ಶಂಕರ್‌ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್` ಹೆಸರು ಕೇಳದವರಿಲ್ಲ. ಮಾಲ್ಗುಡಿ ಡೇಸ್ ಬಂದು ವರುಷಗಳೆ ಕಳೆದರೂ ಇಂದಿಗೂ ಮಾಲ್ಗುಡಿ ಡೇಸ್ ಜನಜೀವನದಲ್ಲಿ ಜೀವಂತ. ಈಗ ಅದೇ ಶೀರ್ಷಿಕೆ ಸಿನಿಮಾ ರೂಪದಲ್ಲಿ ಮೂಡಿ ಬರುತ್ತಿದೆ.
ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್ & ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ರತ್ನಾಕರ್ ಕಾಮತ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇದೇ ತಿಂಗಳಲ್ಲಿ ಆರಂಭವಾಗಲಿದೆ. ಚಿತ್ರದ ಮೊದಲ ಪೋಸ್ಟರನ್ನು ಇತ್ತೀಚೆಗೆ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ಹಿಂದೆ `ಅಪ್ಪೆ ಟೀಚರ್` ಎಂಬ ತುಳು ಚಿತ್ರವನ್ನು ಕಿಶೋರ್ ನಿರ್ದೇಶಿಸಿದ್ದರು. ಕಿಶೋರ್ ಮೂಡಬಿದ್ರೆ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಚಿತ್ರದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭವಾಗಲಿದೆ.









Discussion about this post