ಜಮ್ಮು: ನಾಲ್ವರು ಯೋಧರನ್ನು ಒಂದೇ ದಿನ ಕಳೆದುಕೊಂಡ ಭಾರತೀಯ ಸೇನೆ ಆರಂಭಿಸಿರುವ ಕಾರ್ಯಾಚರಣೆಯಲ್ಲಿ ಒಂದಡೆ ಅವಿತಿದ್ದ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಯೋಧರು ಅಕ್ಷರಶಃ ಅಟ್ಟಾಡಿಸಿ ಬೇಟೆಯಾಡಿ, ಸೇಡು ತೀರಿಸಿಕೊಳ್ಳುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿನ ಮನೆಯೊಂದರಲ್ಲಿ ಉಗ್ರರು ಅವಿತಿದ್ದಾರೆ ಎಂದು ಖಚಿತ ಮಾಹಿತಿಯನ್ನು ಆಧರಿಸಿ ಯೋಧರು ಕಾರ್ಯಾರಣೆ ನಡೆಸಿದ್ದಾರೆ. ಈ ವೇಳೆ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಎಲ್ಇಟಿ ಕಮಾಂಡರ್ ಶಾಕೋರ್ ಅಹ್ಮದ್ ದಾರ್ ಹಾಗೂ ಪಾಕ್ ಉಗ್ರ ಹೈದರ್ನನ್ನು ನುಗ್ಗಿ ಬಲಿ ಹಾಕಲಾಗಿದೆ.
ಕಳೆದ ಆರು ದಿನಗಳಲ್ಲಿ ಒಟ್ಟು 9 ಉಗ್ರರನ್ನು ಬಲಿ ಪಡೆದಿರುವ ಸೇನೆ, ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಇನ್ನು, 21 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಸೇನೆ ಸಿದ್ದಪಡಿಸಿಕೊಂಡಿದೆ. ಈ ಪಟ್ಟಿಯಲ್ಲಿರುವ ಇಬ್ಬರು ಉಗ್ರರನ್ನು ಈಗಾಗಲೇ ಹತ್ಯೆ ಮಾಡಲಾಗಿದೆ. ಈ ಪಟ್ಟಿಯಲ್ಲಿದ್ದ ಐಎಸ್ಜೆಕೆ ಸಂಘಟನೆಯ ದಾವೂದ್ ಅಹ್ಮದ್ ಹಾಗೂ ಎಲ್ಇಟಿಯ ಶೋಕರ್ ಅಹ್ಮದ್ ದಾರ್ ಈಗಾಗಲೇ ಬಲಿಯಾಗಿದ್ದಾರೆ. ಇನ್ನುಳಿದ 19 ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
Discussion about this post