Yes, One Modi v/s All
ಮೂರು ಸಾಗರ ನೂರು ಮಂದಿರ ದೈವ ಸಾವಿರವಿದ್ದರೆ,
ಸಿಂಧುವಿದ್ದರೆ, ಗಂಗೆಯಿದ್ದರೆ ಗಿರಿ ಹಿಮಾಲಯವಿದ್ದರೆ,
ವೇದವಿದ್ದರೆ, ಶಾಸ್ತ್ರವಿದ್ದರೆ ಘನಪರಂಪರೆಯಿದ್ದರೆ ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ??
ಹೌದು, ಮೇಲೆ ಹೇಳಿರುವಂತಹ ಈ ಮಾತುಗಳು ಅಕ್ಷರಷಃ ಸಾರ್ವಕಾಲಿಕ ಸತ್ಯವಾದಂತಹ ನುಡಿಗಳು. ನಮ್ಮ ದೇಶ ತಾಯಿ ಭಾರತಿ ಅದಾವ ತಪ್ಪು ಮಾಡಿದ್ದಳೋ, ಅದಾವ ಜನ್ಮದ ಪಾಪದ ಫಲವೋ ಸರಾಸರಿ ಆರುನೂರು ವರುಷಗಳ ಕಾಲ ನಿರಂತರ ಮುಸಲ್ಮಾನರ ದೌರ್ಜನ್ಯಕ್ಕೆ ಒಳಗಾದಳು. ಅನಂತರ ವಿದೇಶಿ ವಸಾಹತುಶಾಹಿ ನಿರಂಕುಶ ಪ್ರಭುಗಳು ಅದೆಷ್ಟೋ ಕಾಲ ಅವಳಡಲೊಳಗಿನ ಆಸ್ತಿಗಳನ್ನೆಲ್ಲಾ ನಮ್ಮವರ ಕಣ್ಣ ಮುಂದೆಯೇ ದೋಚುತ್ತಿದ್ದರೂ ಅಸಹಾಯಕರಂತೆ ನಮ್ಮವರೆಲ್ಲ, ಎಲ್ಲಾ ನೋವುಗಳನ್ನೂ ಸಹಿಸಿ ಮೂಕಪ್ರೇಕ್ಷಕರಂತೆ ನೋಡುವಂತವರಾಗಿದ್ದರು. ಅಂತಹ ಕಾಲಘಟ್ಟದಲ್ಲಿ ಎಲ್ಲಾ ದೌರ್ಜನ್ಯಗಳಿಂದ ಭಾರತ ಮಾತೆಗೆ ಮುಕ್ತಿಗಾಗಿ ಒಬ್ಬ ಮಂಗಲಪಾಂಡೆ ಜೀವ ಕಳೆಯಬೇಕಾಯಿತು, ಒಬ್ಬ ಭಗತ್ ಸಿಂಗ್ ಅಮರವಾಗಬೇಕಾಯಿತು. ಇದೇ ರೀತಿ ಅನೇಕ ಭಾರತೀಯರ ರಕ್ತದ ಕಲೆಗಳ ಮೇಲೆ ಸ್ವಾತಂತ್ರ್ಯ ಪಡೆದುಕೊಂಡೆವು.
ಏನು ಫಲ?
ಸ್ವಾತಂತ್ರ್ಯವೇನೋ ಸಿಕ್ಕಿತು. ನಂತರದ ಪರಿಣಾಮ ಅರುವತ್ತು ವರುಷಗಳ ಕಾಲ ಕಾಂಗ್ರೇಸ್ಸಿನ ಕಪಿಮುಷ್ಟಿಯಲ್ಲಿ ದೇಶ, ದೇಶವಾಸಿಗಳು ಅದೆಷ್ಟು ಹಿಂಸೆ ಅನುಭವಿಸಿದರೆಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ಅರಬ್ಬರು, ಬ್ರಿಟೀಷರು ನಿರಂತರವಾಗಿ ದೋಚಿದರೂ ಬರಿದಾಗದ ದೇಶದ ಸಂಪತ್ತು ಅದೆಲ್ಲಿ ಮರೆಯಾಯಿತು..?
