ಕಲ್ಪ ಮೀಡಿಯಾ ಹೌಸ್ | ಒಡಿಶಾ |
ಗೇಮಿಂಗ್ ವ್ಯಸನಕ್ಕೆ #Gaming addiction ತುತ್ತಾಗಿದ್ದ 21 ವರ್ಷದ ಯುವಕನೋರ್ವ ತನ್ನ ಚಟಕ್ಕೆ ಹೆತ್ತವರು ಹಾಗೂ ಸಹೋದರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಜಗತ್ಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಯಬಾದ ಸೇಥಿ ಸಾಹಿಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತರನ್ನು ಪ್ರಶಾಂತ್ ಸೇಥಿ ಅಲಿಯಾಸ್ ಕಾಲಿಯಾ (65), ಅವರ ಪತ್ನಿ ಕನಕಲತಾ (62) ಮತ್ತು ಮಗಳು ರೋಸಲಿನ್ (25) ಎಂದು ಗುರುತಿಸಲಾಗಿದೆ.
Also read: ರೈತರ ಹಕ್ಕುಪತ್ರ ವಜಾಕ್ಕೆ ನೋಟೀಸ್ | ತೀ.ನಾ. ಶ್ರೀನಿವಾಸ್ ಖಂಡನೆ | ಪ್ರತಿಭಟನೆ ಎಚ್ಚರಿಕೆ
21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನ ಆನ್‌ಲೈನ್ ಆಟಗಳ ಚಟಕ್ಕೆ ಆತನ ಹೆತ್ತವರು ಮತ್ತು ಸಹೋದರಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕ್ರುದ್ಧಗೊಂಡ ಯುವಕ ಕಲ್ಲುಗಳು ಅಥವಾ ಯಾವುದೇ ಇತರ ಗಟ್ಟಿಯಾದ ವಸ್ತುಗಳನ್ನು ಬಳಸಿ ತಂದೆ, ತಾಯಿ ಮತ್ತು ಸಹೋದರಿಯ ತಲೆಯನ್ನು ಒಡೆದಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್ ಉದ್ಗಟಾ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post