ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಈವರೆಗೂ ನೀವು ಏನೇನೋ ಕದ್ದಿರುವ ಸುದ್ದಿ ಕೇಳಿರುತ್ತೀರಿ. ಆದರೆ, ಇಲ್ಲಿ ಕೆಲವು ಭೂಪರು ರೈಲ್ವೇ ಹಳಿಯನ್ನೇ ಕದ್ದು ಗುಜರಿಗೆ ಮಾರಾಟ ಮಾಡಿರುವ ಘಟನೆ ನಡೆದಿದೆ.
ಹೌದು… ಬಿಹಾರದ ಸಮಸ್ತಿಪುರ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಕೋಟ್ಯಂತರ ರೂ. ಬೆಲೆಬಾಳುವ ರೈಲ್ವೇ ಹಳಿಯನ್ನೇ ಕದ್ದ ದುಷ್ಕರ್ಮಿಗಳು ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾರೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದಕ್ಕೆ ಸಹಕಾರ ನೀಡಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
Also read: ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ನಾನೂ ಕೂಡ ಟಿಕೆಟ್ ಆಕಾಂಕ್ಷಿ: ಆಯನೂರು ಮಂಜುನಾಥ್
ಇನ್ನು, ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗಾಗಿ ಇಲಾಖಾ ಮಟ್ಟದ ವಿಚಾರಣಾ ಸಮತಿಯನ್ನು ರಚಿಸಲಾಗಿದೆ.
ಸಮಯಕ್ಕೆ ಸರಿಯಾಗಿ ಪ್ರಕರಣದ ಬಗ್ಗೆ ಇಲಾಖೆಗೆ ಮಾಹಿತಿ ನೀಡದ ಕಾರಣಕ್ಕಾಗಿ ಝಂಜಪುರ ಆರ್’ಪಿಎಫ್ ಹೊರಠಾಣೆ ಪ್ರಭಾರಿ ರೈಲ್ವೆ ವಿಭಾಗದ ಶ್ರೀನಿವಾಸ್ ಮತ್ತು ಮಧುಬನಿಯ ಜಮಾದಾರ್ ಮುಖೇಶ್ ಕುರ್ಮಾ ಸಿಂಗ್ ಸೇರಿದಂತೆ ಇಬ್ಬರು ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