ಬೋಫೋರ್ಸ್ ಹಗರಣದಿಂದ ಹಿಡಿದು ಇಂದಿನ ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂವರೆಗೆ ಸಾಲು ಸಾಲು ಹಗರಣಗಳು. ಪರಿಣಾಮ ನಕಲಿ ಗಾಂಧಿ ಕುಟುಂಬ ಶ್ರೀಮಂತಿಕೆಯ ನಶೆಯಲ್ಲಿ ತೇಲಾಡಿದರು. ತಾಯಿ ಭಾರತಿ ತನ್ನ ಉಳಿವಿಗಾಗಿ ನಡುಬೀದಿಯಲ್ಲಿ ನಿಂತು ಅತ್ತು ಗೋಳಾಡಿದರೂ ಅವಳ ಕೂಗು ಆಲಿಸುವವರಿಲ್ಲ. ಕಣ್ಣೀರ ಒರೆಸುವವರಿಲ್ಲ.
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಃ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ॥
ಅಂತ ಭಗವಾನ್ ಕೃಷ್ಣನು ಅಂದು ನುಡಿದಿದ್ದನೋ, ವಿಧಿವಿಪರ್ಯಾಸವೆಂಬಂತೆ ಇಂದು ನಾವು ಮತ್ತದೇ ಸುವರ್ಣಘಟ್ಟವನ್ನು ಬಂದು ತಲುಪಿದ್ದೇವೆ.
ನಿರಂತರ ಹಗರಣ, ಟಿಪ್ಪುವಿನ ಜಝಿಯಾದಂತೆ ತನ್ನವರೇ ಮಾಡಿದ ಸಾಲದ ಹೊರೆಯ ಪ್ರಜೆಗಳ ಹೆಗಲ ಮೇಲೆ ಹಾಕಿ ಮನಬಂದಂತೆ ತೆರಿಗೆ ಕೀಳುವ ರಾವಣರಾಜ್ಯವ ಕೊನೆಗೊಳಿಸಿ, ಬತ್ತಿ ಬರಡಾಗಿರುವ ಭಾರತವ ಮತ್ತೆ ಚಿಗುರಿಸಿ ಜಗತ್ತಿಗೇ ಮಾದರಿಯಾಗಿ ಬೆಳೆಸಲು ಒಬ್ಬ ಧೀಮಂತ ನಾಯಕನ ಉಗಮವಾಗಿದೆ.
ಅಭಿವೃದ್ಧಿಯನ್ನೇ ಉಸಿರಾಗಿಸಿರುವ, ಸದಾ ದೇಶವಾಸಿಗಳ ಬಗ್ಗೆಯೇ ಚಿಂತಿಸಿ ಪ್ರತೀ ಕ್ಷಣಕ್ಕೊಂದರಂತೆ ಯೋಜನೆಗಳ ಜಾರಿಗೆ ತಂದು, ಮತ್ತದೇ ಶ್ರೀಮಂತ ಭಾರತವ ನಿರ್ಮಿಸಿ ದೇಶವನ್ನು ಜಗತ್ತಿಗೇ ಮಾದರಿಯಾಗಿ ರೂಪಿಸಬೇಕಾದರೆ ಅರುವತ್ತು ವರುಷಗಳ ನಂತರ ಒಬ್ಬ ಮೋದಿ ಬರಬೇಕಾಯಿತು.
ಬರೀ ಅಭಿವೃದ್ದಿಯಷ್ಟೇ ಅಲ್ಲ ದೇಶ ಆಂತರಿಕ ಭದ್ರತೆಗಾಗಿ, ವಿದೇಶಿ ಬಂಡವಾಳ ಹೂಡಿಕೆದಾರರಿಗಾಗಿ ಹಗಳಿರುಳೆನ್ನದೇ ಶತ್ರು, ಮಿತ್ರ ಎನ್ನದೇ ಜಗತ್ತಿನ ಎಲ್ಲಾ ರಾಷ್ಟ್ರಗಳ ಸುತ್ತಿ ನವನವೀನ ಆವಿಷ್ಕಾರಗಳ ತಂದು ಭಾರತದ ಪತಾಕೆಯ ವಿಶ್ವಮಟ್ಟದಲ್ಲಿ ಹಾರಿಸುತ್ತಿದ್ದರೂ, ಭವ್ಯ ಭಾರತದ ಸತ್ಪ್ರಜೆಗಳಾದ ನಾವುಗಳು ಮಾಡುತ್ತಿರುವುದಾದರೂ ಏನು.?
