ಕಲ್ಪ ಮೀಡಿಯಾ ಹೌಸ್ | ಪಹಲ್ಗಾಮ್ |
ಪಹಲ್ಗಾಮ್ ನಲ್ಲಿ #Pahalgam ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ನಡೆದ ದಾಳಿಯಲ್ಲಿ ಸಂತ್ರಸ್ತರಾದವರ ರಕ್ಷಣೆಗೆ ಕರ್ನಾಟಕದಿಂದ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ #Minister Santosh Lad ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ #Home Minister Amith Shah ಅವರಿಗೆ ವಿವರಣೆ ನೀಡಿದರು.
ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರ ಸೂಚನೆ ಮೇರೆಗೆ ಪಹಲ್ಗಾಮ್ ಗೆ ಸಂತೋಷ್ ಲಾಡ್ ಅವರು ಬಂದಿಳಿದಿದ್ದಾರೆ.
ಬೆಳಗ್ಗಿನಿಂದಲೇ ಲಾಡ್ ಅವರು ಮೃತದೇಹವನ್ನು ಇರಿದಿರುವ ಸ್ಥಳಗಳಿಗೆ ತೆರಳಿ ಮೃತದೇಹ ಗುರುತಿಸಲು ಸಂಬಂಧಿಕರಿಗೆ ಸಹಾಯ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜೊತೆಗೆ ಚರ್ಚೆ
ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ #Kashmira CM Omar Abdulla ಅವರೊಂದಿಗೆ ಮಾತನಾಡಿದ ಲಾಡ್ ಅವರು, ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ನೀಡಿದರು.
ಮೃತದೇಹಗಳಿಗೆ ಗೌರವ ನಮನ
ಉಗ್ರರ ದಾಳಿಯಲ್ಲಿ #Terrorist Attack ಮೃತರಾದವರ ಪಾರ್ಥಿವ ಶರೀರವನ್ನು ಶ್ರೀನಗರದಲ್ಲಿ #Shrinagara ಇರಿಸಲಾಗಿದ್ದು, ಈ ವೇಳೆ ಸಚಿವ ಲಾಡ್ ಮೃತದೇಹಗಳಿಗೆ ನಮನ ಸಲ್ಲಿಸಿದರು.
ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರಾಗಿರುವ ಕನ್ನಡಿಗರ ಸಹಾಯಕ್ಕೆ ಸಹಾಯವಾಣಿಯನ್ನು #Helpline Number for Kannadiga ಕರ್ನಾಟಕ ಸರ್ಕಾರ ಆರಂಭಿಸಿದೆ.
ಸಹಾಯವಾಣಿ ಸಂಖ್ಯೆ 080-43344334/ 35 /36 /42 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ನಿಮ್ಮವರು ಕಾಶ್ಮೀರ ಪ್ರವಾಸದಲ್ಲಿದ್ದರೆ ಅವರ ಬಗ್ಗೆ ಮಾಹಿತಿ ನೀಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post