ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ವಿರುದ್ಧದ ಹೋರಾಟ ನಡೆಸಲು ಹಾಗೂ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ನೆರವಾಗುವಂತೆ ವಿದೇಶದಿಂದ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಕೋವಿಡ್ ಉಪಕರಣಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.
ವಿದೇಶದಲ್ಲಿ ನೆಲೆಸಿರುವ ಶಿವಮೊಗ್ಗದ ಭೂಪಾಳಂ ಚಂದ್ರಶೇಖರಯ್ಯ ಅವರ ಮಗ ಡಾ. ರುಕ್ಮಯ್ಯ ಭೂಪಾಳಂ, ಮಗಳು ಡಾ.ನಿರ್ಮಲ ಹಾಗೂ ತರೀಕೆರೆಯ ಮೂಲದವರಾದ ಡಾ.ಕೃಷ್ಣಮೂರ್ತಿ ಅವರು ಈ ಸಾಮಾಜಿಕ ಸ್ಫಂದನೆಗೆ ಕೈಜೋಡಿಸಿದ್ದಾರೆ.
ಪ್ರಸ್ತುತ ಯುನೈಟೆಡ್ ಸ್ಟೆಟ್‌ನ ಕೆಂಟುಕಿ ದೇಶದ ಲೂಯಿಸ್ ವಿಲ್ಲೆನಲ್ಲಿ ನೆಲೆಸಿರುವ ಇವರು ಶಿವಮೊಗ್ಗ ರೋಟರಿಯವರ ಮನವಿಗೆ ಸ್ಫಂದಿಸಿ ಲೂಯಿಸ್ ವಿಲ್ಲಿ ನಾರ್ಥನ್ ಹೆಲ್ತ್ ಕೇರ್ ಆಸ್ಫತ್ರೆಯಿಂದ ಆಧುನಿಕ ತಂತ್ರಜ್ಞಾನವುಳ್ಳ ಕೋವಿಡ್ ಚಿಕಿತ್ಸಾ ಉಪಕರಗಳು, ವೆಂಟಿಲೇಟರ್, ಆಮ್ಲಜನಕ ಸಾಂದ್ರಕಗಳು ಸೇರಿದಂತೆ ನೂತನ ಪಿಪಿಇ ಕಿಟ್‌ಗಳು, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್‌ಗಳನ್ನು ಹೊತ್ತಕಂಟೈನರ್ ಸದ್ಯದಲ್ಲಿಯೇ ಶಿವಮೊಗ್ಗ ತಲುಪಲಿದೆ. ವಿದೇಶದಲ್ಲಿ ನೆಲೆಸಿರುವ ಡಾ. ಕೃಷ್ಣಮೂರ್ತಿಯವರು ಈಗಾಗಲೇ ಶಿವಮೊಗ್ಗ ನಗರದಲ್ಲಿ ಡಯಾಲಿಸಿಸ್ ಕೇಂದ್ರ, ಸ್ತನ ಪರೀಕ್ಷಣಾ ಕೇಂದ್ರದ ಸ್ಥಾಪನೆಗೆ ನೆರವಾಗಿದ್ದಾರೆ. ಹೀಗೆ ವಿದೇಶದಲ್ಲಿ ನೆಲೆಸಿದ್ದರು ತಮ್ಮ ಊರಿನ ಹಲವು ಸಂಕಷ್ಟಗಳಿಗೆ ಸ್ಫಂದಿಸಿದ್ದಾರೆ.ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಶಿವಮೊಗ್ಗದ ರೋಟರಿ ಸಂಸ್ಥೆಯು ಕೋವಿಡ್ ವಿರುದ್ದ ಹೋರಾಟ ನಡೆಸಲು ದಾನಿಗಳಿಂದ ಅಗತ್ಯ ನೆರವಿಗಾಗಿ ವಿನಂತಿಸಿಕೊಂಡಾಗ ಸಾಕಷ್ಟ ದಾನಿಗಳು ಸಹಾಯ ಹಸ್ತ ಚಾಚಿದ್ದರು.
ಇದೇ ವೇಳೆ ವಿದೇಶದಲ್ಲಿ ನೆಲೆಸಿರುವ ಡಾ.ರುಕ್ಮಯ್ಯ ಭೂಪಾಳಂ ಅವರ ನೇತೃತ್ವದಲ್ಲಿ ಆಧುನಿಕ ಉಪಕರಣಗಳು ಸೇರಿದಂತೆ ಹಲವು ಅವಶ್ಯಕ ವಸ್ತುಗಳನ್ನು ಶಿವಮೊಗ್ಗಕ್ಕೆ ಕೊಡುಗೆ ನೀಡಲು ಮುಂದೆ ಬಂದರು. ಎಸ್‌ಒಎಸ್ ಏಜೆನ್ಸಿಯ ಮೂಲಕ ಈಗಾಗಲೇ ಉಪಕರಣ ಹೊತ್ತ ಕಂಟೈನರ್ ರಫ್ತಾಗಿದ್ದು ಹದಿನೈದು ದಿನಗಳಲ್ಲಿ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಎಸ್.ದತ್ತಾತ್ರಿ ಅವರ ಸಹಕಾರದಿಂದ ಅಗತ್ಯ ಕಸ್ಟಮ್ ಅನುಮತಿ ಪಡೆಯಲಾಗಿದ್ದು ಕೆಲವು ಕಡಿಮೆ ದರದ ರಫ್ತು ಶುಲ್ಕಗಳನ್ನು ಜಿಲ್ಲಾಡಳಿತದಿಂದ ಭರಿಸಲು ಮಾನ್ಯ ಜಿಲ್ಲಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಮೊಗ್ಗ ರೋಟರಿಯ ಮಾಜಿ ಜಿಲ್ಲಾ ಗೌರ‌್ನರ್ ಡಾ.ಪಿ. ನಾರಾಯಣ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post