ಇಡೀ ವಿಶ್ವವೇ ಇಂದು ಮೋದಿ ಅಂದರೆ ತಲೆಬಾಗಿ ನಿಂತಿರುವಾಗ, ಮೋದಿಯ ಬರುವಿಕೆಗಾಗಿ ಪ್ರೀತಿಯಿಂದ ಎದುರು ನೋಡುತ್ತಿರುವಾಗ ಕೇವಲ ಭಾರತದೊಳಗಷ್ಟೇ ನಾಯಿಕೊಡೆಗಳಂತೆ ದಿನಕ್ಕೊಂದರಂತೆ ಮೋದಿ ವಿರೋಧಿ ಶಕ್ತಿಗಳು ತಲೆಯೆತ್ತುತ್ತಿವೆ.
ಎಲ್ಲಾ ರಾಷ್ಟ್ರಗಳೂ ಮೋದಿಯಂತಹ ಒಬ್ಬ ಸಮರ್ಥ ನಾಯಕ ನಮ್ಮ ದೇಶದಲ್ಲೂ ಹುಟ್ಟಲಿ ಎಂದು ಹರಕೆಯಿಡುವಾಗ ಕೇವಲ ಭಾರತದೊಳಗಷ್ಟೇ ಮೋದಿ ವಿರೋಧಿಗಳು ನಿಂತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಅದೇನೇ ಇರಲಿ, ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಮೋದಿಗೆ ಸಮನಾದಂತಹ ಮತ್ತೊಬ್ಬ ಪ್ರಬಲ ಎದುರಾಳಿ ಯಾರು ಎಂಬುದಾಗಿದೆ. ವೈಯಕ್ತಿಕವಾಗಿ ನೋಡಿದರೆ ಮೋದಿಜಿಯ ಅಂತಸ್ತು, ಸ್ವಾಭಿಮಾನಕ್ಕೆ ಸಮನಾದಂತಹ ವ್ಯಕ್ತಿತ್ವ ಎಲ್ಲಾದರೂ ಇರಬಹುದೇ ಅಂತ ಹುಡುಕಿದರೆ ಬಹುಷಃ ಎದುರಾಳಿ ಬಣ ಬಿಡಿ, ಇಡೀಯ ಜಗತ್ತಿನಲ್ಲೇ ಮತ್ತೊಬ್ಬ ಮೋದಿ ಸಿಗಲಾರ.
ಇನ್ನು ರಾಜಕೀಯವಾಗಿ ನೋಡಿದರೆ, ನಾಯಕತ್ವದ ವಿಚಾರದಲ್ಲಿ ಮೋದಿಗೆ ಸಮನಾಗಿರುವಂತಹ ವ್ಯಕ್ತಿ ಶತ್ರುಪಕ್ಷದಲ್ಲಿ ಯಾರಿರುವರು.??
ಮೋದಿ ಒಬ್ಬ ಪ್ರಧಾನಿ ಅನ್ನುವುದ ಬದಿಗಿಟ್ಟು ಕೆಲವು ವರುಷಗಳ ಹಿಂದಿನ ಗುಜರಾತ್ ಸರಕಾರವ ಒಮ್ಮೆ ಗಮನಿಸಿದರೆ, ಮೋದಿ ಆಡಳಿತದಲ್ಲಿ ಗುಜರಾತಿನಲ್ಲಾದಂತಹ ಬದಾಲಾವಣೆಗಳು, ಅಭಿವೃದ್ಧಿ ಇತರ ರಾಜ್ಯದ ಯಾವ ಸರಕಾರದಲ್ಲೂ ಆಗಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಮೊದಲಿನ ಭಾರತಕ್ಕೂ ಮೋದಿ ಪ್ರಧಾನಿಯಾದ ನಂತರದ ಭಾರತಕ್ಕೂ ಎಷ್ಟು ವ್ಯತ್ಯಾಸವಿದೆ?
