ಕಲ್ಪ ಮೀಡಿಯಾ ಹೌಸ್ | ನ್ಯಾಮತಿ |
ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ, ದೇವಸ್ಥಾನಗಳಲ್ಲಿ ನಮಗೆ ದೇವರ ಚೈತನ್ಯದ ಲಾಭವಾಗುತ್ತದೆ. ಇಲ್ಲಿನ ದೇವರ ಚೈತನ್ಯವು ನಮಗೆ ಪೂರ್ಣ ರೀತಿಯಲ್ಲಿ ಲಾಭವಾಗಬೇಕೆಂದರೆ ದೇವಸ್ಥಾನಗಳ ಪರಿಸರ ಸ್ವಚ್ಛ ಹಾಗೂ ನಿರ್ಮಲವಾಗಿರಬೇಕಾಗುತ್ತದೆ. ಈ ಉದ್ದೇಶದಿಂದ ಧರ್ಮಜಾಗೃತಿ ಸಮಿತಿ ವತಿಯಿಂದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಕಳೆದ ಸೋಮವಾರ, ಆ.29ರಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಶ್ರೀ ಕಾಳಿಕಾಂಬಾ ದೇವಸ್ಥಾನ ಮತ್ತು ಶ್ರೀ ಮಾರಿಕಾಂಬಾ ದೇವಸ್ಥಾನಗಳಲ್ಲಿ ಈ ಸ್ವಚ್ಛತಾ ಅಭಿಯಾನವು ನೆರವೇರಿತು. ಈ ವೇಳೆ ಧರ್ಮಜಾಗೃತಿ ಸಮಿತಿಯ ಕೆಲವು ಕಾರ್ಯಕರ್ತರು ಸಹಭಾಗಿಯಾಗಿದ್ದರು.
ಧರ್ಮಜಾಗೃತಿ ಸಮಿತಿಯು ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯ ಮಾಡುವ ಸಮಿತಿಯಾಗಿದ್ದು ಕಳೆದ ಕೆಲವು ವರ್ಷಗಳಿಂದ ದೇವಸ್ಥಾನ ಸ್ವಚ್ಛತೆ, ಬಡ ಜನರಿಗೆ ವಸ್ತ್ರ, ಆಹಾರ ಪದಾರ್ಥಗಳ ಪೂರೈಕೆ, ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ, ಮಾಸ್ಕ್ ವಿತರಣೆಯಂತಹ ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post