ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ/ಗದಗ |
ರೈಲ್ವೆ ಟಿಕೇಟ್’ಗಳನ್ನು ಅಕ್ರಮವಾಗಿ ಖರೀದಿಸಿ ಸರಬರಾಜು ಮಾಡುತ್ತಿದ್ದ ಇಬ್ಬರು ಖದೀಮರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಟಿಕೇಟ್ ಮಾರುತ್ತಿದ್ದ ವ್ಯಕ್ತಿಯನ್ನು ಗದಗ ಆರ್’ಎಎಫ್ ಸಬ್ ಇನ್ಸ್’ಪೆಕ್ಟರ್ ಟಿ. ಸಂಧ್ಯಾ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು, ಈತನಿಂದ ಒಟ್ಟು ರೂ.51,039 ಮೌಲ್ಯದ 06 ಸಂಖ್ಯೆಯ ಸಕ್ರಿಯ ಇ-ಟಿಕೆಟ್’ಗಳು ಮತ್ತು ಎಲೆಕ್ಟ್ರಾನಿಕ್ ಸಾಧನವನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು, ಹುಬ್ಬಳ್ಳಿ/ಸಿಐಬಿ ಸಬ್ ಇನ್ಸ್’ಪೆಕ್ಟರ್ ಕೆ. ಶರಣಪ್ಪ ನೇತೃತ್ವದ ತಂಡ, ದಲ್ಲಾಳಿಯೊಬ್ಬನನ್ನು ಬಂಧಿಸಿ, ಒಟ್ಟು ರೂ.18,386 ಮೌಲ್ಯದ 06 ಸಂಖ್ಯೆಯ ಸಕ್ರಿಯ ಇ-ಟಿಕೆಟ್’ಗಳು ಮತ್ತು ಎಲೆಕ್ಟ್ರಾನಿಕ್ ಸಾಧನವನ್ನು ವಶಪಡಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post