ಆಡಳಿತ ವಹಿಸಿಕೊಂಡ ಕೆಲವೇ ವರುಷಗಳಲ್ಲಿ ಮೋದಿ ಸರಕಾರ ಜಾರಿಗೆ ತಂದಿರುವ ಅಭಿವೃದ್ದಿ ಯೋಜನೆಗಳ ನಿರಂತರ ಅರುವತ್ತು ವರುಷಗಳ ಆಡಳಿತದಲ್ಲಿ ಕಾಂಗ್ರೇಸ್ ತಂದಿದೆಯೇ? ಕೇವಲ ಅಭಿವೃದ್ದಿಯಷ್ಟೇ ಅಲ್ಲ ದೇಶದ ಭದ್ರತೆಯ ವಿಚಾರದಲ್ಲೂ ಮೋದಿ ಸರಕಾರದ ಮಹತ್ವದ ನಿರ್ಧಾರಗಳ ಶತ್ರುಪಕ್ಷಗಳು ಬಹುಷಃ ಕನಸಿನಲ್ಲಿಯೂ ಊಹಿಸಿರಲಾರವು. 0%Corruption ಹಗರಣದ ವಿಚಾರದಲ್ಲಿ ಶೂನ್ಯ ಸಂಪಾಧನೆ ಮಾಡಿರುವಂತಹ ಒಬ್ಬನೇ ಒಬ್ಬ ನಾಯಕ/ನಾಯಕಿ ಶತ್ರುಪಾಳೆಯದಲ್ಲಿ ಸಿಗಬಹುದೇ?
ಕೇವಲ ಹಗರಣಗಳನ್ನೇ ಧ್ಯೇಯವಾಗಿಸಿದ್ದ ವಂಶಪಾರಂಪರ್ಯ ರಾಜಕಾರಣವನ್ನು ನಿರ್ನಾಮಗೊಳಿಸಿ ಸತತ ಅರುವತ್ತು ವರುಷಗಳ ನಿರಂತರ ದೌರ್ಜನ್ಯದಿಂದ ಅತ್ತು ಅಂಗಲಾಚುತ್ತಿದ್ದ ಭಾರತ ಮಾತೆಯ ಕಣ್ಣೀರಿನ ಕರೆಗೆ ಓಗೊಟ್ಟು ಇಂದು ಮೋದಿ ಅನ್ನುವ ಹೆಮ್ಮೆಯ ಪುತ್ರ ಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಿ, ಸಮಸ್ತ ಭಾರತೀಯ ಪ್ರಜೆಗಳಿಗೆ ಆದರ್ಶವಾಗಿ ನಿಂತಿರುವಾಗ ದುರದೃಷ್ಟಕರವೆಂದರೆ ನಾವಿನ್ನೂ ಮಂಪರಿನಿಂದ ಹೊರಬಂದಿಲ್ಲ. ಅದೇ ಹಳೆಯ ಪೂರ್ವಾಗ್ರಹಪೀಡಿತ ದೃಷ್ಟಿಯಿಂದ ಯಾರ ಕಿವಿಮಾತನ್ನೂ ಆಲಿಸದೇ ಮೋದಿವಿರೋಧಿಗಳ ಜತೆಗೂಡುವ ಜನತೆಗೆ ಜ್ಞಾನೋದಯವಾಗುವುದಾದರೂ ಎಂದು?
