ನವದೆಹಲಿ: ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್’ಪಿಎಫ್’ನ 40 ಯೋಧರು ವೀರಸ್ವರ್ಗ ಸೇರಿದ ಘಟನೆಗೆ ಇಂದು ಒಂದು ವರ್ಷವಾಗಿದ್ದು, ಇಡಿಯ ದೇಶವೇ ನಮನ ಸಲ್ಲಿಸುತ್ತಿದೆ.
ಈ ಕುರಿತಂತೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷ ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತೇನೆ. ರಾಷ್ಟ್ರದ ಸೇವೆ ಮತ್ತು ರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು ನೀವು. ನಿಮ್ಮ ಹುತಾತ್ಮತೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Tributes to the brave martyrs who lost their lives in the gruesome Pulwama attack last year. They were exceptional individuals who devoted their lives to serving and protecting our nation. India will never forget their martyrdom.
— Narendra Modi (@narendramodi) February 14, 2020
ಇನ್ನು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, 2019ರಲ್ಲಿ ಈ ದಿನದಂದು ಪುಲ್ವಾಮಾದಲ್ಲಿ ನಡೆದ ಭೀಕರ ದಾಳಿಯ ಸಮಯದಲ್ಲಿ ಹುತಾತ್ಮರಾದ ಸಿಆರ್’ಪಿಎಫ್ ಯೋಧರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಭಾರತ ಅವರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ. ಇಡೀ ರಾಷ್ಟ್ರ ಭಯೋತ್ಪಾದನೆ ವಿರುದ್ಧ ಒಗ್ಗೂಡಿ ನಿಂತಿದೆ. ನಮ್ಮ ಹೋರಾಟವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
Remembering the fallen @crpfindia personnel who were martyred during the dastardly attack in Pulwama(J&K) on this day in 2019.
India will never forget their sacrifice. Entire nation stands united against terrorism and we are committed to continue our fight against this menace.
— Rajnath Singh (@rajnathsingh) February 14, 2020
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದು, ಕಳೆದ ವರ್ಷ ಈ ದಿನ ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಕೆಚ್ಚೆದೆಯ ಸೈನಿಕರ ಸರ್ವೋಚ್ಚ ತ್ಯಾಗಕ್ಕೆ ಕೃತಜ್ಞರಾಗಿದ್ದು, ಇಡಿಯ ರಾಷ್ಟ್ರ ನಮಸ್ಕರಿಸುತ್ತದೆ. ಭಯೋತ್ಪಾದನೆಯನ್ನು ಎಲ್ಲಾ ರೀತಿಯ ಮತ್ತು ಅಭಿವ್ಯಕ್ತಿಗಳಲ್ಲಿ ಸೋಲಿಸುವ ಮತ್ತು ನಿರ್ಮೂಲನೆ ಮಾಡುವ ನಮ್ಮ ಸಂಕಲ್ಪದಲ್ಲಿ ನಾವು ದೃಢವಾಗಿದ್ದೇವೆ ಎಂದಿದ್ದಾರೆ.
A grateful nation salutes the supreme sacrifice of our brave soldiers who lost their lives in the dastardly attack by terrorists in Pulwama, Jammu and Kashmir on this day last year. We remain firm in our resolve to defeat and eliminate terrorism in all its forms & manifestations.
— President of India (@rashtrapatibhvn) February 14, 2020
ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಪುಲ್ವಾಮಾ ದಾಳಿಯ ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ತಾಯಿನಾಡಿನ ಸಾರ್ವಭೌಮತ್ವ ಮತ್ತು ಸಮಗ್ರತೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಧೈರ್ಯಶಾಲಿಗಳು ಮತ್ತು ಅವರ ಕುಟುಂಬಗಳಿಗೆ ಭಾರತ ಎಂದೆಂದಿಗೂ ಕೃತಜ್ಞರಾಗಿರಬೇಕು ಎಂದಿದ್ದಾರೆ.
2019ರ ಫೆಬ್ರವರಿ 14ರ ಮಧ್ಯಾಹ್ನ 3 ಗಂಟೆ ವೇಳೆಗೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳನ್ನು ಮತ್ತು ಸ್ಫೋಟಕಗಳನ್ನು ಹೊತ್ತ ವಾಹನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್’ಪಿಎಫ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ 40 ಯೋಧರು ವೀರಸ್ವರ್ಗ ಸೇರಿದರು.
Discussion about this post