ಕಲ್ಪ ಮೀಡಿಯಾ ಹೌಸ್
ನವದೆಹಲಿ: ಇನ್ನು ಮುಂದೆ ಆರ್’ಟಿಒ ಅಧಿಕಾರಿಗಳು ನಡೆಸುವ ಪರೀಕ್ಷೆಯಿಲ್ಲದೇ ಡ್ರೈವಿಂಗ್ ಲೈಸೆನ್ಸ್ ಪಡೆಯವ ಅವಕಾಶವನ್ನು ಕೇಂದ್ರ ಸರ್ಕಾರವನ್ನು ನಾಗರಿಕರಿಗೆ ಕಲ್ಪಿಸಿದೆ.
ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ನಿಯಮವನ್ನು ರೂಪಿಸಿದ್ದು ಇದು ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ಈ ಹೊಸ ನಿಯಮದ ಅನ್ವಯ ಡಿಎಲ್ ಪಡೆಯಬೇಕಾದರೆ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಲ್ಲಿ, ಶ್ರೇಷ್ಠ ಗುಣಮಟ್ಟದ ಕೋರ್ಸ್ ಪಡೆದವರು ನಡೆಸುವ ಡ್ರೈವಿಂಗ್ ಟೆಸ್ಟ್’ನಲ್ಲಿ ಉತ್ತೀರ್ಣರಾದರೆ ಆರ್’ಟಿಒ ಅಧಿಕಾರಿಗಳು ನಡೆಸುವ ಡಿಎಲ್ ಪರೀಕ್ಷೆಯಿಂದ ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.
ಇನ್ನು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿಗಳು ಹೊಸ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿವೆ. ನೋಂದಣಿ ಪ್ರಮಾಣಪತ್ರದ ನವೀಕರಣವನ್ನು ಈಗ 60 ದಿನಗಳ ಮುಂಚಿತವಾಗಿ ಮಾಡಬಹುದು. ತಾತ್ಕಾಲಿಕ ನೋಂದಣಿಯ ಸಮಯ ಮಿತಿಯನ್ನು ಈಗಿರುವ 1 ತಿಂಗಳಿಂದ 6 ತಿಂಗಳುಗಳಿಗೆ ಹೆಚ್ಚಿಸಲಾಗಿದೆ.
ಮೋಟಾರು ವಾಹನ ದಾಖಲೆಗಳ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಪರವಾನಗಿಗಳ ಮಾನ್ಯತೆಯನ್ನು 2021 ಜೂನ್ 30 ರವರೆಗೆ ವಿಸ್ತರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post