ವಿರೋಧಿಗಳಿಲ್ಲದಿದ್ದರೆ ಒಬ್ಬ ವ್ಯಕ್ತಿಯ ಸಾಧನೆಗಳು ಜನತೆಗೆ ಗೋಚರವಾಗದು, ಶತ್ರುಗಳಿಲ್ಲದಿದ್ದರೆ ಒಬ್ಬ ವ್ಯಕ್ತಿ ಶಕ್ತಿಯ ಅರಿವಾಗದು. ಮೋದಿ ಅನ್ನುವ ಒಬ್ಬ ಸಮರ್ಥ ನಾಯಕನ ಸೋಲಿಸುವುದಕ್ಕಾಗಿ ಶತ್ರು ಪಕ್ಷಗಳೆಲ್ಲಾ ಒಂದಾಗಿದೆ ಅಂತಾದರೆ ಚಿಂತಿಸಿ ದೇಶಕ್ಕೆ ಮೋದಿಯ ಅವಶ್ಯಕತೆ ಎಷ್ಟಿದೆ ಅನ್ನುವುದ.
ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ, ನಮ್ಮೆಲ್ಲರ ರಕ್ಷಣೆಗಾಗಿ ನಾವೇನು ಮಾಡಬಹುದು ಅಂತ ಕ್ಷಣಕಾಲವಾದರೂ ಚಿಂತಿಸಿ ಬಂಧುಗಳೇ. ದೇಶದ ಉನ್ನತಿ ಮತ್ತು ಅವನತಿ ನಮ್ಮ ಕೈಯ್ಯಲ್ಲಿದೆ. ಪ್ರತಿಯೊಬ್ಬ ಭಾರತೀಯನ ಕೈಯ್ಯಲ್ಲಿದೆ. ಯಾರದ್ದೋ ತೃಪ್ತಿಗಾಗಿಯೋ, ಇನ್ಯಾವುದೋ ಆಮಿಷಗಳಿಗಾಗಿಯೋ ನಿಮ್ಮ ಸ್ವಾಭಿಮಾನವ ಬಿಟ್ಟುಕೊಡದಿರಿ. ಮಾತೆಯ ಮತ್ತೆ ಕಟುಕರ ಕೈಗೊಪ್ಪಿಸದಿರಿ. ಜಾಗೃತರಾಗಿ ಬಂಧುಗಳೇ ಮಂಪರಿನಿಂದೊಮ್ಮೆ ಹೊರಬಂದು ದೇಶದಲ್ಲಾದ ಬದಲಾವಣೆಗಳ ಅವಲೋಕಿಸಿ.
ಮೂರುಸಾಗರ ನೂರುಮಂದಿರ ದೈವಸಾವಿರವಿದ್ದರೆ,
ಸಿಂಧುವಿದ್ದರೆ ಗಂಗೆಯಿದ್ದರೆ ಗಿರಿಹಿಮಾಲಯವಿದ್ದರೆ,
ವೇದವಿದ್ದರೆ ಶಾಸ್ತ್ರವಿದ್ದರೆ ಘನಪರಂಪರೆಯಿದ್ದರೆ,
ಏನು ಸಾರ್ಥಕ? ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ??
ಬದಲಾಗಿ ಬಂಧುಗಳೇ..!!!! ಭಾರತಕ್ಕಿದು ಬದಲಾವಣೆಯ ಪರ್ವ
ಮತ್ತೊಮ್ಮೆ ಮೋದಿ ಸರಕಾರ ಅನ್ನುವ ನಿಟ್ಟಿನಲ್ಲಿ ದೇಶಕ್ಕಾಗಿ, ದೇಶದ ಭವಿಷ್ಯಕ್ಕಾಗಿ ನಿಸ್ವಾರ್ಥವಾಗಿ ದುಡಿಯಲು ಒಂದಷ್ಟು ಸಮಾನಮನಸ್ಕ ಯುವಸಮಾಜ ಓಗ್ಗೂಡಿದ ಪರಿಣಾಮ ಇಂದು ನಮೋ-2019 ಅನ್ನುವ ಸಂಸ್ಥೆಯೊಂದು ಹುಟ್ಟಿಕೊಂಡಿದೆ.
ನಮ್ಮೊಂದಿಗೆ ಕೈಜೋಡಿಸುವವರು ಕೆಳಗಿನ ಲಿಂಕ್ ತೆರೆದು ಗುಂಪಿಗೆ join ಆಗಿ
https://chat.whatsapp.com/3dPGJAvAsjhF7P5sgxaeHb
ಲೇಖನ: ಯೋಗಿ, ಸುಳ್ಯ
Discussion about this post