ್ದು, ಒಟ್ಟು 40.94 ಕೋಟಿ ರೂ. ಮೌಲ್ಯ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.
ಗುರುವಾರ ನಾಮಪತ್ರದ ಜೊತೆಯಲ್ಲಿ ಅಫಿಡವಿಟ್ #Affidavit ಸಲ್ಲಿಸಿರುವ ಅವರು ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಿದ್ದಾರೆ.
ಪ್ರಜ್ವಲ್ ಆಸ್ತಿ ವಿವರ?
- 5.44 ಕೋಟಿ ರೂ. ಮೌಲ್ಯದ ಚರ ಆಸ್ತಿ
- 40.94 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
- ಒಟ್ಟಾರೆ 40.94 ಕೋಟಿ ರೂ. ಮೌಲ್ಯ ಆಸ್ತಿ
- 9.29 ಲಕ್ಷ ರೂ. ನಗದು
- ಬ್ಯಾಂಕ್ ಉಳಿತಾಯ ಖಾತೆಯಲ್ಲಿ 57 ಲಕ್ಷ ರೂ. ನಗದು
- 5 ವರ್ಷದ ಕೃಷಿಯಿಂದ 2.75 ಕೋಟಿ ರೂ. ಆದಾಯ
- ಕೃಷಿಯೇತರ ಮೂಲದಿಂದ 1.33 ಕೋಟಿ ರೂ. ಆದಾಯ
- 31 ಹಸು, 4 ಎತ್ತು, ಒಂದು ಟ್ರಾಕ್ಟರ್
- ಬೆಂಗಳೂರು ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡ
- ಹೊಳೆನರಸೀಪುರ, ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ
ಎಷ್ಟಿದೆ ಪ್ರಜ್ವಲ್ ಸಾಲ?
- ಅತ್ತೆ ಅನುಸೂಯ ಅವರಿಂದ 22 ಲಕ್ಷ ರೂ.
- ಅತ್ತೆ ಶೈಲಜಾ ಅವರಿಂದ 10 ಲಕ್ಷ ರೂ.
- ತಂದೆ ರೇವಣ್ಣ ಅವರಿಂದ 86 ಲಕ್ಷ ರೂ.
- ಸಹೋದರ, ಎಂಎಲ್’ಸಿ ಡಾ.ಸೂರಜ್ ಅವರಿಂದ 1 ಕೋಟಿ ರೂ.
- ಕುಪೇಂದ್ರ ರೆಡ್ಡಿ ಅವರಿಂದ ಸಾಲ ಪಡೆದು ಒಟ್ಟು 4.48 ಕೋಟಿ ರೂ. ಸಾಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post